ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.

Must read

ದೇಶದ ಬ್ಯಾಂಕ್‍ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶದಲ್ಲಿ ಅಡಗಿ ಕುಳಿತಿರುವ ಮಧ್ಯದ ದೊರೆ ವಿಜಯ್ ಮಲ್ಯ ಅವರ ಸಾಲ ಮನ್ನಾ ಮಾಡಿದಂತೆ ನಮ್ಮ ಸಾಲವನ್ನೂ ಮನ್ನಾ ಮಾಡಿ ಎಂದು ಮಂಡ್ಯ ರೈತರೊಬ್ಬರು ಬ್ಯಾಂಕ್‍ಗೆ ಪತ್ರ ಬರೆದಿದ್ದಾರೆ. ಜಿಲ್ಲೆಯ ಮದ್ದೂರು ತಾಲೂಕಿನ ರೈತ ಮುಖಂಡೆ ಸುನಂದಮ್ಮ ಅವರ ಪುತ್ರ ಸುಧಾಕರ್ ತಮ್ಮ ಏಳು ಲಕ್ಷ ಸಾಲವನ್ನು ಮನ್ನಾ ಮಾಡಿ ಎಂದು ಪಕ್ಕದ ಶಿವಪುರ ಎಸ್‍ಬಿಐ ಬ್ಯಾಂಕ್ ಮ್ಯಾನೆಜರ್‍ಗೆ ಪತ್ರ ಬರೆದಿದ್ದಾರೆ. ಕಳೆದ 2005-06ರಲ್ಲಿ ಟ್ರಾಕ್ಟರ್ ಸಾಲ ಮಾಡಿದ್ದರು. ಅಂದು ಪಡೆದ ಸಾಲ ಈಗ ಅಸಲು ಬಡ್ಡಿ ಸೇರಿ ಏಳು ಲಕ್ಷ ರೂಪಾಯಿ ಆಗಿದೆ. ಸರಿಯಾಗಿ ಮಳೆ ಬಾರದೆ ಇದ್ದ ಕಾರಣ ವ್ಯವಸಾಯಕ್ಕೂ ತೊಂದರೆಯುಂಟಾಗಿದ್ದು, ಸಾಲ ತೀರಿಸಲು ಆಗುತ್ತಿಲ್ಲ ಎನ್ನುತ್ತಿದ್ದಾರೆ ಸುಧಾಕರ್. ಆದರೆ ಈಗ ಎಸ್‍ಬಿಐ ಬ್ಯಾಂಕ್‍ನಲ್ಲಿ ಕೋಟಿಗಟ್ಟಲೆ ಸಾಲ ಮಾಡಿ ಅದನ್ನು ತೀರಿಸಲಾಗದೇ ದೇಶ ಬಿಟ್ಟು ಹೋಗಿರೊ ವಿಜಯ್ ಮಲ್ಯ ಅವರ ಸಾಲ ಮನ್ನಾ ಮಾಡಿರುವ ಹಾಗೆ ನಮ್ಮ ಸಾಲ ಮನ್ನಾ ಮಾಡಿ ಎಂದು ಕೋರಿಕೊಂಡಿದ್ದಾರೆ.

Like us on Facebook  The New India Times

POPULAR  STORIES :

ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!

ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!

50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ

ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!

ಕ್ಯೂನಲ್ಲಿ ನಿಂತಿದ್ದ ಜನರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸ್..!

ವಾಟ್ಸಾಪ್‍ನಿಂದ 10 ವರ್ಷದ ಲವ್ ಬ್ರೇಕಪ್..!

ಬಿಗ್‍ಬಾಸ್ ಸದಸ್ಯರ ಬಗ್ಗೆ ಜನ ಏನ್ ಹೇಳ್ತಾರೆ…?

- Advertisement -spot_img

More articles

- Advertisement -spot_img

Latest article