ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರಿಗೆ ಸಿಗುವ ಸಂಭಾವನೆಯ ಅರ್ಧದಷ್ಟು ಭಾಗವೂ ನಾಯಕಿ ನಟಿಯರಿಗೆ ಸಿಗೋದಿಲ್ಲ ಅನ್ನೋ ಮಾತುಗಳು ಈಗಿನಿಂದಲ್ಲ, ಅದು ಹಲವಾರು ವರ್ಷಗಳಂದಲೂ ಕೇಳಿಬರುತ್ತಿದೆ. ಅದೇ ರೀತಿಯಾಗಿ ನಮ್ಮ ಸ್ಯಾಂಡಲ್‍ವುಡ್‍ನಲ್ಲಿ ನಟಿಯರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕೂಗೂ ಸಹ ಅಲ್ಲಲ್ಲಿ ಕೇಳಿ ಬಂದಿರುವುದು ಸಹಜವೇ ಬಿಡಿ.
ಆದ್ರೀಗ ನಮ್ಮ ಸ್ಯಾಡಲ್‍ವುಡ್‍ನಲ್ಲಿ ಬದಲಾವಣೆಯ ಮಹಾ ಪರ್ವವೇ ಶುರುವಾಗಿಬಿಟ್ಟಿದೆ. ಕನ್ನಡದ ನಟಿಯರಿಗೆ ನೀಡಿರುವ ಸಂಭಾವನೆ ಕೇಳಿದ್ರೆ ಒಂದು ಕ್ಷಣ ಧಂಗಾಗುವುದಂತೂ ಖಂಡಿತ.
ಸ್ಯಾಂಡಲ್‍ವುಡ್‍ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದು ರೆಕಾರ್ಡ್ ಮಾಡಿದ್ದವರಲ್ಲಿ ನಟಿ ರಮ್ಯಾ ಮಾತ್ರ. ಆದರೆ ಅವರಿಗೂ ಸೈಡ್ ಹೊಡದು ನಾನು ಯಾವ ನಟಿಯರಿಗೂ ಕಮ್ಮಿ ಇಲ್ಲ ಎಂದು ಬೀಗುತ್ತಿದ್ದಾಳೆ ಇಲ್ಲೋರ್ವ ನಟಿ… ಅವಳು ಯಾರು, ಅಕೆಯ ಹೆಸರೇನು..? ಯಾವ ಸಿನಿಮಾಕ್ಕೆ ಅವಳಿಗೆ ಅಷ್ಟೊಂದು ಹಣ ನೀಡಿದ್ದಾರೆ ಎಂಬ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ…
ಗಾಂಧಿ ನಗರದಲ್ಲಿ ಇದೀಗ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಆ ನಟಿ ಬೇರ್ಯಾರೂ ಅಲ್ಲ, ನಟಿ ರಾಗಿಣಿ ತ್ರಿವೇದಿ…! ಇದು ಎಲ್ಲರಿಗೂ ಶಾಕಿಂಗ್ ನ್ಯೂಸ್ ಆದ್ರೂ ಅದೇ ಸತ್ಯ ನೋಡಿ. ಈಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.. ಬರೋಬ್ಬರಿ 75 ಲಕ್ಷ ರೂಪಾಯಿ..!!
ಜೋಗಿ ಪ್ರೇಮ್ ಅಭಿನಯದ ‘ಗಾಂಧೀಗಿರಿ’ ಚಿತ್ರಕ್ಕೆ ರಾಗಿಣಿ ನಾಯಕ ನಟಿಯಾಗಿ ಆಯ್ಕೆಯಾಗಿದ್ದು, ಈ ಚಿತ್ರದ ನಿರ್ಮಾಪಕರು 75 ಲಕ್ಷ ರೂಪಾಯಿ ಸಂಭಾವನೆ ನೀಡಲು ಮುಂದಾಗಿದ್ದಾರಂತೆ… ಆ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮೊದಲ ಕನ್ನಡದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದೇ ಭಾರಿ ಅಷ್ಟೊಂದು ಸಂಭಾವನೆ ಪಡೆಯುವ ಮೂಲಕ ನಟಿ ರಮ್ಯಾಳ ಸ್ಥಾನವನ್ನು ಕಸಿದು ಆ ಸ್ಥಾನಕ್ಕೆ ನಟಿ ರಾಗಿಣಿ ಆಕ್ರಮಿಸಿದ್ದಾರೆ. ಈ ಕುರಿತು ಮಾತನಾಡಿದ ನಟಿ ರಾಗಿಣಿ ಸಂಭಾವನೆ ಪಡೆದಿರುವ ಕುರಿತು ಯಾವುದೇ ಕಮೆಂಟ್ ಹೇಳುವುದಿಲ್ಲ ಬದಲಾಗಿ ಸ್ಯಾಂಡಲ್‍ವುಡ್‍ನಲ್ಲಿ ನಟಿಯರಿಗೆ ಗೌರವ ನೀಡುತ್ತಿರುವದು ಖೂಷಿ ತಂದಿದೆ ಎಂದು ಹೇಳಿಕೊಂಡಿದ್ದಾರೆ.
Ragini Pics :
POPULAR STORIES :
ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!
ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು
ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!