Gold Price Today: ಚಿನ್ನ, ಬೆಳ್ಳಿ ದರ ಏರಿಕೆ: ಮಾರುಕಟ್ಟೆಯಲ್ಲಿ ಹೀಗಿದೆ ಇಂದಿನ ರೇಟ್!
ಚಿನ್ನಕ್ಕೆ ಭಾರತದಂತಹ ದೇಶದಲ್ಲಿ ಬೇಡಿಕೆ ಇದ್ದೆ ಇರುತ್ತದೆ. ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಸಂಪತ್ತಿನ ಪ್ರತೀಕವೆಂದೇ ಭಾವಿಸಲಾಗಿದೆ. ಹಾಗಾಗಿ, ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತವೆ. ಚಿನ್ನವನ್ನು ಬಿಸ್ಕತ್, ಗಟ್ಟಿ ಬಂಗಾರ ಇಲ್ಲವೇ ಆಭರಣಗಳ ರೂಪದಲ್ಲಿ ಸಾಮಾನ್ಯವಾಗಿ ಕೊಳ್ಳಲಾಗುತ್ತದೆ.
ಚಿನ್ನವನ್ನು ಸಾಮಾನ್ಯವಾಗಿ ಪ್ರತಿಯೊಬ್ಬರು ಕೊಳ್ಳಲು ಬಯಸುತ್ತಾರೆ, ಕಾರಣ ಆರ್ಥಿಕವಾಗಿ ತಲೆದೋರುವ ಕಷ್ಟದ ಸಂದರ್ಭಗಳಲ್ಲಿ ಚಿನ್ನವು ಆಪದ್ಭಾಂಧವನಂತೆ ಸಹಾಯಕ್ಕೆ ಬರುವುದೇ ಆಗಿದೆ ಎಂದರೆ ತಪ್ಪಿಲ್ಲ. ಬೆಳ್ಳಿ ಬೆಲೆ ಇಂದು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಚಿನ್ನದ ಬೆಲೆಯೂ ಮತ್ತೊಂದು ಹೊಸ ದಾಖಲೆ ಬರೆದಿದೆ.
ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 13 ಸೋಮವಾರದಂದು 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,540 ರೂಪಾಯಿಗೆ ತಲುಪಿದೆ. ಇಂದು ಗ್ರಾಂ ಒಂದಕ್ಕೆ ಬೆಲೆ ಬರೋಬ್ಬರಿ 32 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 30 ರೂಪಾಯಿ ಏರಿಕೆ ಆಗಿದ್ದು, 11,495 ರುಪಾಯಿ ಆಗಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 320 ರೂಪಾಯಿ ಹೆಚ್ಚಳ ಆಗಿ, 1,25,400 ರುಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 300 ರೂ ಏರಿಕೆ ಆಗಿ, 1,14,950 ರೂಪಾಯಿಗೆ ಏರಿಕೆ ಕಂಡಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,540 ರೂ ಇದೆ.
ಬೆಳ್ಳಿಯೂ ಚಿನ್ನದಷ್ಟೇ ವೇಗವಾಗಿ ಬೆಲೆ ಹೆಚ್ಚಳ ಕಾಣುತ್ತಿದೆ. ಗ್ರಾಂ ಒಂದಕ್ಕೆ ಚಿನ್ನದ ಬೆಲೆ 185 ರೂಪಾಯಿಗೆ ತಲುಪಿದೆ. ಕೆಜಿ ಬೆಲೆ 1,85,000 ರೂ ಆಗಿದೆ. ಇಂದು ಬರೋಬ್ಬರಿ 2 ರೂಪಾಯಿ 7 ಪೈಸೆ ಹೆಚ್ಚಳ ಕಂಡಿದೆ. ಅಕ್ಟೋಬರ್ ತಿಂಗಳ 13 ದಿನದಲ್ಲಿ, 1 ಕೆಜಿ ಬೆಳ್ಳಿಗೆ 34 ಸಾವಿರ ರೂ ಹೆಚ್ಚಳವಾಗಿದೆ.