No menu items!
9.3 C
Munich
Tuesday, May 5, 2026

2025 ದಸರಾ: ₹43 ಕೋಟಿ ಖರ್ಚು: 7 ತಿಂಗಳ ಬಳಿಕ ಲೆಕ್ಕ ಬಹಿರಂಗ

Must read

2025 ದಸರಾ: ₹43 ಕೋಟಿ ಖರ್ಚು: 7 ತಿಂಗಳ ಬಳಿಕ ಲೆಕ್ಕ ಬಹಿರಂಗ

ಮೈಸೂರು: ಕಳೆದ ವರ್ಷದ ನಾಡಹಬ್ಬ ಮೈಸೂರು ದಸರಾ ಆಚರಣೆಯ ಖರ್ಚು ವಿವರವನ್ನು ಮೈಸೂರು ಜಿಲ್ಲಾಡಳಿತ ಇದೀಗ ಬಹಿರಂಗಪಡಿಸಿದೆ. ದಸರಾ ಮುಗಿದು ಸುಮಾರು ಏಳು ತಿಂಗಳು ಕಳೆದ ಬಳಿಕ ಈ ವೆಚ್ಚದ ಲೆಕ್ಕವನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು 43 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಇದಲ್ಲದೆ, ಯುವ ದಸರಾದ ಕಾರ್ಯಕ್ರಮಗಳಿಗೆ ಹೆಚ್ಚು ವೆಚ್ಚವಾಗಿದ್ದು, ಅದಕ್ಕಾಗಿ 16 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಸಿವಿಲ್ ಕಾಮಗಾರಿಗಳಿಗೆ 6 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಏರ್ ಶೋಗೆ 55 ಲಕ್ಷ ರೂಪಾಯಿ ನೀಡಲಾಗಿದೆ.
ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರದಿಂದ 30 ಕೋಟಿ ರೂಪಾಯಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂಪಾಯಿ, ಪ್ರಾಯೋಜಕತ್ವದಿಂದ 1.81 ಕೋಟಿ ರೂಪಾಯಿ ಮತ್ತು ಟಿಕೆಟ್ ಮಾರಾಟದಿಂದ 3.21 ಕೋಟಿ ರೂಪಾಯಿ ಸೇರಿ ಒಟ್ಟು 45.3 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ.
ಇನ್ನು ವಿವಿಧ ಕಾರ್ಯಕ್ರಮಗಳ ವೆಚ್ಚದಲ್ಲಿ ಸ್ವಾಗತ, ಆಮಂತ್ರಣ ಹಾಗೂ ಸ್ಥಳಾವಕಾಶಕ್ಕೆ 6 ಕೋಟಿ ರೂಪಾಯಿ, ಮೆರವಣಿಗೆಗೆ 1.60 ಕೋಟಿ ರೂಪಾಯಿ, ಪಂಜಿನ ಕವಾಯತಿಗೆ 1.48 ಕೋಟಿ ರೂಪಾಯಿ, ಸ್ತಬ್ಧಚಿತ್ರಗಳಿಗೆ 7 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ರೈತ ದಸರಾದಿಗಾಗಿ 52 ಲಕ್ಷ ರೂಪಾಯಿ, ಸಾಂಸ್ಕೃತಿಕ ದಸರಾದಿಗಾಗಿ 3 ಕೋಟಿ ರೂಪಾಯಿ, ಲಲಿತಕಲೆಗೆ 22 ಲಕ್ಷ ರೂಪಾಯಿ ಹಾಗೂ ಕವಿಗೋಷ್ಠಿಗೆ 70 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

- Advertisement -spot_img

More articles

- Advertisement -spot_img

Latest article