No menu items!
20.9 C
Munich
Friday, August 21, 2026

ನೀವು ಆಸ್ತಿ ಹಾಗೂ ಅಧಿಕಾರಕ್ಕೆ ಜೋತು ಬಿದ್ದ ಸಂಸ್ಕೃತಿ ನಿಮ್ಮದು: ಆಯನೂರು ಮಂಜುನಾಥ್

Must read

ಶಿವಮೊಗ್ಗ: ಅಧಿಕಾರದ ಆಸೆಗಾಗಿ ಎಂಪಿ ಆದಾಗ ಅಧಿಕಾರ ಬಿಟ್ಟು ಕೊಡದೇ, ರಾಜಕೀಯ ಸಂಕಷ್ಟಕ್ಕೆ ಸಾಥ್ ನೀಡದ ನಿಮ್ಮದು ಯಾವ ಸಂಸ್ಕೃತಿ ? ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರು ಸಂಸದ ರಾಘವೇಂದ್ರಗೆ ತಿರುಗೇಟು ನೀಡಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸದರು ಜಿಲ್ಲಾ ಸಚಿವರ ಸಂಸ್ಕೃತಿಯನ್ನು ಅಳೆದಿದ್ದಾರೆ. ಆ ರೀತಿ‌ ಸಂಸ್ಕೃತಿಯನ್ನು ಅಳೆಯಲು ಹೋಗಬಾರದು. ನಿಮ್ಮ ತಂದೆಯವರಿಗೆ ಈಗ ನಿಮ್ಮದೇ ಪಕ್ಷದ ಈಗ ಬಂಡಾಯ ಎದ್ದಿರುವ ಈಶ್ವರಪ್ಪನವರು ನಿಮ್ಮ ತಂದೆ ಎದೆ ಬಗೆದರೆ ಒಂದು ಕಡೆ ಮಕ್ಕಳು ಇನ್ನೊಂದು ಕಡೆ ಶೋಭಾ ಕರಂದ್ಲಾಜೆ ಎಂದು ಹೇಳಿದರೂ, ನೀವು ಮಕ್ಕಳಾಗಿ ಖಂಡಿಸಲಿಲ್ಲ. ಒಂದು ಸಣ್ಣ ಬೆದರಿಕೆಯನ್ನು ಹಾಕಲಿಲ್ಲ.
ನಿಮ್ಮ ತಂದೆಯವರನ್ನು ಬೈದಾಗ ಅದರಲ್ಲೂ ರಾಜಕೀಯ ಬೇಳೆ ಬೇಯಿಸಿಕೊಂಡ್ರಲ್ಲ. ಅವರು ವಿಷಾದದಿಂದ ಅಧಿಕಾರ ತ್ಯಾಗ, ಇಡೀ ರಾಜ್ಯದ ಜನ ಕಣ್ಣೀರು ಹಾಕಿದಾಗ ನೀವು ನೋವು ಪಡೆಯಲಿಲ್ಲ. ನೀವು ಆಸ್ತಿ ಹಾಗೂ ಅಧಿಕಾರಕ್ಕೆ ಜೋತು ಬಿದ್ದ ಸಂಸ್ಕೃತಿ ನಿಮ್ಮದು ಎಂದು ಪ್ರಶ್ನಿಸಿದರು.
ಅಧಿಕಾರದ ಆಸೆಗಾಗಿ ಎಂಪಿ ಆದಾಗ ಅಧಿಕಾರ ಬಿಟ್ಟು ಕೊಡದೇ, ರಾಜಕೀಯ ಸಂಕಷ್ಟಕ್ಕೆ ಸಾಥ್ ನೀಡದ ನಿಮ್ಮದು ಯಾವ ಸಂಸ್ಕೃತಿ ? ಕೆಜೆಪಿ ಕಟ್ಟಿದಾಗ ನೀವು ಬಿಜೆಪಿ‌ ಸಂಸದರಾಗಿ ಕೆಜೆಪಿಗೆ ಬೆಂಬಲ ನೀಡಿದ್ದು ಯಾವ ಸಂಸ್ಕೃತಿ? ಯಾರು ಮಾಡಿದ ತಪ್ಪಿಗೆ ನಿಮ್ಮ ತಂದೆ ಜೈಲಿಗೆ ಯಾಕೆ ಹೋದರು ಎಂಬುದನ್ನು ಹೇಳಬೇಕು. ಕಳೆದ 15 ವರ್ಷಗಳಿಂದ ದೆಹಲಿಗೆ ಹೋಗಿ ಹಿಂದಿ ಕಲಿಯಲಿಲ್ಲವೇ ನೀವು? ಎಂದು ಆರೋಪಿಸಿದರು.

- Advertisement -spot_img

More articles

- Advertisement -spot_img

Latest article