No menu items!
4.9 C
Munich
Saturday, May 2, 2026

ತಾಯಂದಿರು ಭಯ ಮುಕ್ತವಾಗಿ ಬದುಕಬೇಕೆಂದರೆ ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕು:ಬಸವರಾಜ ಬೊಮ್ಮಾಯಿ

Must read

ತಾಯಂದಿರು ಭಯ ಮುಕ್ತವಾಗಿ ಬದುಕಬೇಕೆಂದರೆ ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕು:ಬಸವರಾಜ ಬೊಮ್ಮಾಯಿ

ಬಾಗಲಕೋಟೆ: ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆಯರು ಭಯದಿಂದ ಬದುಕುತ್ತಿದ್ದಾರೆ. ನೇಹಾ ಹಿರೇಮಠ್ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ನಡೆದಿದೆ. ಪ್ರತಿ ಊರಿನಲ್ಲಿಯೂ ಇದು ನಡೆಯುತ್ತಿದೆ. ಯಾವ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತ ಇಲ್ಲವೋ ಅದು ಒಂದು ರಾಜ್ಯ, ವ್ಯವಸ್ಥೆ ಅಂತ ಕರೆಯಲು ಸಾಧ್ಯವಿಲ್ಲ. ಎಲ್ಲಾ ತಾಯಂದಿರು ಭಯ ಮುಕ್ತವಾಗಿ ಬದುಕಬೇಕೆಂದರೆ ಸರ್ಕಾರವನ್ನು ಆದಷ್ಡು ಬೇಗ ಕಿತ್ತೊಗೆಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬಾಗಲಕೋಟೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಹಿಳಾ ಮೋರ್ಚಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ತಾಯಂದಿರು ಅತಿ ಹೆಚ್ಚು ಮನೆಗಳಿಗೆ ಹೋಗಿ ಚುನಾವಣೆಯಲ್ಲಿ ಗೆಲ್ಲಿಸುವ ಶಕ್ರಿ ನಿಮಗಿದೆ. ಚುನಾವಣೆ ಪರಿವರ್ತನೆ ಮಾಡುವ ಶಕ್ತಿ ತಾಯಂದಿರಿಗಿದೆ‌ ಆ ಕೆಲಸ ನೀವು ಮಾಡಬೇಕು. ಕಾಂಗ್ರೆಸ್ ನವರು ಹೆಣ್ಣುಮಕ್ಕಳ ಮೇಲೆ ನಂಬಿಕೆ ಇಲ್ಲ. ಸಿಎಂ ಅಕ್ಕಿ ಕೊಟ್ಟು ಗೃಹ ಲಕ್ಷ್ಮೀ ಕೊಟ್ಡಿದ್ದೆವೆ. ಅವರು ಮತ ಹಾಕುತ್ತಾರೆ ಎನ್ನುವ ನಂಬಿಕೆಯಲ್ಲಿದ್ದಾರೆ‌. ಭಾರತ ದೇಶದಲ್ಲಿ ಒಂದು ಮನೆಯಲ್ಲಿ ಕನಿಷ್ಟ ಮೂರರಿಂದ ಐದಿ ಜನ ಮಹಿಳೆಯರಿದ್ದಾರೆ. ಈಗ ಗೃಹ ಲಕ್ಷ್ಮೀ ಹಣ ಕೊಟ್ಟಿದ್ದು ಒಬ್ಬರಿಗೆ ಉಳಿದವರಿಗೆ ಕೊಡದೇ ಮನೆಯಲ್ಲಿ ಜಗಳ ಹಚ್ಚಿದ್ದಾರೆ. ಮನೆ ಒಡೆದಿದ್ದಾರೆ. ಬಸ್ ನಲ್ಲಿ ಜಡಿ ಹಿಡಿದು ಹೊಡೆದಾಡಲು ಸಿದ್ದರಾಮಯ್ಯ ಅವರೇ ನೇರ ಕಾರಣ. ವಯಸ್ಸಾದವರು, ಆರೋಗ್ಯ ಸರಿ ಇಲ್ಲದವರಿಗೆ ಹತ್ತಲು ಅವಕಾಶ ಕೊಡುವುದಿಲ್ಲ ಎಷ್ಟೊ ಕಡೆ ಕಂಡಕ್ಟರ್ ಗೆ ಒಳಗೆ ಬಿಟ್ಟಿಲ್ಲ ಎಂದು ಹೇಳಿದರು.

- Advertisement -spot_img

More articles

- Advertisement -spot_img

Latest article