No menu items!
12 C
Munich
Saturday, April 25, 2026

‘ಆಮ್ ಆದ್ಮಿ’ಗೆ ಆಘಾತ ; ಕೈಯಲ್ಲಿ ಕಮಲ ಹಿಡಿದ ನೀಲಿ ಕಣ್ಣಿನ ಹುಡುಗ ರಾಘವ್ ಚಡ್ಡಾ 

Must read

ರಾಜಕೀಯದಲ್ಲಿ ಯಾರು ಶತ್ರು ಗಳು ಅಲ್ಲ. ಯಾರು ಮಿತ್ರರು ಅಲ್ಲ. ಇಲ್ಲಿ ಯಾವುದು ಶಾಶ್ವತ ಅಲ್ಲ. ಅಧಿಕಾರ ಮತ್ತು ಹಣ ಇಲ್ಲಿ ಯಾವತ್ತು ಯಾರ ನಿಯತ್ತನ್ನು ಕೂಡ ಬೇಕಾದರು ಬದಲಿಸಬಹುದು. ನಿನ್ನೆ ಅಪ್ಪಿ ಮುದ್ದಾಡಿದವರು ಇಂದು ಎದುರಾಳಿಯಾಗಬಹುದು. ಪರಸ್ಪರ ಕತ್ತಿ ಮಸೆಯುತ್ತಿದ್ದವರು ಹಗೆತನ.. ದ್ವೇಷ ಮರೆತು ಕೈ ಜೋಡಿಸಬಹುದು.

ಸಮಯಕ್ಕೆ ತಕ್ಕಂತೆ ರಾಜಕೀಯದಲ್ಲಿ ನಿಷ್ಠೆ ಬದಲಾಗುತ್ತೆ. ಪ್ರಜಾಪ್ರಭುತ್ವದ ದೇಶದಲ್ಲಿ ಪ್ರಜೆಗಳಿಗಿಂತ ವ್ಯಕ್ತಿ ಮತ್ತು ಲಾಭ ಮುಖ್ಯವಾಗುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಅರವಿಂದ್ ಕ್ರೇಜ್ರಿವಾಲ್ ಅವರ ಅತ್ಯಾಪ್ತ.. ನಂಬಿಕಸ್ಥ.. ರಾಘವ್ ಚಡ್ಡಾ ”ಆಮ್ ಆದ್ಮಿ”ಗೆ ಕೈ ಕೊಟ್ಟಿದ್ದಾರೆ. ತಮ್ಮ ಕೈಯಲ್ಲಿ ಕಮಲವನ್ನು ಹಿಡಿದಿದ್ದಾರೆ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಒಂದು ಕಾಲದಲ್ಲಿ ಬಿಜೆಪಿ ವಿರುದ್ಧ ನಿಗಿ ನಿಗಿ ಕೆಂಡ ಕಾರುತ್ತಿದ್ದ ವ್ಯಕ್ತಿ ಈ ರಾಘವ್ ಚಡ್ಡಾ. 2012ರಿಂದ ಆಪ್ ಜೊತೆ ಇವರ ಸಂಬಂಧ ಇತ್ತು.ಇನ್ನು 2022ರಲ್ಲಿ ರಾಘವ್ ಪಂಜಾಬ್‌ನಿಂದ ರಾಜ್ಯಸಭಾ ಸಂಸದರಾದರು. 33ನೇ ವಯಸ್ಸಿನಲ್ಲಿ ರಾಜ್ಯಸಭೆಯ ಕಿರಿಯ ಸದಸ್ಯರಾಗಿ ಸಂಸತ್ ಪ್ರವೇಶಿಸಿದರು. 2023ರಲ್ಲಿ ಅವರನ್ನು ಸಂಜಯ್ ಸಿಂಗ್ ಬದಲಿಗೆ ರಾಜ್ಯಸಭೆಯಲ್ಲಿ ಎಎಪಿಯ ನಾಯಕರನ್ನಾಗಿ ನೇಮಿಸಲಾಯಿತು.

ಹೀಗೆ ಹಂತ ಹಂತವಾಗಿ ಮೇಲೆ ಬರುತ್ತಿದ್ದ ರಾಘವ್ ಚಡ್ಡಾ ಮುಂಬರುವ ದಿನಗಳಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆ ಎನ್ನುವ ನಂಬಿಕೆ ಹಲವರಲ್ಲಿತ್ತು. ಎರಡು ವರ್ಷಗಳ ಹಿಂದೆ ಆ ತರಹದ ವಾತಾವರಣವೂ ಇತ್ತು. ಆದರೆ ಈಗ ನೋಡಿದರೆ 15 ವರ್ಷದ ಸಂಬಂಧವನ್ನು ಎಡಗಾಲಿನಲ್ಲಿ ಒದ್ದು ರಾಘವ್ ಚಡ್ಡಾ ಹೊರಗಡೆ ಬಂದಿದ್ದಾರೆ. ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ.

ತಾವು ಹೋಗುವುದಲ್ಲದೇ ತಮ್ಮ ಜೊತೆ ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮಜಿತ್ ಸಿಂಗ್ ಸಹ್ನಿ ಮತ್ತು ಸ್ವಾತಿ ಮಲಿವಾಲ್, ಅವರನ್ನು ಒಳಗೊಂಡಂತೆ 6 ಸಂಸದರನ್ನು ಕೂಡ ರಾಘವ್ ಚಡ್ಡಾ ಕರೆದುಕೊಂಡು ಹೋಗಿದ್ಧಾರೆ.

ಇನ್ನೂ ತಮ್ಮ ಈ ನಿರ್ಧಾರದ ಕುರಿತು ಮಾತನಾಡಿರುವ ರಾಘವ್ ಚಡ್ಡಾ ನನ್ನ ರಕ್ತ ಮತ್ತು ಬೆವರನ್ನು ಆಮ್ ಆದ್ಮಿ ಪಕ್ಷಕ್ಕೆ ನೀಡಿದ್ದೆ, ಆದರೆ ಈಗ ಅವರ ನೈತಿಕತೆ ಬದಲಾಗಿದೆ ಎಂದು ಹೇಳಿದ್ದಾರೆ. ದೇಶದ ಹಿತಾಸಕ್ತಿಗಾಗಿ ಅವರು ಕೆಲಸ ಮಾಡುತ್ತಿಲ್ಲ, ಬದಲಿಗೆ ವೈಯಕ್ತಿಕ ಲಾಭಕ್ಕೆ ಕೆಲಸ ಮಾಡುತ್ತಿದ್ಧಾರೆ ಎಂದು ಹೇಳಿರುವ ರಾಘವ್ ಚಡ್ಡಾ ನಾನು ತಪ್ಪು ಪಕ್ಷದಲ್ಲಿದ್ದೆ ಎನ್ನುವುದು ನನ್ನ ವೈಯಕ್ತಿಕ ಭಾವನೆ, ಹೀಗಾಗಿ ಈಗ ನಾನು ಆಮ್ ಆದ್ಮಿ ಪಕ್ಷದಿಂದ ದೂರವಾಗಿ ಜನರ ಬಳಿ ಹೋಗುತ್ತಿದ್ದೇನೆ ಎಂದು ಹೇಳಿದ್ಧಾರೆ.

- Advertisement -spot_img

More articles

- Advertisement -spot_img

Latest article