No menu items!
6.3 C
Munich
Friday, May 1, 2026

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

Must read

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಮತ್ತೆ ಚುರುಕಾಗಿದೆ. ಕಳೆದ ಎರಡು ದಿನಗಳಿಂದ ಅನೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಗುರುವಾರ ಬೆಂಗಳೂರಿನಲ್ಲೂ ಗುಡುಗು ಸಹಿತ ಮಳೆ ದಾಖಲಾಗಿದ್ದು, ತಂಪಾದ ವಾತಾವರಣ ನಿರ್ಮಾಣವಾಗಿದೆ. ಇತ್ತ ಉತ್ತರ ಒಳನಾಡಿನಲ್ಲಿ ಒಣಹವೆಯು ಮುಂದುವರೆದಿದೆ.

ಹವಾಮಾನ ಇಲಾಖೆ ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಉಡುಪಿ, ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ನಾಯಕನಹಟ್ಟಿ, ಭಮರಸಾಗರ, ಚಿತ್ರದುರ್ಗ, ದಾವಣಗೆರೆ, ಥೊಂಡೇಭಾವಿ, ಕಳಸ, ಅಣ್ಣಿಗೆರೆ, ಗದಗ, ಕೃಷ್ಣರಾಜಸಾಗರ, ಶೃಂಗೇರಿ, ಬೇಲೂರು, ಚನ್ನಗಿರಿ, ಗಂಗಾವತಿ, ಬಾಳೆಹೊನ್ನೂರು, ಧರ್ಮಸ್ಥಳ, ಹುಬ್ಬಳ್ಳಿ, ಹುಣಸಗಿ, ಶಿರಹಟ್ಟಿ, ಬರಗೂರು, ಬೆಳ್ತಂಗಡಿ, ಹುಕ್ಕೇರಿ, ಜಯಪುರ, ಕೆ.ಆರ್.ನಗರ, ಕನಕಪುರ, ಮದ್ದೂರು, ಮಾಗಡಿ, ಮುಂಡಗೋಡು, ಕುಶಾಲನಗರ, ನರಗುಂದ, ನಂಜನಗೂಡು, ತರೀಕೆರೆಯಂತಹ ಭಾಗಗಳಲ್ಲಿ ಮಳೆಯಾಗಿದೆ.

- Advertisement -spot_img

More articles

- Advertisement -spot_img

Latest article