ಗುಜರಾತ್ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ಇಲ್ಲಿ ನಾವು ಸುಮ್ಮನಿದ್ರೂ ಗೆಲ್ಲುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತ್ನಾಡಿದ ಅವರು, ನಾವು ಯಾವ ತಂತ್ರಗಾರಿಕೆ ಮಾಡುವ ಅವಶ್ಯಕತೆಯೂ ಇಲ್ಲ. ಗುಜರಾತ್ ನಲ್ಲಿ AAP ಪಕ್ಷಕ್ಕೆ ಬಿಜೆಪಿಯೇ ಫಂಡ್ ಮಾಡಿದೆ. ಗುಜರಾತ್ ನಲ್ಲಿ ಹಣದ ಹೊಳೆ ಹರಿಸಿ AAP ಚುನಾವಣೆ ಎದುರಿಸಿದ್ರು. ಇದರಿಂದ ಗುಜರಾತ್ ನಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುವಂತಾಗಿದೆ. ಕಾಂಗ್ರೆಸ್ಗಿಂತಲೂ AAPನವರು ಹೆಚ್ಚು ಪ್ರಚಾರ ಮಾಡಿದ್ರು. ಆದರೂ AAP ಪಕ್ಷಕ್ಕೆ ಕಡಿಮೆ ಸೀಟುಗಳು ಬಂದಿವೆ. ಇದಕ್ಕೆ ಬಿಜೆಪಿ ತಂತ್ರಗಾರಿಕೆ ಮಾಡಿದೆ, ಇದು ರಾಜ್ಯದಲ್ಲಿ ನಡೆಯಲ್ಲ. JDS ಹೊಸ ಪಕ್ಷವಲ್ಲ, ಹಲವಾರು ಬಾರಿ ಚುನಾವಣೆ ಎದುರಿಸಿದೆ ಎಂದು ತಿಳಿಸಿದ್ರು..
ಗುಜರಾತ್ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ



