No menu items!
28.4 C
Munich
Tuesday, May 26, 2026

ಡೇರಾ ಮುಖ್ಯಸ್ಥ ರಾಮ್ ರಹೀಮ್ ಗೆ ಮತ್ತೆ ಪೆರೋಲ್; 2017ರಿಂದ 16ನೇ ಬಾರಿ ಜೈಲಿನಿಂದ ಬಿಡುಗಡೆ

Must read

ಡೇರಾ ಮುಖ್ಯಸ್ಥ ರಾಮ್ ರಹೀಮ್ ಗೆ ಮತ್ತೆ ಪೆರೋಲ್; 2017ರಿಂದ 16ನೇ ಬಾರಿ ಜೈಲಿನಿಂದ ಬಿಡುಗಡೆ

ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹರಿಯಾಣದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ಗೆ ಮತ್ತೆ 30 ದಿನಗಳ ಪೆರೋಲ್ ಮಂಜೂರಾಗಿದೆ. 2017ರಲ್ಲಿ ಜೈಲು ಸೇರಿದ ಬಳಿಕ ಇದು ಆತನಿಗೆ ದೊರೆತಿರುವ 16ನೇ ಪೆರೋಲ್ ಆಗಿದೆ.
ಸ್ವಯಂಘೋಷಿತ ದೇವಮಾನವನಾಗಿ ಗುರುತಿಸಿಕೊಂಡಿರುವ ರಾಮ್ ರಹೀಮ್ಗೆ ಈ ಬಾರಿ 30 ದಿನಗಳ ಕಾಲ ಜೈಲಿನಿಂದ ತಾತ್ಕಾಲಿಕ ಬಿಡುಗಡೆ ನೀಡಲಾಗಿದೆ. ಪೆರೋಲ್ ಅವಧಿಯಲ್ಲಿ ಆತ ಹರಿಯಾಣದ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯ ಕಚೇರಿಯಲ್ಲೇ ವಾಸ್ತವ್ಯ ಹೂಡಲಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಮ್ ರಹೀಮ್ಗೆ ಪದೇ ಪದೇ ಪೆರೋಲ್ ನೀಡುತ್ತಿರುವುದು ಮತ್ತೆ ಚರ್ಚೆಗೆ ಕಾರಣವಾಗಿದೆ. ಈ ವರ್ಷದ ಜನವರಿಯಲ್ಲಿ 15ನೇ ಬಾರಿ ಪೆರೋಲ್ ನೀಡಲಾಗಿತ್ತು. ಅದಕ್ಕೂ ಮುನ್ನ 2025ರ ಆಗಸ್ಟ್ನಲ್ಲಿ 40 ದಿನಗಳ ಕಾಲ, ಏಪ್ರಿಲ್ನಲ್ಲಿ 21 ದಿನಗಳ ಕಾಲ ಹಾಗೂ 2025ರ ಜನವರಿಯಲ್ಲಿ 30 ದಿನಗಳ ಪೆರೋಲ್ ಮಂಜೂರಾಗಿತ್ತು.
ಗುರ್ಮೀತ್ ರಾಮ್ ರಹೀಮ್ ವಿರುದ್ಧ ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲಿನ ಅತ್ಯಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2017ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ 2019ರಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲೂ ರಾಮ್ ರಹೀಮ್ ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಪುನಃ ಪುನಃ ಪೆರೋಲ್ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿದ್ದು, ಪ್ರಕರಣವು ದೇಶದಾದ್ಯಂತ ಗಮನ ಸೆಳೆಯುತ್ತಿದೆ.

- Advertisement -spot_img

More articles

- Advertisement -spot_img

Latest article