No menu items!
19.6 C
Munich
Friday, May 1, 2026

ಮಹಿಳೆಯರಿಗೆ ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ದೌರ್ಜನ್ಯ: ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್

Must read

ಮಹಿಳೆಯರಿಗೆ ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ದೌರ್ಜನ್ಯ: ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್ ಗಳೂರು: ಪತಿಯಿಂದ ದೂರವಾಗಿದ್ದ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ನಂತರ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.43 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಹನಿಯೂರಿನ ಚಂದ್ರೇಗೌಡ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತ ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯನಾಗಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ತಾನು ಮೇಕಪ್ ಕಲಾವಿದೆಯಾಗಿದ್ದು, ಪತಿಯಿಂದ ದೂರವಾಗಿ ಮಗಳೊಂದಿಗೆ ವಾಸಿಸುತ್ತಿದ್ದಾಳೆ. 2021ರಲ್ಲಿ ಪರಿಚಯವಾದ ಆರೋಪಿ, ತಾನು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಮೇಕಪ್ ಕೆಲಸಕ್ಕಾಗಿ ಸಂಪರ್ಕಿಸುವುದಾಗಿ ಹೇಳಿ ಮೊಬೈಲ್ ಸಂಖ್ಯೆ ಪಡೆದಿದ್ದ. ನಂತರ ಮನೆಯತ್ತ ಆಗಾಗ ಭೇಟಿ ನೀಡಿ, ತಾನು ಉಪನ್ಯಾಸಕನಾಗಿದ್ದು ಉತ್ತಮ ಸಂಬಳ ಹೊಂದಿದ್ದೇನೆ ಹಾಗೂ ವಿಚ್ಛೇದನ ಪಡೆದಿದ್ದೇನೆ ಎಂದು ನಂಬಿಸಿ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ.ಕಾಲಕ್ರಮೇಣ ಆರೋಪಿ ಮಹಿಳೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದಾನೆ. ಬಳಿಕ, ಅವರ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ರಹಸ್ಯವಾಗಿ ವಿಡಿಯೋ ಮಾಡಿ, ತನ್ನ ಮಾತಿಗೆ ಒಪ್ಪದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಇದಲ್ಲದೆ, ಆರೋಪಿ ಎಸ್ಪಿ ಹುದ್ದೆಯ ನಕಲಿ ಗುರುತಿನ ಚೀಟಿ ತಯಾರಿಸಿಕೊಂಡು ಟೋಲ್‌ಗೇಟ್‌ಗಳಲ್ಲಿ ಪೊಲೀಸರಂತೆ ವರ್ತಿಸುತ್ತಿದ್ದನು. ವಕೀಲ ಹಾಗೂ ಮಾಧ್ಯಮ ಪ್ರತಿನಿಧಿ ಎಂದು ಕೂಡ ನಕಲಿ ಐಡಿಗಳನ್ನು ಬಳಸುತ್ತಿದ್ದನೆಂಬ ಆರೋಪವೂ ಕೇಳಿಬಂದಿದೆ. ಇತ್ತೀಚೆಗೆ ಮಕ್ಕಳ ರಕ್ಷಣಾ ಆಯೋಗದ ನ್ಯಾಯಾಧೀಶನಂತೆ ಬಿಂಬಿಸಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.2021ರಿಂದ ಈವರೆಗೆ ಸುಮಾರು 5 ಲಕ್ಷ ರೂ. ಹಣ ಪಡೆದುಕೊಂಡಿದ್ದರೂ, ಅದನ್ನು ಹಿಂತಿರುಗಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಆರೋಪಿ ಮೊಬೈಲ್ ಪರಿಶೀಲನೆ ವೇಳೆ ಹಲವಾರು ಮಹಿಳೆಯರೊಂದಿಗೆ ಚಾಟ್ ನಡೆಸಿ, ವಿಡಿಯೋಗಳನ್ನು ದಾಖಲಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಮದುವೆಯ ಭರವಸೆ ನೀಡಿ ಹಲವರನ್ನು ವಂಚಿಸಿರುವ ಶಂಕೆ ವ್ಯಕ್ತವಾಗಿದೆ.ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article