ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡ್ತಾರಾ ಸಿಎಂ ?

Must read

ಹನೂರು ತಾಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಚಾಮರಾಜನರದ ಡಿಸಿ ರಮೇಶ್, ಮಾದಪ್ಪ ದರ್ಶನ ಪಡೆದುಕೊಂಡ್ರು. ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನೌಕರರ ಸಂಘದ 3ನೇ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿದ ಬಳಿಕ ಮಹದೇಶ್ವರಸ್ವಾಮಿಯ ದೇವಾಲಯಕ್ಕೆ ತೆರಳಿ , ಮಹದೇಶ್ವರ ದರ್ಶನ ಪಡೆದರು.

ಮುಂದಿನ ತಿಂಗಳು
ಸಿಎಂ ಬೊಮ್ಮಾಯಿ ಬೆಟ್ಟಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ರು. ಪ್ರಾಧಿಕಾರದಿಂದ ಕೈಗೊಂಡಿರುವ 108 ಅಡಿ ಮಹದೇಶ್ವರಸ್ವಾಮಿ ಪ್ರತಿಮೆ ಕಾಮಗಾರಿ ಸೇರಿದಂತೆ ಜೇನುಮಲೈ ಬಳಿಯ 512 ಕೊಠಡಿಗಳ ಕಾಮಗಾರಿ, ಸರತಿ ಸಾಲು, ಲಾಡು ಘಟಕ ಕೌಂಟರ್, ಕಲ್ಯಾಣಿ ಕೊಳ ಹಾಗೂ UGD ಕಾಮಗಾರಿ ಹಾಗೂ ಇನ್ನಿತರ ಕಾಮಗಾರಿಯನ್ನು ವೀಕ್ಷಿಸಿದ್ರು. ಮಂದಗತಿಯಲ್ಲಿ ಸಾಗುತ್ತಿರುವ ಕೆಲಸ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

- Advertisement -spot_img

More articles

- Advertisement -spot_img

Latest article