No menu items!
19.6 C
Munich
Tuesday, April 28, 2026

ಉಡುಪಿಗೆ ಪ್ರಧಾನಿ ಮೋದಿ ಆಗಮನ: ಅಭಿಮಾನಿಗಳು ಪಟಾಕಿ, ಧ್ವಜ ಬ್ಯಾಗ್, ನೀರಿನ ಬಾಟಲ್ ತರುವಂತಿಲ್ಲ

Must read

ಉಡುಪಿಗೆ ಪ್ರಧಾನಿ ಮೋದಿ ಆಗಮನ: ಅಭಿಮಾನಿಗಳು ಪಟಾಕಿ, ಧ್ವಜ ಬ್ಯಾಗ್, ನೀರಿನ ಬಾಟಲ್ ತರುವಂತಿಲ್ಲ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಭಗವದ್ಗೀತೆ ಪಠಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆಗಮಿಸಲಿದ್ದಾರೆ. ಪ್ರಧಾನಿಗಳ ಭೇಟಿಯನ್ನು ಗಮನದಲ್ಲಿಟ್ಟುಕೊಂಡು ಉಡುಪಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದೆ.

ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNS) 2023ರ ಸೆಕ್ಷನ್‌ 163ರಡಿ ಆದೇಶ ಹೊರಡಿಸಿದ್ದು, ಪ್ರಧಾನಿ ಸಂಚರಿಸುವ ಪ್ರದೇಶಗಳಲ್ಲಿ ವ್ಯಾಪಾರಿಕ ಚಟುವಟಿಕೆ ತಾತ್ಕಾಲಿಕವಾಗಿ ನಿಲ್ಲಿಸಲು ಸೂಚಿಸಲಾಗಿದೆ. ಹೆಲಿಪ್ಯಾಡ್ ವಠಾರ, ಶ್ರೀಕೃಷ್ಣ ಮಠ ವಠಾರ, ಪ್ರವಾಸಿ ಮಂದಿರದ ಸುತ್ತಮುತ್ತ ಹಾಗೂ ರೋಡ್‌ಶೋ ಮಾರ್ಗದಲ್ಲಿನ ಅಂಗಡಿಗಳು ನವೆಂಬರ್ 28ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮುಚ್ಚಿರಬೇಕು ಎಂದು ನಿರ್ದೇಶಿಸಲಾಗಿದೆ.

ಅದೇ ರೀತಿ ಭದ್ರತಾ ಕಾರಣಕ್ಕಾಗಿ ನವೆಂಬರ್ 28ರಂದು ಸಂಜೆ 6 ಗಂಟೆಯವರೆಗೆ ಉಡುಪಿ ನಗರವನ್ನು 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಉಡುಪಿಯನ್ನು ನೋ ಫ್ಲೈ ಝೋನ್ ಎಂದು ಘೋಷಿಸಲಾಗಿದೆ.

ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ನಗರದಾದ್ಯಂತ ಸಿದ್ಧತೆಗಳು ವೇಗ ಪಡೆದುಕೊಂಡಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳು ರೋಡ್‌ಶೋ ವೀಕ್ಷಿಸುವಾಗ ಶಿಷ್ಟಾಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

- Advertisement -spot_img

More articles

- Advertisement -spot_img

Latest article