ತಂದೆ ಟೀ ಮಾರುತ್ತಿದ್ದ ಕೋರ್ಟ್ ನಲ್ಲಿ ಮಗಳು ಜಡ್ಜ್..! ಜಲಂಧರ್ ಜಿಲ್ಲಾ ಕೋರ್ಟ್ ನಲ್ಲೊಂದು ವಿಭಿನ್ನ ಘಟನೆ..!

0
53

ಆತನ ಹೆಸರು ಸುರಿಂದರ್ ಕುಮಾರ್.. ಪಂಜಾಬ್ ರಾಜ್ಯದ ಜಲಂಧರ್ ನ ಜಿಲ್ಲಾ ಕೋರ್ಟ್ ಮುಂದೆ ಟೀ ಮಾರುವುದು ಆತನ ಕಾಯಕ. ಅಲ್ಲಿ ತಿರುಗಾಡುತ್ತಿದ್ದ ವಕೀಲರು, ಜಡ್ಜ್ ಗಳನ್ನು ಪ್ರತಿದಿನ ಗಮನಿಸುತ್ತಿದ್ದ ಸುರಿಂದರ್, ತನ್ನ ಮಕ್ಕಳು ಕೂಡಾ ಅದೇ ರೀತಿ ಕಪ್ಪು ಕೋಟ್ ಧರಿಸಿ ವಕೀಲರೋ, ಜಡ್ಜೋ ಆದರೆ ಎಷ್ಟು ಚೆನ್ನಾಗಿರುತ್ತೆ ಎಂದು ಕನಸು ಕಾಣುತ್ತಿದ್ದರು. ಆದರೆ ಆ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ. ಆತನ ಪುತ್ರಿ ಅದೇ ಕೋರ್ಟ್ ನಲ್ಲಿ ದೊಡ್ಡ ಹುದ್ದೆಗೇರಲಿದ್ದಾಳೆ..!
ಯೆಸ್.. ಸುರಿಂದರ್ ಕುಮಾರ್ ರ 23 ವರ್ಷದ ಮಗಳು ಶ್ರುತಿ, ಕೆಲವೇ ದಿನಗಳಲ್ಲಿ ಜಲಂಧರ್ ಜಿಲ್ಲಾ ಕೋರ್ಟ್ ನ ಜಡ್ಜ್ ಆಗಿ ಹೊರಹೊಮ್ಮಲಿದ್ದಾಳೆ. ಒಂದು ಬಾರಿ ತಂದೆಯ ಕನಸನ್ನು ಆಲಿಸಿದ್ದ ಶ್ರುತಿ ಪಂಜಾಬ್ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾಳೆ. ವಿಶೇಷವೆಂದರೆ ಈ ಪರೀಕ್ಷೆಯನ್ನು ಆಕೆ ಮೊದಲ ಪ್ರಯತ್ನದಲ್ಲೇ ಪಾಸಾಗಿ ಅಚ್ಚರಿ ಮೂಡಿಸಿದ್ದಾಳೆ.
ಜಡ್ಜ್ ಆಗುವುದಕ್ಕಾಗಿ ಶ್ರುತಿ ನಡೆಸಿದ ಪರಿಪಾಟಲು ಅಷ್ಟಿಷ್ಟಲ್ಲ. ಪಿಯುಸಿ ಪಾಸಾದ ಬಳಿಕ ಆಕೆ ಪಾಟಿಯಾಲದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಲಾ ಪದವಿ ಪಡೆದಳು. ನಂತರ ಜುಡಿಷಿಯಲ್ ಅಕಾಡೆಮಿಯಲ್ಲಿ ನಿರಂತರ ತರಬೇತಿ ಪಡೆದ ಬಳಿಕವೇ ಪಂಜಾಬ್ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾಳೆ. ಅಲ್ಲದೇ ಆಕೆಯ ಗೆಳತಿಯೋರ್ವಳು ಕೂಡಾ ಇದೇ ಪರೀಕ್ಷೆಯಲ್ಲಿ ಪಾಸಾಗಿ, ಜಡ್ಜ್ ಆಗುತ್ತಿರುವುದು ವಿಶೇಷ.
ಶ್ರುತಿಯ ಈ ಸಾಧನೆ ಕೇವಲ ಜಲಂಧರ್ ಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಪಂಜಾಬ್ ಸರ್ಕಾರ ಹಾಗೂ ರಾಜ್ಯ ಬಿಜೆಪಿಯನ್ನೂ ಸೆಳೆಯುವಂತೆ ಮಾಡಿದೆ. ಆದ್ದರಿಂದ ರಾಜ್ಯಸಭಾ ಸದಸ್ಯ ಹಾಗೂ ಪಂಜಾಬ್ ನ ಬಿಜೆಪಿ ಉಪಾಧ್ಯಕ್ಷ ಅವಿನಾಶ್ ರೈ ಖನ್ನಾರವರು ಶ್ರುತಿಗೆ ರಾಜ್ಯ ಸರ್ಕಾರದ ವತಿಯಿಂದ ಸನ್ಮಾನಿಸಿದ್ದಾರೆ.
ಕೋರ್ಟ್ ನ ಮುಂದೆ ಟೀ ಮಾರುತ್ತಿದ್ದ ವ್ಯಕ್ತಿಯ ಮಗಳು ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಏರಿದ್ದಾಳೆ ಎಂಬ ಸುದ್ದಿ ಎಲ್ಲೆಡೆ ಹರಡಿದ್ದು, ಶ್ರುತಿಯವರ ಸಾಧನೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಮುಂದೆ ಆಕೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂಬ ಹಾರೈಕೆಯ ಮಾತುಗಳು ಕೂಡಾ ಕೇಳಿ ಬರುತ್ತಿವೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ನಿಜವಾದ ಪ್ರೀತಿಗೆ ಎಂದೂ ಸಾವಿಲ್ಲ..! ಎಂದೂ ಅವನನ್ನು ಬಿಟ್ಟಿರದ ಅವಳೇಕೆ ದೂರಾದಳು..?!

ಹಸಿದರಿಗಾಗಿ `ರೋಟಿ ಬ್ಯಾಂಕ್’..! ಶ್ರೀಮಂತರು ದಿನಕ್ಕೆ ಎರಡು ರೊಟ್ಟಿಯನ್ನು ಈ ಬ್ಯಾಂಕಿಗೆ ಡೆಪಾಸಿಟ್ ಮಾಡ್ತಾರೆ..!

ನೀವೂ ಸಂಚಾರಿ ನಿಯಮ ಪಾಲಿಸೋದಿಲ್ವಾ ಹಾಗಾದ್ರೆ ಈ ವೀಡಿಯೋ ನೋಡಿ..!

ಒಂದು ಕಾಲದ ವಿಜ್ಞಾನಿ ಇಂದು ಭಿಕ್ಷುಕ..! ಭಾರತದ ಐನ್ ಸ್ಟೀನ್ ನ ದುರಂತ ಕಥೆ ಇದು..!

ನಾನು ಒಬ್ಬ ನಟನ ಅಭಿಮಾನಿ ಅಂತ ಹೇಳ್ಕೊಂಡು ಇನ್ನೊಬ್ಬ ನಟನ ಪೋಸ್ಟರ್ ಗೆ ಚಪ್ಪಲಿಯಲ್ಲಿ ಹೊಡೆಯೋದು ಯಾವ ಅಭಿಮಾನ..?

ಬೋರ್ ವೆಲ್ ನಲ್ಲಿ ನೀರಿನ ಬದಲು ಗ್ಯಾಸ್..! ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲ್ಲೂಕಿನ ಸೋರಂಗಾಂವಿ ಗ್ರಾಮದಲ್ಲೊಂದು ವಿಸ್ಮಯ..!

18 ವರ್ಷದಿಂದ ಒಂದೇ ಕಾಲಲ್ಲಿ ದುಡಿಯುತ್ತಿರುವ ರೈತ..! ಈತನ ಛಲದ ಮುಂದೆ ವಿಧಿಯೂ ಶರಣಾಗಿದೆ..!

50 ಕೋಟಿ ಬೆಲೆಬಾಳುವ ಕಂಪನಿ ಕಟ್ಟಿದ ಹುಟ್ಟು ಕುರುಡರಾದ ಶ್ರೀಕಾಂತ್…! ಇದು ಅಂಧನ ಯಶೋಗಾಥೆ..!

ರಷ್ಯಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಮೋದಿ..! #Video

ಮಾಸ್ಟರ್ ಪೀಸು… ಹಿಂಗೈತಿ ಬಾಸು..! – ಕಿರಿಕ್ ಕೀರ್ತಿ ..!

ಬರಲಿದೆ ವಾಟ್ಸ್ ಆ್ಯಪ್ ನಲ್ಲಿ ವೀಡಿಯೋ ಕಾಲಿಂಗ್..! ಅಚ್ಚರಿಗಳನ್ನು ಹೊತ್ತು ತರಲಿದೆ ಹೊಸ ಮಾದರಿ..!

LEAVE A REPLY

Please enter your comment!
Please enter your name here