ಐಟಿ ದಿಗ್ಗಜ ಒರಾಕಲ್ ನಲ್ಲಿ ಭಾರಿ ಲೇಆಫ್: ಭಾರತದಲ್ಲಿ 12 ಸಾವಿರ ಸಿಬ್ಬಂದಿ ವಜಾ

Date:

ಐಟಿ ದಿಗ್ಗಜ ಒರಾಕಲ್ ನಲ್ಲಿ ಭಾರಿ ಲೇಆಫ್: ಭಾರತದಲ್ಲಿ 12 ಸಾವಿರ ಸಿಬ್ಬಂದಿ ವಜಾ

ನವದೆಹಲಿ: ಅಮೆರಿಕ ಮೂಲದ ಐಟಿ ದಿಗ್ಗಜ ಒರಾಕಲ್ ಕಂಪನಿ ಜಾಗತಿಕ ಮಟ್ಟದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ. ಈ ಕ್ರಮದಿಂದ ಭಾರತದಲ್ಲಿನ ಉದ್ಯೋಗಿಗಳ ಮೇಲೂ ಪರಿಣಾಮ ಬಿದ್ದಿದೆ.

ಒರಾಕಲ್ ಭಾರತದಲ್ಲಿ ಸುಮಾರು 12 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ವರದಿಯಾಗಿದೆ. ಜಾಗತಿಕವಾಗಿ ಸುಮಾರು 30 ಸಾವಿರ ಸಿಬ್ಬಂದಿಯನ್ನು ಕಡಿತಗೊಳಿಸಲಾಗಿದೆ ಎನ್ನಲಾಗಿದೆ.

ಇನ್ನೂ ಒಂದು ತಿಂಗಳೊಳಗೆ ಮತ್ತೊಂದು ಹಂತದ ಉದ್ಯೋಗ ಕಡಿತ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಂಸ್ಥೆಯು ತನ್ನ ಸಿಬ್ಬಂದಿಗೆ ಇಮೇಲ್ ಕಳುಹಿಸಿ, ಸಂಸ್ಥೆಯೊಳಗಿನ ಬದಲಾವಣೆಗಳ ಹಿನ್ನೆಲೆಯಲ್ಲಿ ಕೆಲವು ಹುದ್ದೆಗಳು ಅನಗತ್ಯವಾಗುತ್ತಿವೆ ಎಂದು ತಿಳಿಸಿದೆ.

ವಜಾಗೊಂಡ ಉದ್ಯೋಗಿಗಳಿಗೆ 15 ದಿನಗಳ ವೇತನ, ಒಂದು ತಿಂಗಳ ಬಾಕಿ ಸಂಬಳ, ರಜೆ ಹಣ, ಗ್ರಾಚ್ಯುಟಿ ಮತ್ತು ಒಂದು ತಿಂಗಳ ನೋಟಿಸ್ ಅವಧಿಯ ಸಂಬಳ ನೀಡಲಾಗಿದೆ. ಸ್ವಯಂ ರಾಜೀನಾಮೆ ನೀಡುವವರಿಗೆ ಎರಡು ತಿಂಗಳ ಸಂಬಳ ನೀಡಲಾಗುತ್ತಿದೆ.

ಭಾರತದಲ್ಲಿ ಉದ್ಯೋಗ ಕಡಿತ ಹೆಚ್ಚು ಪರಿಣಾಮ ಬೀರಿದ್ದು, ಅಮೆರಿಕದಲ್ಲಿ ಕಾನೂನುಗಳು ಕಟ್ಟುನಿಟ್ಟಾಗಿರುವುದರಿಂದ ಅಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವುದು ಕಷ್ಟಕರವಾಗಿದೆ ಎಂದು ಉದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ, ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತದ ಪರಿಣಾಮವಾಗಿ ಸಾವಿರಾರು ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

Share post:

Subscribe

spot_imgspot_img

Popular

More like this
Related

ಈ ದಿನದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆ: ಯಾವೆಲ್ಲೆಡೆ ಮಳೆ ಸಾಧ್ಯತೆ?

ಈ ದಿನದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆ: ಯಾವೆಲ್ಲೆಡೆ ಮಳೆ...

ಒಂದು ಕಪ್ ‘ಕಾಫಿ’ ಕುಡಿಯುವುದರಿಂದ ಸಿಗುವ ಲಾಭಗಳೇನು ಗೊತ್ತಾ?

ಒಂದು ಕಪ್ ‘ಕಾಫಿ’ ಕುಡಿಯುವುದರಿಂದ ಸಿಗುವ ಲಾಭಗಳೇನು ಗೊತ್ತಾ? ನಮ್ಮ ದೈನಂದಿನ ಜೀವನದಲ್ಲಿ...

ಸರಿಯಾಗಿ ಕೆಲಸಕ್ಕೆ ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಸೂಪರ್ ವೈಸರ್ ಹತ್ಯೆ!

ಸರಿಯಾಗಿ ಕೆಲಸಕ್ಕೆ ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಸೂಪರ್ ವೈಸರ್ ಹತ್ಯೆ! ಬೆಂಗಳೂರು:...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಡಿ.ಕೆ. ಶಿವಕುಮಾರ್ ವಿಶ್ವಾಸ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಡಿ.ಕೆ. ಶಿವಕುಮಾರ್ ವಿಶ್ವಾಸ ದಾವಣಗೆರೆ: ದಿವಂಗತ ಶಾಮನೂರು...