No menu items!
16.8 C
Munich
Saturday, June 27, 2026

ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಸಿ.ಟಿ.ರವಿಗೆ ಇಲ್ಲ

Must read

ಬೆಂಗಳೂರು : ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಸಿ.ಟಿ.ರವಿಗೆ ಇಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ ಹೇಳಿದರು. ಬೆಂಗಳೂರಿನಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಆಕ್ರೋಶ್ ರ್ಯಾಲಿಯಲ್ಲಿ ಮಾತನಾಡಿದರು.

 

ಸಿ.ಟಿ ರವಿ ಆಕ್ಸಿಡೆಂಟ್ ಗಿರಾಕಿ. ಈಗಾಗಲೇ ಎರಡ್ಮೂರು ಆ್ಯಕ್ಸಿಡೆಂಟ್  ಮಾಡಿ ಜನರ ಜೀವ ತೆಗೆದಿದ್ದಾರೆ. ಅಂತಹವರಿಂದ ನಮಗೆ ನೀತಿಪಾಠ ಬೇಡ ಎಂದರು. ಅಗ್ನಿಪಥ್ ಹೆಸರಿಗೆ ಮಸಿಬಳಿಯುವ ಕೆಲಸ ಬಿಜೆಪಿ ಮಾಡಿದೆ. ಭಾರತೀಯ ಸೇನೆಯನ್ನು ಖಾಸಗಿ ಪಾಲು ಮಾಡುವ ಹುನ್ನಾರ ನಡೆಸಿದ್ದಾರೆ. ದೇಶದ ಆಸ್ತಿಗಳನ್ನೇ ಮೋದಿ, ಅಮಿತ್ ಷಾ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article