No menu items!
31.1 C
Munich
Friday, July 31, 2026

BJPಗೆ ಶೆಹಜಾದ್ ಪೂನಾವಾಲಾ ದಿಢೀರ್ ರಾಜೀನಾಮೆ!

Must read

BJPಗೆ ಶೆಹಜಾದ್ ಪೂನಾವಾಲಾ ದಿಢೀರ್ ರಾಜೀನಾಮೆ!

ನವದೆಹಲಿ: ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ಆದರೆ, ಈ ಕುರಿತು ಪಕ್ಷದ ಅಥವಾ ಶೆಹಜಾದ್ ಪೂನವಾಲ ಅವರಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.

ಶೆಹಜಾದ್ ಪೂನವಾಲ ಅವರು ರಾಷ್ಟ್ರೀಯ ಮಾಧ್ಯಮಗಳ ಚರ್ಚೆಗಳಲ್ಲಿ ಬಿಜೆಪಿ ಪರವಾಗಿ ಆಕ್ರಮಣಕಾರಿ ವಾದ ಮಂಡಿಸುವ ಮೂಲಕ ಗುರುತಿಸಿಕೊಂಡಿದ್ದರು. ಅಂಕಿ-ಅಂಶಗಳು, ದಾಖಲೆಗಳು ಹಾಗೂ ತೀಕ್ಷ್ಣ ವಾಗ್ಮಿತೆಯಿಂದ ಪ್ರತಿಪಕ್ಷ ನಾಯಕರಿಗೆ ತಿರುಗೇಟು ನೀಡುತ್ತಿದ್ದ ಅವರು, ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಜನಪ್ರಿಯರಾಗಿದ್ದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ಸೇರಿದಂತೆ ಹಲವು ರಾಷ್ಟ್ರೀಯ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಅವರು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು.

ಇತ್ತೀಚೆಗೆ ಶೆಹಜಾದ್ ಪೂನವಾಲ ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ನಲ್ಲಿ ಬದಲಾವಣೆ ಮಾಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಪ್ರೊಫೈಲ್‌ನಲ್ಲಿ ಇದ್ದ ‘BJP National Spokesperson’ ಎಂಬ ಉಲ್ಲೇಖವನ್ನು ತೆಗೆದುಹಾಕಿರುವುದಾಗಿ ವರದಿಯಾಗಿದೆ. ಜೊತೆಗೆ, “ನನ್ನ ಧರ್ಮ ಮುಸ್ಲಿಂ, ಆದರೆ ನನ್ನ ಸಂಸ್ಕೃತಿ ಹಿಂದೂ” ಎಂಬ ಪರಿಚಯವನ್ನು ಸೇರಿಸಿರುವುದು ಗಮನ ಸೆಳೆದಿದೆ.

ಕೆಲವು ವರದಿಗಳ ಪ್ರಕಾರ, ವೈಯಕ್ತಿಕ ಕಾರಣಗಳಿಂದ ಅವರು ಪಕ್ಷದ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಪತ್ರ ಅಥವಾ ದೃಢೀಕರಣ ಇದುವರೆಗೆ ಬಹಿರಂಗವಾಗಿಲ್ಲ

- Advertisement -spot_img

More articles

- Advertisement -spot_img

Latest article