ಅವನ ಪ್ರೀತಿಗೆ ಅಮೇರಿಕಾ ಮುಳುವಾಯ್ತು..!

0
117

ಅವನು ಅಭಿಶೇಕ್ ಸಾಗರದ ಹುಡುಗ, ಬಿಕಾಂ ಮಾಡಿದ್ದು ತೀರ್ಥಹಳ್ಳಿಯಲ್ಲಿ. ನೋಡೋಕೆ ಸಿನಿಮಾ ಹೀರೋ ಥರ ಇದ್ದ! ಗುಣದಲ್ಲಂತು ರಿಯಲ್ ಹೀರೋನೇ! ಅಷ್ಟೇ ಅಲ್ಲ ಓದದ್ರಲ್ಲಿಯೂ ಟಾಪರ್! ಬಿಕಾಂಲ್ಲಿ 91 ಪರ್ಸೆಂಟ್ ಪಡೆದುಕೊಂಡಿದ್ದ ಇವನನ್ನ ನೈಂಟಿ ಒನ್ ಅಂತಾನೆ ಕರೀತಾ ಇದ್ರು! ಅಭಿಶೇಕ್, ಅಭಿ ಅಂತ ಹೇಳಿದ್ರೆ ಎಷ್ಟೋ ಜನರಿಗೆ ಗೊತ್ತೇ ಆಗ್ತಾ ಇರ್ಲಿಲ್ಲ! ನೈಂಟಿ ಒನ್ ಅಂತ ಕರೆದಿದ್ರೆ ಮಾತ್ರ ಎಲ್ಲರಿಗೂ ಗೊತ್ತಾಗ್ತಾ ಇದ್ದದ್ದು! ಆಮೇಲೆ ಎಂಕಾಂ ಮಾಡೋಕೆ ಮಂಗಳೂರು ಕಡೆ ಹೋದ! ಅವನದೇ ಕ್ಲಾಸ್ ನ ಕಾವ್ಯ ಅನ್ನೋ ಹುಡುಗಿ ಜೊತೆ ಸ್ನೇಹ ಬೆಳೆಯುತ್ತೆ! ಅವಳ ಮೇಲೆ ಇವನಿಗೆ ಪ್ರೀತಿ ಹುಟ್ಟಿದ್ರೂ ಕೂಡ ಅದನ್ನು ತೋರಿಸಿಕೊಳ್ಳೋದಿಲ್ಲ! ಮನೆಯಲ್ಲಿ ಸಾಲ ಇದೆ, ಬ್ಯಾಂಕ್ ಲೋನ್ ಇದೆ! ನಾನು ಓದ್ಲೇ ಬೇಕು! ಕೈತುಂಬಾ ಸಂಬಳ ಸಿಗುವ ಕೆಲಸವನ್ನು ಗಿಟ್ಟಿಸಿಕೊಳ್ಳಲೇ ಬೇಕು! ಆಮೇಲೆ ಪ್ರೀತಿ ಗೀತಿ ಅಂತ ತನ್ನ ಭಾವನೆಯನ್ನು ಹಾಗೇ ಮನಸ್ಸಲ್ಲೇ ಇಟ್ಟುಕೊಂಡ! ಅವಳಿಗೂ ಅವನ ಮೇಲೆ ಪ್ರೀತಿ ಹುಟ್ಟಿತ್ತು! ಆದರೆ ಅವನೇ ಪ್ರಪೋಸ್ ಮಾಡಲಿ ಅಂತ ಕಾದು ಕೂತಿದ್ಲು! ಇನ್-ಡೈರೆಕ್ಟ್ ಆಗಿ ಪ್ರೀತಿಯನ್ನು ನಿವೇಧಿಸಿ ಕೊಳ್ತಾ ಇದ್ಲು! ಅದು ಅರ್ಥವಾದರೂ ಅರ್ಥವಾಗದವನಂತೆ ಅಭಿ ನಟಿಸುತ್ತಿದ್ದ! ಇವನು ಇವತ್ತು ಐ ಲವ್ ಯು ಅಂತಾನೆ, ನಾಳೆ ಅಂತಾನೆ, ನಾಡಿದ್ದು ಅಂತಾನೆ ಅಂತ ಕಾದು ಕಾದು ಸುಸ್ತಾಗಿದ್ದ ಕಾವ್ಯ ತಾಳ್ಮೆ ಕಳೆದುಕೊಳ್ತಾಳೆ! ಅವಳೇ ನೇರವಾಗಿ ಹೇ, ಅಭಿ ನಾನು ನಿನ್ನ ತುಂಬಾ ಪ್ರೀತಿಸ್ತಾ ಇದೀನಿ” ಅಂದೇ ಬಿಟ್ಲು!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

“ಹೇ ಯಾಕೋ ಬೇಡ ಅನಿಸ್ತಾ ಇದೆ ಕಣೇ.., ಅರ್ಥಮಾಡ್ಕೋ.., ಮುಂದೆ ತುಂಬಾ ರಿಸ್ಕ್ ಆಗುತ್ತೆ”! ಅಂತ ಅಭಿಶೇಕ್ ಎಷ್ಟೇ ಹೇಳಿದ್ರು ಕಾವ್ಯ ಕೇಳಲೇ ಇಲ್ಲ! “ಹೇ ನಿನ್ನ ಬಿಟ್ಟು ಇರಲು ಸಾಧ್ಯವೇ ಇಲ್ಲ ಕಣೋ, ಪ್ಲೀಸ್ ಇಲ್ಲ ಅಂತ ಮಾತ್ರ ಹೇಳ ಬೇಡ! ನಿನ್ನ ತುಂಬಾ ಪ್ರೀತಿಸ್ತೀನಿ ಕಣೋ”! ಅಂತ ಅವಳೇ ಅವನ ಹಿಂದೆ ಬಿದ್ದು ಪ್ರೀತಿಸಿದ್ಲು! “ನಾನು ಲೈಫ್ ನಲ್ಲಿ ಸೆಟಲ್ ಆಗೋ ಹೊತ್ತಿಗೆ ನಿಮ್ ಮನೇಲಿ ನಿನಗೆ ಹುಡಗನ್ನ ಹುಡುಕ್ತಾರೆ! ನಾನು ಬಂದು ನಿನ್ನ ಕೇಳಿದ್ರೆ, ಏನ್ ಕೆಲಸ ಮಾಡ್ತಿದ್ದೀ? ತಿಂಗಳಿಗೆ ಎಷ್ಟು ಸಂಬಳ ಬರ್ತಾ ಉಂಟು? ಮನೆಯಲ್ಲಿ ಆಸ್ತಿ ಎಷ್ಟಿದೆ? ಅಂತೆಲ್ಲಾ ಪ್ರಶ್ನೆ ಮಾಡ್ತಾರೆ! ಅದ್ಯಾವುದಕ್ಕೂ ನನ್ನ ಬಳಿ ಉತ್ತರ ಇರಲ್ಲ! ಎಂಕಾಂ ಮುಗಿದ ಕೂಡೆಲೇ ಹಣ ಸಂಪಾದಿಸುವುದಾದರೂ ಹೇಗೆ? ನಿಮ್ಮ ಮನೆಯಲ್ಲಿ ನಿರೀಕ್ಷಿಸುವ ದೊಡ್ಡ ಮಟ್ಟದ ಸಂಬಳವನ್ನು ಪಡೆಯುವುದಾದರೂ ಹೇಗೆ? ಅಂತ ಕಾವ್ಯಳಿಗೆ ಬುದ್ಧಿ ಮಾತು ಹೇಳ್ತಾನೆ! ಎಲ್ಲರೂ ಕನಸಿನ ಲೋಕದಲ್ಲಿ ಬದುಕುವವರಾದ್ರೆ ಅಭಿಶೇಕ್ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡುವವನು! ಆದ್ರೆ ಅವನ ಯಾವ ಬುದ್ಧಿ ಮಾತಿಗೂ ಕಾವ್ಯ ಕಿವಿಗೊಡಲೇ ಇಲ್ಲ! “ನೀನು ಎಂಕಾಂ ಮುಗಿಸಿದ ಮೇಲೂ ಎರಡರಿಂದ ಮೂರು ವರ್ಷ ನಾನು ವೇಟ್ ಮಾಡ್ತೀನಿ! ಅಲ್ಲಿತನಕ ಹೇಗಾದ್ರು ಮಾಡಿ ಮನೆಯಲ್ಲಿ ಮದುವೆ ಮಾತು ಬಾರದಂತೆ ನೋಡಿಕೊಳ್ತಿನಿ”! ಅಂದ್ಲು! ಇಷ್ಟೆಲ್ಲಾ ಹಠ ಮಾಡಿದ ಮೇಲೆ ಅಭಿಶೇಕ್ ಗೆ ಕಾವ್ಯಳನ್ನು ನೋವಿಸಲು ಇಷ್ಟ ಆಗಲ್ಲ! ಅವಳ ಪ್ರೀತಿಯನ್ನು ಒಪ್ಪಿಯೇ ಬಿಟ್ಟ!
ಇವರ ಪ್ರೀತಿಗೆ ಇವರ ಜಾತಿ ಅಡ್ಡಿ ಬರಲ್ಲ! ಅದೃಷ್ಟ ಅಂದ್ರೆ ಇಬ್ಬರೂ ಒಂದೇ ಕ್ಯಾಸ್ಟ್ ಆಗಿದ್ರಿಂದ ಅದು ಮ್ಯಾಟ್ರೇ ಆಗಿರಲ್ಲ! ಆದ್ರೆ ಇದ್ದಕ್ಕಿಂದಂತೆ ಕಾವ್ಯಾಳ ಮನೆಯಲ್ಲಿ ಇವರಿಬ್ಬರ ಲವ್ ಮ್ಯಾಟ್ರು ಗೊತ್ತಾಗುತ್ತೆ! ಅವಳ ಅಪ್ಪ, ಅಮ್ಮ ಬೈದು ಬುದ್ಧಿ ಹೇಳಿದ್ರೂ ಕಾವ್ಯ ಮಾತ್ರ ಅಭಿಶೇಕನನ್ನೂ ಬಿಡಲೇ ಇಲ್ಲ! ಮಗಳು ಜೀವಕ್ಕೆಲ್ಲಿ ತೊಂದ್ರೆ ಮಾಡಿಕೊಳ್ತಾಳೋ ಅಂತ ಅಪ್ಪ ಅಮ್ಮ ಕೂಡ ನ್ಯೂಟ್ರಲ್ ಆದ್ರು! ಹೇಗಿದ್ರು ಒಂದೇ ಕ್ಯಾಸ್ಟ್ ಅಲ್ವಾ? ಹುಡುಗನೂ ಚೆನ್ನಾಗಿದ್ದಾನೆ! ಅಂತ ಸುಮ್ನೆ ಆಗಿ ಬಿಟ್ರು! ಅಭಿ ಅವರ ಅಪ್ಪ ಅಮ್ಮನಿಗೂ ಪರಿಚಯವಾಗಿ ತುಂಬಾ ಇಷ್ಟ ಆದ! ಅವರ ಮನವನ್ನು ಕದ್ದ! ಈ ಕಾವ್ಯಾಳ ಚೋರ ಚಿತ್ತ ಚೋರ! ಅಭಿಶೇಕ್ ಅಣ್ಣನೂ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ರು! ಅವರೇ ಅಭಿಪರವಾಗಿ ಅಪ್ಪ ಅಮ್ಮನನ್ನೂ ಒಪ್ಪಿಸಿದ್ರು! ಅಭಿ ಮತ್ತು ಕಾವ್ಯ ಸಂತೋಷದ ಕಡಲಲ್ಲಿ ತೇಲಿದ್ರು! ಆದ್ರೆ ಅವರ ಸಂತೋಷ ಹೆಚ್ಚು ಕಾಲ ಉಳಿಲೇ ಇಲ್ಲ! ಎಂಕಾಂ ಮುಗಿಯಿತು ಅಭಿಗೆ ಕೈತುಂಬಾ ಸಂಬಳ ಸಿಗುವ ಕೆಲಸವೂ ಸಿಕ್ತು! ಈಗ ಕಾವ್ಯ ಉಲ್ಟಾ ಹೊಡೆದ್ಲು ಸಾರ್!
“ಅಭಿ ಕ್ಷಮಿಸು ನಾಣು ನಿನ್ನ ಮದ್ವೆ ಆಗಲು ಆಗಲ್ಲ! ಮನೇಲಿ ಹುಡುಗನನ್ನು ನೋಡಿದ್ದಾರೆ! ಅವನನ್ನೇ ಮದ್ವೆ ಆಗ್ಬೇಕು! ಇಲ್ಲ ಅಂದ್ರೆ ಅಪ್ಪ ಅಮ್ಮಂಗೆ ಮೋಸ ಮಾಡಿದಂಗೆ ಆಗುತ್ತೆ”! ಅಂದ್ಲು. “ನಿನಗೇನಾದ್ರು ತಲೆ ಕೆಟ್ಟಿದೆಯಾ? ನಿಮ್ಮ ಅಪ್ಪ ಅಮ್ಮನೇ ಒಪ್ಪಿದ್ದಾರಲ್ಲಾ? ಅವತ್ತು ಕಾಡಿ ಬೇಡಿ ಪ್ರೀತಿಸಿ, ಮನೆಯವರನ್ನೂ ಒಪ್ಪಿಸಿ, ಈಗ ಮದುವೆ ಆಗೋ ಟೈಮಲ್ಲಿ ಬೇರೆ ಹುಡುಗನನ್ನು ಮದುವೆ ಆಗ್ತೀನಿ”! ಎಂದು ಹೇಳ್ತಾ ಇದ್ದಿಯಲ್ಲಾ? ಅಂತ ಅಭಿ ರ್ಯಾಶ್ ಆಗಿ ಕೇಳ್ತಾನೆ. ” ನಾನು ನಿನ್ನ ಮದ್ವೆ ಆಗಲು ಸಾಧ್ಯ ಇಲ್ಲ, ಇಲ್ಲ ಇಲ್ಲ, ನೀನು ಇದೇ ತರ ತಲೆ ತಿನ್ತಾ ಇದ್ರೆ ನಿನ್ನ ಹೆಸರು ಬರೆದಿಟ್ಟು ಸಾಯ್ತೀನಿ! ಅಂತ ಹೆದರಸಿ ಅವನನ್ನು ಸುಮ್ಮನಾಗಿಸಿದಳು ಕಾವ್ಯ!
ಅಷ್ಟಕ್ಕೂ ಅವಳು ಏಕೆ ಅಭಿಯನ್ನ ತಿರಸ್ಕರಿಸಿದ್ಲು ಗೊತ್ತಾ? ಅದಕ್ಕೆ ಕಾರಣ ಆ ಅಮೇರಿಕಾ ಹುಡುಗ! ಹೌದು, ಆಸ್ಟ್ರೇಲಿಯಾದಲ್ಲಿರುವ ಕಾವ್ಯಾಳ ಅಕ್ಕ, ಕಾವ್ಯಾಳ ಮೈಂಡ್ ವಾಶ್ ಮಾಡಿದ್ಲು! ತನ್ನ ಗಂಡನ ಸ್ನೇಹಿತನೊಬ್ಬ ಅಮೇರಿಕಾದಲ್ಲಿದ್ದಾನೆ ಅವರನ್ನ ಮದ್ವೆ ಆದ್ರೆ ನೀನು ನನ್ನ ರೀತಿ ಚೆನ್ನಾಗಿರ ಬಹುದು ಅಂತ ಕಿವಿ ಹಿಂಡಿದ್ಲು! ಅಕ್ಕನ ಮಾತು ಕೇಳಿ, ಅಮೇರಿಕಾ ಫ್ಲೈಟ್ ಹತ್ತೋ ಆಸೆ ಕಾವ್ಯಾಳಲ್ಲಿ ಚಿಗುರಿತು! ಅದಕ್ಕಾಗಿಯೇ ಅಭಿಶೇಕನನ್ನು ದೂರ ಮಾಡಿದ್ಲು! ಇವತ್ತು ಕಾವ್ಯ ಅಮೇರಿಕಾದಲ್ಲಿದ್ದಾಳೆ! ಅಭಿಶೇಕ್ ಕಾವ್ಯಾಳನ್ನು ಪ್ರೀತಿಸಿದ ತಪ್ಪಿಗಾಗಿ ನೊಂದು ಕೆಲಸ ಮಾಡಲೂ ಆಗದೆ ಕೆಲಸ ಬಿಟ್ಟು ಮನೆಗೆ ಹೋಗಿದ್ದ! ಈಗ ಅವನ ಅಣ್ಣ, ಅತ್ತಿಗೆ ಫ್ರೆಂಡ್ಸ್ ಅವನಿಗೆ ಬುದ್ಧಿ ಹೇಳಿ ಸರಿದಾರಿಗೆ ತರ್ತಾ ಇದ್ದಾರೆ! ಕಂಪನಿ ಕೆಲಸ ಬಿಟ್ಟಿರುವ ಅಭಿ ಬ್ಯಾಂಕ್ ಎಕ್ಸಾಮ್ ಕೋಚ್ ತಗೋಳ್ತಾ ಇದ್ದಾನೆ!
ಅಮೇರಿಕಾದ ಹುಡುಗನಿಗೋಸ್ಕರ ಪ್ರೀತಿಸಿದ ಹುಡುಗನನ್ನೇ ದೂರ ಮಾಡಿದ ಕಾವ್ಯಗೆ ಒಂದಲ್ಲ ಒಂದು ದಿನ ಬುದ್ಧಿ ಬಂದೇ ಬರುತ್ತೆ! ಅಲ್ಲಾ..,ಗುರು ಪ್ರೀತಿಗೆ ಅಪ್ಪ ಅಮ್ಮ, ಜಾತಿಮತ ಅಡ್ಡಿ ಬರುವುದನ್ನು ನೋಡಿದ್ದೆವು! ಆದ್ರೆ ಇವತ್ತು ಅಮೇರಿಕಾದಂತಹ ರಾಷ್ಟ್ರವೇ ಪ್ರೀತಿಗೆ ಮುಳ್ಳಾಗ್ತಾ ಇದೆ ಅಂದ್ರೆ..,?

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here