No menu items!
23.2 C
Munich
Wednesday, October 7, 2026

ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಗೆ ಸಂಪೂರ್ಣ ಬ್ರೇಕ್; ಇನ್ಮುಂದೆ BIS/ISI ಮಾನದಂಡದ ಹೆಲ್ಮೆಟ್ ಮಾತ್ರ ಕಡ್ಡಾಯ

Must read

ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಗೆ ಸಂಪೂರ್ಣ ಬ್ರೇಕ್; ಇನ್ಮುಂದೆ BIS/ISI ಮಾನದಂಡದ ಹೆಲ್ಮೆಟ್ ಮಾತ್ರ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಾಫ್ ಹೆಲ್ಮೆಟ್ಗಳ ಬಳಕೆಗೆ ಸಂಪೂರ್ಣ ನಿಷೇಧ ಹೇರಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ. ಇನ್ನು ಮುಂದೆ ದ್ವಿಚಕ್ರ ವಾಹನ ಸವಾರರು ಸುರಕ್ಷತಾ ಮಾನದಂಡಗಳನ್ನು ಪೂರೈಸದ ಹಾಫ್ ಹೆಲ್ಮೆಟ್ಗಳನ್ನು ಬಳಸುವಂತಿಲ್ಲ.
ಸವಾರರು ಭಾರತೀಯ ಮಾನದಂಡಗಳ ಬ್ಯೂರೋ (BIS) ನಿಗದಿಪಡಿಸಿರುವ ಗುಣಮಟ್ಟದ ಮಾನದಂಡಗಳನ್ನು ಪೂರೈಸುವ, ಮಾನ್ಯ ISI ಗುರುತು ಹೊಂದಿರುವ ಹೆಲ್ಮೆಟ್ಗಳನ್ನು ಬಳಸಬೇಕು. ನಿಯಮ ಉಲ್ಲಂಘಿಸಿ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದರೆ ದಂಡ ಸೇರಿದಂತೆ ಕಾನೂನು ಕ್ರಮ ಎದುರಿಸಬೇಕಾಗಬಹುದು.
ಹಾಫ್ ಹೆಲ್ಮೆಟ್ಗಳ ಬಳಕೆಯನ್ನು ಮಾತ್ರವಲ್ಲದೆ ಅವುಗಳ ತಯಾರಿಕೆ ಮತ್ತು ಮಾರಾಟದ ಮೇಲೂ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಮಾರುಕಟ್ಟೆಯಲ್ಲಿ ಸುರಕ್ಷತಾ ಮಾನದಂಡಗಳನ್ನು ಪೂರೈಸದ ಹೆಲ್ಮೆಟ್ಗಳ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ತಯಾರಕರು ಹಾಗೂ ಮಾರಾಟಗಾರರ ವಿರುದ್ಧವೂ ಕಾನೂನು ಕ್ರಮ ಜರುಗಿಸುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್ಗಳಿಗೆ BIS ಪ್ರಮಾಣೀಕರಣದ ಅವಶ್ಯಕತೆಯಿದ್ದು, ಮಾನ್ಯ BIS ಪರವಾನಗಿ ಅಥವಾ ಪ್ರಮಾಣೀಕರಣವಿಲ್ಲದೆ ಹೆಲ್ಮೆಟ್ ತಯಾರಿಸುವುದು ಅಥವಾ ಮಾರಾಟ ಮಾಡುವುದು ನಿಯಮ ಉಲ್ಲಂಘನೆಯಾಗಿದೆ.
ರಸ್ತೆ ಅಪಘಾತಗಳಲ್ಲಿ ಸವಾರರ ತಲೆಗೆ ಗಂಭೀರ ಗಾಯಗಳಾಗುವುದನ್ನು ತಡೆಯಲು ಗುಣಮಟ್ಟದ ಹಾಗೂ ಸೂಕ್ತ ರಕ್ಷಣೆಯನ್ನು ಒದಗಿಸುವ ಹೆಲ್ಮೆಟ್ ಬಳಕೆಗೆ ಒತ್ತು ನೀಡಲಾಗುತ್ತಿದೆ. ಹೀಗಾಗಿ ದ್ವಿಚಕ್ರ ವಾಹನ ಸವಾರರು ಇನ್ನು ಮುಂದೆ ಹೆಲ್ಮೆಟ್ ಖರೀದಿಸುವಾಗ BIS/ISI ಮಾನದಂಡ ಮತ್ತು ಪ್ರಮಾಣೀಕರಣವನ್ನು ಪರಿಶೀಲಿಸಿ ಖರೀದಿಸುವುದು ಅಗತ್ಯವಾಗಿದೆ.

- Advertisement -spot_img

More articles

- Advertisement -spot_img

Latest article