No menu items!
3.9 C
Munich
Wednesday, September 23, 2026

ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ನಾನೇನು ಲಾಬಿ ಮಾಡಿಲ್ಲ: ಎಂ.ಬಿ.ಪಾಟೀಲ್

Must read

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ನಾನೇನು ಲಾಬಿ ಮಾಡಿಲ್ಲ. ಲಾಬಿ ಮಾಡುವ ಸಂದರ್ಭವೂ ಇಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ನಂತರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ. ಪಕ್ಷದಲ್ಲಿ ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ಬಯಸಿದರೆ ಎಲ್ಲವೂ ಆಗುತ್ತದೆ. ಸಂಪುಟ ಪುನಾರಚನೆಯೂ ಆಗುತ್ತದೆ. ಇನ್ನು ಸಿಎಂ ಬದಲಾವಣೆ ವಿಚಾರ ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿದರು.

ಇನ್ನೂ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕರಣದಲ್ಲಿ ನನ್ನ ಯಾವುದೇ ಕೈವಾಡವಿಲ್ಲ ಎಂದರು. ಮುಂದುವರೆದು ಮಾತನಾಡಿ, ಹಲವು ಸಲ ಹಣ ವರ್ಗಾವಣೆ ಆಗುತ್ತದೆ. ನನ್ನ ಇಲಾಖೆಯಲ್ಲೂ ಕೆಲವು ವ್ಯತ್ಯಾಸವಾಗಿದೆ. ಇದನ್ನು ನೋಡಿ ನನಗೂ ಅಚ್ಚರಿಯಾಗಿತ್ತು. ಕೆಲವರನ್ನು ಸಸ್ಪೆಂಡ್ ಮಾಡಿದ್ದೇನೆ. ಹಣ ಬೇರೆ ರಾಜ್ಯಕ್ಕೆ ವರ್ಗಾವಣೆ ಆಗಿರುವ ವಿಚಾರವಾಗಿ ಸಿಎಂ ತನಿಖೆಗೆ ಆದೇಶ ಮಾಡ್ತಾರೆ. ಯಾವ ರೀತಿ ತನಿಖೆ ಎಂಬುದನ್ನು ಅವರು ನಿರ್ಧರಿಸುತ್ತಾರೆ ಎಂದರು.

- Advertisement -spot_img

More articles

- Advertisement -spot_img

Latest article