ನಿಜವಾದ ಪ್ರೀತಿಗೆ ಎಂದೂ ಸಾವಿಲ್ಲ..! ಎಂದೂ ಅವನನ್ನು ಬಿಟ್ಟಿರದ ಅವಳೇಕೆ ದೂರಾದಳು..?!

1
110

ಅವಳು ದೀಪಾ, ಅರುಣ್ ನ ಪಕ್ಕದ ಮನೆಯವಳು. ಚಿಕ್ಕಂದಿನಿಂದಲೂ ಅರುಣ್ ನ ಜೊತೆಯಲ್ಲೇ ಆಡಿ ಬೆಳೆದವಳು. ಯಾವತ್ತೂ ಒಬ್ಬರನೊಬ್ಬರು ಬಿಟ್ಟು ಇರ್ತಾ ಇರ್ಲಿಲ್ಲ..! ಇಬ್ಬರೂ ಒಂದೇ ಕ್ಲಾಸ್. ಆದ್ರಿಂದ , ಒಟ್ಟಿಗೆ ಶಾಲೆಗೆ ಹೋಗೋದು, ಬರೋದು, ಹೋಮ್ ವರ್ಕ್ ಮಾಡೋದು, ಓದೋದನ್ನು ಮಾಡ್ತಾ ಇದ್ರು..! ಹೈಸ್ಕೂಲ್ ಮುಗಿದ ಮೇಲೆ ಇಬ್ಬರೂ ಒಂದೇ ಕಾಲೇಜ್ ಗೆ ಸೇರಿದ್ರು, ಒಂದೇ ಕಾಂಬೀನೇಷನ್ ಕೂಡ..! ಕಾಲೇಜಿಗೂ ಒಟ್ಟಿಗೇ ಹೋಗಿ ಬರೋದನ್ನು ಮಾಡಿದ್ರು. ಪಿಯೂ ಆದ ಮೇಲೆ ಡಿಗ್ರಿಯನ್ನೂ ಒಂದೇ ಕಾಲೇಜಲ್ಲಿ ಮುಗಿಸಿದ್ರು..! ಪದವಿ ಮುಗಿದ ಮೇಲೆ ಇಬ್ಬರೂ ಎಂಎಸ್ಸಿ ಮಾಡೋಕೆ ಹುಟ್ಟೂರನ್ನು ಬಿಟ್ಟು ಬೆಂಗಳೂರಿಗೆ ಬಂದ್ರು. ದೀಪಾಳ ಅಪ್ಪ-ಅಮ್ಮನಿಗೆ ಅರುಣ್ ಹೇಗಿದ್ರೂ ದೀಪಾಳ ಜೊತೆ ಇರ್ತಾನಲ್ಲಾ ಅನ್ನೋ ದೈರ್ಯ..! ಹಾಸ್ಟೆಲ್ ಸರಿ ಆಗಲ್ಲ ಅಂತ ದೀಪಾ ಪಿಜಿಗೆ ಸೇರಿದ್ಲು. ಅವಳ ಪಿಜಿಗೆ ಹತ್ತಿರವೇ ಫ್ರೆಂಡ್ಸ್ ಜೊತೆ ಅರುಣ್ ಒಂದು ಬಾಡಿಗೆ ರೂಂ ಮಾಡ್ದ.
ಚಿಕ್ಕಂದಿನ ಸ್ನೇಹ ಡಿಗ್ರಿ ಮುಗಿಯುವಷ್ಟರಲ್ಲಿ ಪ್ರೀತಿಯಾಗಿ ಅರಳಿತ್ತು..! ಆದರೆ ಇಬ್ಬರೂ ಪ್ರೇಮ ನಿವೇಧನೆ ಮಾಡಿಕೊಂಡಿರ್ಲಿಲ್ಲ..! ಮಾಸ್ಟರ್ ಡಿಗ್ರಿಗೆ ಬಂದ ಮೇಲೆ ಅರುಣ್ ದೀಪಾಗೆ ಪ್ರಪೋಸ್ ಮಾಡ್ದ..! ಸ್ವಲ್ಪ ದಿನ ಆಟ ಆಡಿಸಿ ಅರುಣ್ ನ ಪ್ರೀತಿಯನ್ನು ಒಪ್ಪಿಕೊಂಡ್ಲು ದೀಪಾ. ಅರುಣ್ ಜೊತೆಯಲ್ಲೇ ಬೈಕೇರಿ ಕ್ಲಾಸ್ ಗೆ ಹೋಗೋದು, ಅವನೊಡನೇ ಕ್ಯಾಂಟಿನ್, ಅವನೊಡನೇ ಕಾಫಿ, ಅವನೊಡನೇ ಊಟ ಎಲ್ಲವೂ ಮೊದಲಂತೆಯೇ ಇತ್ತು..! ಊರಿಗೂ ಒಟ್ಟಿಗೇ ಹೋಗಿ ಬರ್ತಾ ಇದ್ರು..! ಅವರು ಒಬ್ಬರನೊಬ್ಬರು ಪ್ರೀತಿಸ್ತಾ ಇದ್ದಾರೆ ಅಂತ ಎರಡೂ ಮನೆಯಲ್ಲೂ ಅನಿಸಲೇ ಇಲ್ಲ..! ಏಕೆಂದರೆ ಮೊದಲು ಫ್ರೆಂಡ್ಸ್ ಆಗಿರುವಾಗ ಹೇಗೆ ಇದ್ದರೋ ಅದೇ ರೀತಿ ಪ್ರೇಮಿಗಳಾದ ಮೇಲೂ ಇದ್ರು..!
ದೀಪಾ ಮತ್ತು ಅರುಣ್ ರನ್ನು ನೋಡಿ ಎಲ್ಲಾ ಹುಡುಗರು ಹೊಟ್ಟೆ ಉರ್ಕೊಳ್ತಾ ಇದ್ರು..! ಅರುಣ್ ಗೆ ಯಾರೇ ತಮಾಷೆಗಾಗಿ ರೇಗಿಸಿದ್ರೂ ದೀಪಾ ಕೆಂಡಮಂಡಲ ಆಗ್ತಾ ಇದ್ಲು..! ದೀಪಾಳ ಬಗ್ಗೆ ಯಾರು ಮಾತಾಡಿದ್ರೂ ಅರುಣ್ ಜಗಳ ಮಾಡ್ತಾ ಇದ್ದ..! ಇಬ್ಬರೂ ಓದುವುದರಲ್ಲೂ ಮುಂದೆ..! ದೀಪಾಳ ಜೊತೆಯೇ ಹೆಚ್ಚು ಕಾಲ ಕಳೀತಾ ಇದ್ದ ಅರುಣ್ ಕೆಲವೊಮ್ಮೆ ಫ್ರೆಂಡ್ಸ್ ಜೊತೆ ಪಾರ್ಟಿ ಗೀರ್ಟಿ ಅಂತ ಹೋಗ್ತಾ ಇದ್ದ..! ರಾತ್ರಿ ದೀಪಾಳನ್ನು ಪಿಜಿಗೆ ಬಿಟ್ಟು ಗೆಳೆಯರೊಡನೆ ಪಾರ್ಟಿಗೆ ಹೋದ..! ಮರುದಿನ ಪಾರ್ಟಿಗೆ ಹೋಗಿದ್ದನ್ನೂ ಎಲ್ಲರೂ ಒತ್ತಾಯ ಮಾಡಿ ಬೀರ್ ಕುಡಿಸಿದ್ದನ್ನೂ ದೀಪಾಳಿಗೆ ಹೇಳಿದ..! ದೀಪಾ ಇನ್ಮುಂದೆ ಕುಡಿ ಬೇಡ ಅಂತ ಬುದ್ದಿ ಹೇಳಿದ್ಲು..! ಅವತ್ತೇ ಸಂಜೆ ಅವರ ಕ್ಲಾಸ್ ನ ಪ್ರವೀಣ್ ದೀಪಾಗೆ ಫೋನ್ ಮಾಡ್ದ. ದೀಪಾ ನೀನು ತಪ್ಪು ತಿಳಿಯಲ್ಲ ಅಂದ್ರೆ ಒಂದು ಮಾತೇಳ್ಬೇಕೆಂದು ಬಾಳ ಮುಗ್ಧನಂತೆ ಮಾತಾಡ್ದ..! ಹೇಳು, ತಪ್ಪು ತಿಳಿಯುವಂತಹದ್ದೇನಿದೆ..? ಅಂತ ಸಹಜವಾಗಿಯೇ ಹೇಳಿದ್ಲು ದೀಪಾ..! “ ನೀನು ಏನ್ ಅನ್ಕೊಂಡ್ರೂ ಪರವಾಗಿಲ್ಲ, ನಿನ್ನ ಒಳ್ಳೇದಕ್ಕೆ ಹೇಳ್ತಾ ಇದ್ದೀನಿ ಅರುಣ್ ಸರಿ ಇಲ್ಲ..! ದಯವಿಟ್ಟು ಅವನಿಂದ ದೂರಾಗು” ಅಂದ ಪ್ರವೀಣ್ ಇನ್ನೂ ಪೂರ್ತಿ ಮಾತು ಮುಗಿಸಿರಲಿಲ್ಲ..! ಅಷ್ಟೋತ್ತಿಗೇ ಸಿಟ್ಟಿಗೆದ್ದು, ತೆಪ್ಪಗೇ ಫೋನ್ ಇಡೋ…! ಇನ್ನೊಂದು ಮಾತಾಡಿದ್ರೆ ಗ್ರಹಚಾರ ಬಿಡಿಸಿ ಬಿಡ್ತೀನಿ..! ನಿನಗೇನೋ ಗೊತ್ತು ಅರುಣ್ ಬಗ್ಗೆ? ನಾನು ಚಿಕ್ಕಂದಿನಿಂದಲೇ ಅವನನ್ನು ನೋಡಿದ್ದೇನೆ. ಅವನ ಬಗ್ಗೆ ಮಾತಾಡೊ ಯೋಗ್ಯತೆ ನಿನಗಿಲ್ಲ ಅಂತ ಬೈದು ಕಾಲ್ ಕಟ್ ಮಾಡಿದ್ಲು..!
ಮರುದಿನ ಅರುಣ್ ಜೊತೆಯಲ್ಲೇ ಕ್ಯಾಂಪಸ್ ಗೆ ಹೋದ ದೀಪಾ, ಎಲ್ಲರ ಮುಂದೆಯೇ ಬಾರಾಲೋ ಪ್ರವೀಣ ಇಲ್ಲಿ ಅಂತ ಕರೆದ್ಲು..! ಪಕ್ಕದಲ್ಲೇ ಇದ್ದ ಅರುಣ್ ಗೂ, ಅಲ್ಲೇ ಇದ್ದ ಎಲ್ಲರಿಗೂ ಆಶ್ಚರ್ಯ..! ಯಾವತ್ತೂ ಇಷ್ಟು ಜೋರು ಮಾತಾಡದೇ ಇದ್ದ ದೀಪಾ ಇವತ್ತು ಈ ಪಾಟಿ ಕಿರುಚುತ್ತಿದ್ದಾಳಲ್ಲಾ ಅಂತ..! ಹೆದರಿ ನಿಂತ ಪ್ರವೀಣ್ ನ ಬಳಿ ಇವಳೇ ಹೋಗಿ ಕೊರಳ ಪಟ್ಟಿ ಇಟ್ಕೊಂಡ್ಲು..! ” ನಿನ್ನೆ ಏನೋ ಫೋನ್ ಮಾಡಿ ಅರುಣ್ ಬಗ್ಗೆ ಏನೋ ಹೇಳ್ತಾ ಇದ್ದಿಯಲ್ಲಾ..?! ಈಗ ಹೇಳು. ನಿನ್ನೆ ನಾನು ಪೂರ್ತಿ ಕೇಳಿಸಿಕೊಂಡಿಲ್ಲ” ಅಂದ್ಲು..! ಅವನು ಬಾಯಿ ತೆರೆಯುವ ಮೊದಲೇ ನಿನ್ನೆ ಫೋನ್ ಮಾಡಿ ಅವನು ಮಾತಾಡಿದ್ದನ್ನು ಗಟ್ಟಿಯಾಗಿ ಹೇಳಿ “ನನಗೆ ಅರುಣ್ ಏನು ಅಂತ ಗೊತ್ತು, ನೀನು ಅವನ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡೋ ಅಗತ್ಯ ಇಲ್ಲ ಎಂದು ಕಪಾಳಕ್ಕೆ ಹೊಡೆದು ಹೇಳಿದ್ಲು..! ಎಲ್ಲರ ಎದುರು ಆದ ಅವಮಾನದಿಂದ ಒಂದೇ ಒಂದು ಮಾತಾಡದೇ ಪ್ರವೀಣ್ ಸುಮ್ಮನೇ ಹೋದ..! ಎಲ್ಲರೂ ದೀಪಾಳನ್ನು ಸಮಾಧಾನ ಮಾಡಿದ್ರು..! ಅರುಣ್ ಗೂ ದೀಪಾಳ ಬಗ್ಗೆ ಹೆಮ್ಮೆ ಅನಿಸ್ತು..! ಇವಳಂಥಾ ಹುಡುಗಿನಾ ಪಡೆಯೋಕೆ ನಾನು ತುಂಬಾ ಅದೃಷ್ಟ ಮಾಡಿದ್ದೀನಿ ಅಂತ ಅನ್ಕೊಂಡ..! ಆದ್ರೆ ಒಂದಿಷ್ಟು ಜನರಿಗೆ ಇವರನ್ನು ನೋಡಿ ಹೊಟ್ಟೆ ಕಿಚ್ಚು ಜಾಸ್ತೀನೇ ಆಯ್ತು..! ಜನರಿಗೆ ಹೊಟ್ಟೆ ಕಿಚ್ಚು ಪಡೋಕೆ ಕಾರಣ ಇಲ್ಲ ಬಿಡಿ..! ಕೆಲವರಿಗೆ ಕೆಲವರು ಚೆನ್ನಾಗಿದ್ರೆ ಸಹಿಸಿಕೊಳ್ಳೋಕೆ ಆಗಲ್ಲ..! ಅಂಥವರೆಲ್ಲಾ ಹಿಂದಿಂದ ಪ್ರವೀಣ್ ಗೆ ಸಪೋರ್ಟ್ ಮಾಡಿದ್ರು..! ಪ್ರವೀಣ್ ಮತ್ತು ಅರುಣ್ ನ ಒಂದು ಮಾಡಿದ್ರು..! ದ್ವೇಷ ಏಕೆ..? ಎಲ್ಲರೂ ನಮ್ಮವರೆಂದೇ ಭಾವಿಸಿದ್ದ ಅರುಣ್ ದೀಪಾಳಿಗೆ ಬುದ್ದಿ ಹೇಳಿ ಪ್ರವೀಣ್ ಜೊತೆ ಮಾತಾಡುವಂತೆ ಮಾಡಿದ..!
ಆದರೆ ದೀಪಾ, ಅರುಣ್ ಎಷ್ಟು ದಿನ ಹೀಗೇ ಚೆನ್ನಾಗಿ ಇರ್ತಾರೆ ಅಂತ ನಾವೂ ನೋಡ್ಬೇಕು ಅಂತ ಕಾಯ್ತಾ ಇದ್ದ ಅವರಿಗೆ ಆ ದಿನವೂ ಬಂದೇ ಬಿಡ್ತು..! ಇನ್ನೇನೂ ನಾಲ್ಕೈದು ತಿಂಗಳು ಕಳೆದಿದ್ದರೆ ಮಾಸ್ಟರ್ ಡಿಗ್ರಿ ಮುಗೀತಾ ಇತ್ತು..! ಅರುಣ್ ತನ್ನ ಜೂನಿಯರ್ ಒಬ್ಬಳಿಗೆ ಹುಷಾರ್ ಇಲ್ಲ ಅಂತ ಅವನ ಬೈಕಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರ್ಕೊಂಡು ಹೋದ..! ಅವಳು ಅವನ ಭುಜದ ಮೇಲೆ ಕೈ ಇಟ್ಕೊಂಡು ಹೋಗ್ತಾ ಇದ್ದಿದ್ದನ್ನು ದೀಪಾ ನೋಡಿದ್ಲು..! ಅರುಣ್ ಗೆ ಫೋನ್ ಮಾಡಿದ್ರೂ ರಿಸೀವ್ ಮಾಡ್ಲಿಲ್ಲ..! ಮತ್ತೆ ಅವನೇ ಫೋನ್ ಮಾಡ್ದ,..! ಎಲ್ಲಿದ್ದೀಯಾ ಅಂತ ಅವಳು ಕೇಳಿದ್ಲು..! ಫ್ರೆಂಡ್ ಗೆ ಹುಷಾರ್ ಇಲ್ಲ..! ಅವರನ್ನು ಆಸ್ಪತ್ರೆಗೆ ಕರ್ಕೊಂಡು ಬಂದಿದ್ದೀನಿ ಅಂದ…! ಫ್ರೆಂಡ್ ಅಂದ್ರೆ ಯಾರೂ..?! ನಮ್ ಕ್ಲಾಸ್ ಅವರೆಲ್ಲಾ ಇಲ್ಲೇ ಇದ್ದಾರಲ್ಲಾ..? ಅಂದ್ಲು ದೀಪಾ..! ಅವನು ಮಾತಿಗೆ ಮಾತು ಬೆಳೆಸ ಬಾರ್ದು ಅಂತ ಅಲ್ಲೇ ಇರು ಬರ್ತೀನಿ ಐದು ನಿಮಿಷ ಅಂತ ಹೇಳಿ ಕಾಲ್ ಡಿಸ್ಕನೆಕ್ಟ್ ಮಾಡ್ದ. ಹುಷಾರ್ ಇರದ ಹುಡುಗಿಯನ್ನು ಹಾಸ್ಟೆಲ್ ಗೆ ಬಿಟ್ಟು ಕ್ಯಾಂಪಸ್ ಗೆ ಹೋದ..! ಅಲ್ಲಿ ದೀಪಾ ಇರ್ಲಿಲ್ಲ..! ದೀಪಾ ಎಲ್ಲಿ ಅಂತ ಹುಡುಗರನ್ನು ಕೇಳಿದ. ಗೊತ್ತಿಲ್ಲ ಅಂತ ಹೇಳಿದ್ರು..! ಅವಳಿಗೆ ಫೋನ್ ಮಾಡಿದ್ರೆ ರಿಸೀವ್ ಮಾಡ್ಲೇ ಇಲ್ಲ..!
ಪ್ರವೀಣ್ ನ ಬೆಸ್ಟ್ ಫ್ರೆಂಡ್ ಒಬ್ಬಳು ` ದೀಪಾ ಅವತ್ತು ಪ್ರವೀಣ್ ನಿನಗೆ ಫೋನ್ ಮಾಡಿ ಅರುಣ್ ಬಗ್ಗೆ ಹೇಳಿದ್ದಕ್ಕೆ ಅವನ ಮೇಲೆ ರೇಗಾಡಿದಿಯಲ್ಲಾ..?! ಅವನ ವಿಷಯ ನಮಗೂ ಗೊತ್ತು..! ನಾವ್ಯಾರೂ ಏನೂ ಹೇಳೋಕೆ ಹೋಗಿರ್ಲಿಲ್ಲ..! ನಾವು ಬೇಡ ಅಂದ್ರೂ ಪ್ರವೀಣ್ ” ಒಂದು ಹುಡುಗಿ ಲೈಫ್ ಪ್ರಶ್ನೆ ಅಂತ ನಮ್ಮ ಮಾತನ್ನು ಕೇಳದೇ ನಿನಗೆ ವಿಷಯ ಹೇಳೋಕೆ ಹೊರಟಿದ್ದ..! ಆದ್ರೆ ನೀನು..? ಅವನನ್ನು ಅವಮಾನಿಸಿ ಬಿಟ್ಟಿ..! ನಾವೂ ಏನೂ ಹೇಳೋಕೆ ಹೋಗ್ಲಿಲ್ಲ..! ಈಗ ಹೇಳ್ತೀನಿ ನಂಬು, ಬಿಡು. ಅರುಣ್ ತುಂಬಾ ಕುಡೀತಾನೆ..! ಇವತ್ತು ನಮ್ಮ ಜೂನಿಯರ್ ಶ್ರದ್ಧಾಳನನ್ನು ಬೈಕಲ್ಲಿ ಕೂರ್ಸ್ಕೊಂಡು ಹೋಗಿದ್ದನ್ನು ನೀನೇ ನೋಡಿದ್ದೀಯಲ್ಲಾ ಅಂತ ಸುಮ್ಮನೇ ಫಿಟಿಂಗ್ ಇಟ್ಟು ಬಿಟ್ಟಳು..! ಆಗ ಎಲ್ಲವನ್ನೂ ಅನುಮಾನದಿಂದ ನೋಡೋಕೆ ಶುರು ಮಾಡಿದ ದೀಪಾ.. ಹೌದು, ಅವನು ಫ್ರೆಂಡ್ನ ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದಂತ ಏಕೆ ನನ್ನತ್ರ ಸುಳ್ಳು ಹೇಳ್ಬೇಕಿತ್ತು..! ಸತ್ಯ ಹೇಳಿದ್ರೆ ಏನ್ ಆಗ್ತಾ ಇತ್ತು..! ನನಗೆ ಹೇಳಿಯೇ ಕರ್ಕೊಂಡು ಹೋಗಿದ್ರೆ ಬೇಡ ಅಂತಿರ್ಲಿಲ್ಲ ಅಲ್ವಾ..? ಅಂತೆಲ್ಲಾ ಬೇಡದ ಯೋಚನೆಯನ್ನು ಮಾಡಿದ್ಲು..! ಅರುಣ್ ಜೊತೆ ಜಗಳ ಮಾಡಿದ್ಲು..! ಅರುಣ್ ಮಾತನ್ನು ಕೇಳಲೇ ಇಲ್ಲ..! ಜೂನಿಯರ್ ಶ್ರದ್ಧಾ ಕೂಡ, ಅಕ್ಕಾ.. ಅರುಣ್ ನನಗೆ ಅಣ್ಣಾ ಥರ. ಅವತ್ತು ತುಂಬಾ ಹುಷಾರ್ ಇರ್ಲಿಲ್ಲ..! ಬೇಡ ಅಣ್ಣಾ ಆಟೋದಲ್ಲಿ ಹೋಗ್ತೀನಿ ಅಂತ ಹೇಳಿದ್ರೂ. ಅವ್ರು ಕೇಳಿಲ್ಲ. ಬಾ.. ಅಣ್ಣಾ ಅಂದಿಯಲ್ಲಾ ನೀನು ನನ್ನ ತಂಗಿ, ನಿನ್ನ ಆಸ್ಪತ್ರೆಗೆ ಕರ್ಕೊಂಡು ಹೋಗಿ ಔಷಧ ಕೊಡಿಸಿ ನಾನೇ ಹಾಸ್ಟೆಲ್ಗ ಬಿಡ್ತೀನಿ ಅಂತ ಕರ್ಕೊಂಡು ಹೋದ್ರು ಅಂತ ಹೇಳಿದ್ಲು..! ಯಾಕೋ ಅವಳ ಮಾತನ್ನೂ ನಂಬದೇ ದೀಪಾ ಅರುಣ್ ಜೊತೆ ಮಾತನ್ನೂ ಬಿಟ್ಟು ಬಿಟ್ಟಳು..!
ಪಿಜಿ ಮುಗಿಯಿತು, ಇಬ್ಬರ ಮನೆಯಲ್ಲೂ ಅವರಿಬ್ಬರೂ ಚೆನ್ನಾಗೇ ಇದ್ದಾರಂತಲೇ ಅಂದು ಕೊಂಡಿದ್ರು..! ಆದ್ರೆ ಇಬ್ಬರೂ ಜಗಳ ಮಾಡಿಕೊಂಡಿದ್ದು ಮೊನ್ನೆ ಮೊನ್ನೆ ಗೊತ್ತಾಯ್ತು..! ಇಬ್ಬರನ್ನು ಕರೆಸಿ ಎರಡೂ ಮನೆಯವರು ಬುದ್ದಿ ಹೇಳಿದ್ರು..! ಈಗ ಮತ್ತೆ ಇಬ್ಬರೂ ಒಂದಾಗಿದ್ದಾರೆ..! ಬೆಂಗಳೂರಲ್ಲೇ ಕೆಲಸವನ್ನೂ ಮಾಡ್ತಾ ಇದ್ದಾರೆ..! ಮನೆಯವರೇ ಮದುವೆ ನಿಶ್ಚಯ ಮಾಡಿದ್ದಾರೆ. ನಿಜವಾದ ಪ್ರೀತಿ, ಸ್ನೇಹ ಯಾವತ್ತೂ ಸಾಯಲ್ಲ..! ಯಾರಿಂದಲೋ ದೂರಾದ ಪ್ರೇಮಿಗಳು, ಸ್ನೇಹಿತರೂ ಒಂದಲ್ಲ ಒಂದು ದಿನ ಒಂದಾಗೇ ಆಗುತ್ತಾರೆ..! ಅದಕ್ಕೆ ದೀಪಾ ಮತ್ತು ಅರುಣ್ ರ ಲವ್ ಸ್ಟೋರಿಯೇ ನಿದರ್ಶನ..!

  • ಶಶಿಧರ ಡಿ ಎಸ್ ದೋಣಿಹಕ್ಲು

1 COMMENT

LEAVE A REPLY

Please enter your comment!
Please enter your name here