No menu items!
18 C
Munich
Thursday, June 18, 2026

ಅಶ್ಲೀಲ ವಿಡಿಯೋ ಪ್ರಕರಣ: ನಾಲ್ಕು ಏರ್’ಫೊರ್ಟ್’ನಲ್ಲಿ ಅಲರ್ಟ್ ಘೋಷಣೆ !

Must read

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದ ಸಂಬಂಧ ಸದ್ಯ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಇಂದು ಶರಣಾಗ್ತಾರಾ ಎಂಬ ಪ್ರಶ್ನೆ ಎದ್ದಿದೆ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ತಂದೆ ಹೆಚ್ಡಿ ರೇವಣ್ಣ ಬಂಧನಕ್ಕೆ ಒಳಗಾದ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಎಸ್ಐಟಿ ಸಿದ್ಧತೆ ನಡೆಸುತ್ತಿದೆ. ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸುವ ಸಾಧ್ಯತೆಯಿದೆ. ಸದ್ಯ ಪ್ರಜ್ವಲ್ ಯುಎಇಯಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲುಕೌಟ್ ನೋಟಿಸ್ ಜಾರಿಯಾದ ಹಿನ್ನೆಲೆಯಲ್ಲಿ ವಿಮಾನದಿಂದ ಇಳಿದು ವಲಸೆ ಕೇಂದ್ರದ ಬಳಿಯೇ ಬಂಧನವಾಗುವ ಸಾಧ್ಯತೆಯಿದೆ. ಈಗಾಗಲೇ ಅಬುಧಾಬಿಯಿಂದ ಬೆಳಗ್ಗೆ 6:24ಕ್ಕೆ ಆಗಮಿಸಿದ ವಿಮಾನಲ್ಲಿ ಪ್ರಜ್ವಲ್ ಬಂದಿಲ್ಲ. ದುಬೈನಿಂದ ಆಗಮಿಸುವ ಎರಡನೇ ವಿಮಾನದಲ್ಲೂ ಕೂಡ ಬಂದಿಲ್ಲ, ದುಬೈನಿಂದ ಸಂಜೆ 6:15ಕ್ಕೆ ಮತ್ತೊಂದು ವಿಮಾನ ಬರಲಿದೆ. ಕುವೈಟ್ನಿಂದ 6:40ಕ್ಕೆ ವಿಮಾನ ಬರಲಿದೆ. ಈ ವಿಮಾನಗಳ ಪೈಕಿ ಒಂದು ವಿಮಾನದಲ್ಲಿ ಪ್ರಜ್ವಲ್ ಬಂದು ಶರಣಾಗಬಹುದು ಎನ್ನಲಾಗುತ್ತಿದೆ.

- Advertisement -spot_img

More articles

- Advertisement -spot_img

Latest article