ಕಾವ್ಯದತ್ತ

ಮಸೀದಿ ಮಂದಿರದ ಬಾಗಿಲಲಿ

ಮಸೀದಿ ಮಂದಿರದ ಬಾಗಿಲಲಿ ಎತ್ತ ನೋಡಲಿ ಜಗದ ಕತ್ತಲು ಸುತ್ತಲೂ ಸುತ್ತುತಿಹುದು ತಿಲಕವಿಟ್ಟವನು ಮಾತಿನ ತಲವಾರು ಹಿಡಿದಿಹನು ಮೀಸೆ ಇಲ್ಲದ ಗಡ್ಡವು ಹೊಸ ಪಕ್ಷದ ಪೋಷಾಕು ತೊಟ್ಟಿಹುದು ಏನಿದೇನಿದು.. ರಣರಂಗವೋ - ಸಂಗದಿ ಸಂಧಿಸಿಹ ಗುಲಾಮಗಿರಿಯ ಹೋರಾಟವೋ ನಾನರಿಯೆ. ಚೂರಿ ಇರಿದವ ರಂಗನಾದರೆ ತುಪಾಕಿ ಹಿಡಿದವ...

ಮನೋವಿಕಾರ

ಮನೋವಿಕಾರ ನಾನೆಂಬುದೇ ತುಳಿಯುತಿದೆ ನನ್ನ ಅವನಿವನ - ಅವರಿವರ ವಿಡಂಬನೆಯಲೇ ಕಾಲಕಳೆದವನು ಊರ ಕಾವಲಿಗೆ ನಿಂತಾಗ ನಿಂತಲ್ಲೇ ಕಂತೆಯ ಎಣಿಸ ಕುಂತವನು ಹೊನ್ನ ಹೆಸರಲೇ ಮೂಗಗೊಣ್ಣೆಯ ಹೊತ್ತು ತನ್ನವರ ಹೆಣದ ಹಣೆಯಲೂ ಎಂಟಾಣಿ ಆಯುತಿರುವವನು ಯಾರಿಲ್ಲದ ವೇಳೆ ವಿಕಾರವಾಗಿ ಜನರೆದುರು ತಾನೊಬ್ಬನೇ ಆಕಾರದಿ ಭಗೀರಥನೆಂದಾಗ ಕಾಲವೇ ಅವನೊಳಗಿನ ಅಹಂಕಾರವ ಉರಿಸಿ ಈ ಜಗದಿಂದಲೇ...

ಚಿಗುರು ಮೀಸೆ ಮಾಯೆ

ಹರೆಯದ ಹೊಳೆಯಲ್ಲಿ ಹಳೆಯದೆಲ್ಲಾ ಕಳೆಯದು ಬೆಳೆಯದೆಲ್ಲಾ ಬೆಳೆಯದು ಕೊಳೆಯ ಮಳೆಯ ಮನಕೆ ಸುರಿಸಿ ಮೆರೆಯುತಿರುವ ಮರುಳರ ವಯಸ್ಸಿನ ಅರಳುಮರಳಿದು ಉರುಳು ಕೊರಳ ಸುತ್ತಿ ನರಳುವ ಹೊತ್ತಿಗಾಗಲೇ ಮರೆವು ಪಡುವಣದ ಬಾಗಿಲ ಸರಿಸಿ ಓಡುತಿಹುದು ಕಾವ್ಯದತ್ತನ ಮೂಡಣದ ಹೊಸಬೆಳಕು ನವಹುರುಪಿನಿಂದಲಿ ಬಿಸಿರಕ್ತಕೆ ನೋವಿನೂಟವ ಬಡಿಸಿ ಜಗದ ಹೋರಾಟವ ಕಣ್ಣೆದುರಿಗೆ ತಂದಿಟ್ಟು ಮರೆಯಾದಾಗ ಮುಂದಿಹುದೆಲ್ಲಾ ಜಯದ ಹಾದಿಯೇ. ?ದತ್ತರಾಜ್...

ಧರ್ಮಸ್ಥಾನ

ಧರ್ಮಸ್ಥಾನ ಆ ಧರ್ಮ ಈ ಧರ್ಮ ಕೆಲವೊಂದು ಕರ್ಮ(ಕೆಲಸ) ಜಾತಿಯೊಳಡಗಿಹ ಮರ್ಮ ಚರ್ಮದೊಳಗಿಲ್ಲ ಜನ್ಮದಲಿ ಅಡಗಿಕುಳಿತಿಹುದೆಲ್ಲ ಅಂಟಿಸಿದವರ ನಂಟಿನೊಳಗೆ ನಡುಗುತ ಒಂದೆಂಬ ಮಾತು ಗುಡುಗಿದರೂ ಕೆಡವುವರೆಲ್ಲ ಹೋರಾಟದ ನೋಟವಿಟ್ಟಲ್ಲಿ ಹೆಣದ ಮಾರಾಟ ಬಲುಜೋರಾಗಿಹುದು ಹಣಿಯಲಾರೆ ಸಾವಿನ ಹೊಣೆಯ ಸಹಿಸಲಾರೆ ಕೊನೆಯುಸಿರ ಎಳೆದ ಶವದಿಂದಲಿ ಒಳರಾಜಕೀಯದ ಬಡನಾಟಕೀಯದ ಬಿರುಗಾಳಿಯು ಮತ್ತದೇ ಶೋಕಗೀತೆಯ ಹಾಡಿಸುತಿಹುದು ಕಾವ್ಯದತ್ತನ ನೇರ ನುಡಿಯನು ಕೇಳಲಾಗದ ಕೊಳಕು...

ನಶ್ವರ

ನಶ್ವರ ಸರದಿಯಲಿ ಬಂದವನು ಬಲುಬೇಗ ನಿಂತವನು ಕಾಲುಸೋತವರ ಕಾಲೆಳೆದವನು ಕರುಣೆ ಇಲ್ಲದ ಎದೆಯೊಳಗೆ ಕರುಣಾನಟನಾದವನು ಬೆತ್ತಲೆಯಲೂ ಹಸಿಸುಳ್ಳ ನುಡಿದವನು ಹುಸಿ ನುಡಿಯ ಮಸಿ ಹಿಡಿದು ತಿಳಿದಂತೆ ಬರೆದವನು ಸರಸದಲೂ ವಿಷತಲೆಯ ವಿಷಯವ ಬಿತ್ತುವನು ಕಾರ್ಕೋಟಕ‌ವ ಮುದ್ದಾಡಿ ಎದೆಗಪ್ಪಿಸಿಕೊಂಡವನು ಕಣ್ಣೀರ ಕಡಲಲ್ಲೂ ಹಗೆಯ ಹೊಗೆಯಲಿ ಕೈಯ ಹಿಸುಕಿದವನ ಕಂಡ ಕಾವ್ಯದತ್ತನ ಮನವಿಂದು ನಗುತಿಹುದು ಕಾಲ ಚಕ್ರದ ಸುಳಿಗೆ...

Popular

Subscribe

spot_imgspot_img