No menu items!
18.2 C
Munich
Tuesday, April 28, 2026

ಮನೆಯಲ್ಲೇ ಸುಲಭ ಉಪಾಯ: 50 ರೂ.ನಲ್ಲಿ ಗೆದ್ದಲುಗಳು ಮನೆಗೆ ಬರದಂತೆ ಮಾಡುವ ಸರಳ ವಿಧಾನ

Must read

ಮನೆಯಲ್ಲೇ ಸುಲಭ ಉಪಾಯ: 50 ರೂ.ನಲ್ಲಿ ಗೆದ್ದಲುಗಳು ಮನೆಗೆ ಬರದಂತೆ ಮಾಡುವ ಸರಳ ವಿಧಾನಗಳು

ಮಳೆಗಾಲ ಆರಂಭವಾದಾಗ ಮನೆಗಳಲ್ಲಿ ತೇವಾಂಶ ಹೆಚ್ಚಾಗಿ, ಮರದ ಬಾಗಿಲುಗಳು, ಕಿಟಕಿಗಳು ಹಾಗೂ ಪೀಠೋಪಕರಣಗಳಿಗೆ ಗೆದ್ದಲು ಹಿಡಿಯುವ ಸಮಸ್ಯೆ ಹೆಚ್ಚಾಗುತ್ತದೆ. ಒಮ್ಮೆ ಗೆದ್ದಲು ಅಂಟಿಕೊಂಡರೆ ದುಬಾರಿ ಪೀಠೋಪಕರಣಗಳಿಗೂ ಹಾನಿಯಾಗುವುದಷ್ಟೇ ಅಲ್ಲ, ಗೋಡೆಗಳ ಬಿರುಕುಗಳ ಮೂಲಕ ಇಡೀ ಮನೆಗೆ ಹರಡಿ ಸೌಂದರ್ಯಕ್ಕೂ ಧಕ್ಕೆ ತರುತ್ತವೆ.ಸಾಮಾನ್ಯವಾಗಿ ಗೆದ್ದಲು ನಿವಾರಣೆಗೆ ದುಬಾರಿ ರಾಸಾಯನಿಕಗಳು ಅಥವಾ ಪೆಸ್ಟ್ ಕಂಟ್ರೋಲ್ ಸೇವೆಗಳನ್ನು ಬಳಸಲಾಗುತ್ತದೆ. ಆದರೆ ಅಡುಗೆಮನೆಯಲ್ಲಿ ಸಿಗುವ ಕಡಿಮೆ ವೆಚ್ಚದ ಸಾಮಗ್ರಿಗಳನ್ನು ಬಳಸಿ ಸಹ ಗೆದ್ದಲು ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.ಇಂಗು (ಹಿಂಗು): ಇಂಗಿನ ತೀವ್ರ ವಾಸನೆಗೆ ಗೆದ್ದಲುಗಳು ತಾಳಲಾರವು. ಇಂಗನ್ನು ನೀರಿನಲ್ಲಿ ಬೆರೆಸಿ ತಯಾರಿಸಿದ ದ್ರಾವಣವನ್ನು ಗೆದ್ದಲು ಇರುವ ಜಾಗದಲ್ಲಿ ಸಿಂಪಡಿಸಿದರೆ ಅವು ದೂರವಾಗುತ್ತವೆ.ಕೆಂಪು ಮೆಣಸಿನ ಪುಡಿ: ಮೆಣಸಿನಕಾಯಿ ಖಾರದ ಗುಣದಿಂದ ಗೆದ್ದಲುಗಳಿಗೆ ಹಾನಿಯಾಗುತ್ತದೆ. ಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಅಥವಾ ಪೇಸ್ಟ್ ರೂಪದಲ್ಲಿ ರಂಧ್ರಗಳಲ್ಲಿ ಹಚ್ಚಿದರೆ ಪರಿಣಾಮಕಾರಿಯಾಗುತ್ತದೆ.ಲವಂಗ: ಲವಂಗದ ವಾಸನೆ ಕೀಟಗಳನ್ನು ದೂರವಿಡಲು ಸಹಾಯಕ. ಲವಂಗವನ್ನು ನೀರಿನಲ್ಲಿ ನೆನೆಸಿ ಸಿದ್ಧಪಡಿಸಿದ ದ್ರಾವಣವನ್ನು ಸ್ಪ್ರೇ ಮಾಡಿದರೆ ಗೆದ್ದಲು ಹರಡುವಿಕೆ ಕಡಿಮೆಯಾಗುತ್ತದೆ.ಉಪ್ಪಿನ ದ್ರಾವಣ: ಬಿಸಿ ನೀರಿನಲ್ಲಿ ಉಪ್ಪು ಬೆರೆಸಿ ಗಾಢ ದ್ರಾವಣ ತಯಾರಿಸಿ ಬಿರುಕುಗಳಿಗೆ ಸುರಿಸಿದರೆ ಗೆದ್ದಲುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.ಬೇವಿನ ಎಲೆಗಳು: ಬೇವಿನ ಎಲೆಗಳು ನೈಸರ್ಗಿಕ ಕೀಟನಾಶಕವಾಗಿವೆ. ಬೇವಿನ ಎಲೆ ಪುಡಿಯನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಿದರೆ ಗೆದ್ದಲು ಮತ್ತೆ ಕಾಣಿಸಿಕೊಳ್ಳುವುದನ್ನು ತಡೆಯಲು ಸಹಕಾರಿ.ಈ ಸರಳ ಮನೆಮದ್ದಿನ ವಿಧಾನಗಳನ್ನು ನಿಯಮಿತವಾಗಿ ಅನುಸರಿಸಿದರೆ ಕಡಿಮೆ ವೆಚ್ಚದಲ್ಲಿ ಗೆದ್ದಲು ಸಮಸ್ಯೆಯನ್ನು ನಿಯಂತ್ರಿಸಬಹುದು.

- Advertisement -spot_img

More articles

- Advertisement -spot_img

Latest article