No menu items!
12.4 C
Munich
Wednesday, April 29, 2026

ಮಳವಳ್ಳಿ ವಿಧಾನಸಭಾ ಕ್ಷೇತ್ರದ ರಾಜಕೀಯ ಬಲು ಕುತೂಹಲಕಾರಿ..!

Must read

ಮಳವಳ್ಳಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯಲ್ಲೂ 2008ರ ರಾಜಕೀಯ ಚಿತ್ರಣವೇ ಮರುಕಳಿಸುತ್ತಾ ಅನ್ನೋ ಕುತೂಹಲ ಮೂಡಿದೆ. 2008ರಲ್ಲಿ ನರೇಂದ್ರ ಸ್ವಾಮಿಗೆ ಬಿಟ್ಟು ಯಮದೂರು ಸಿದ್ದರಾಜುಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು.

ಆ ವೇಳೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ನರೇಂದ್ರ ಸ್ವಾಮಿ ಗೆಲುವು ಸಾಧಿಸಿದ್ದರು. ಜೊತೆಗೆ ಕಾಂಗ್ರೆಸ್ ಟಿಕೆಟ್ ಸಿಗದ ಸಿಟ್ಟಿಗೆ ಅಂದಿನ KPCC ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನಾ ಖರ್ಗೆ ಭಾವಚಿತ್ರಕ್ಕೆ ಚಪ್ಪಲಿ ಏಟು ಕೊಟ್ಟಿದ್ದರು. ಇದೀಗ AICC ಅಧ್ಯಕ್ಷರಾಗಿ ಮಲ್ಲಿಕಾರ್ಜುನಾ ಖರ್ಗೆಯವರೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಸಮಾಧಾನಿತ ನಾಯಕರು ಗೌಪ್ಯ ಸಭೆ ನಡೆಸಿ ನರೇಂದ್ರ ಸ್ವಾಮಿಗೆ ಬದಲು ಡಾ.ಮೂರ್ತಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.

 


ಮಂಡ್ಯ ಹಾಗೂ ಮಳವಳ್ಳಿಯಲ್ಲಿ ಆದರ್ಶ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಡಾ.ಮೂರ್ತಿ ಈ ಹಿಂದೆ BSR ಕಾಂಗ್ರೆಸ್ನಿಂದ ಸ್ಪರ್ಧಿಸಿ 26 ಸಾವಿರ ಮತ ಪಡೆದಿದ್ದರು.

ಈ ಬಾರಿಯೂ ಮೂರ್ತಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿರುವ ಕೈ ಅಸಮಾದಾನಿತರು, AICC ಅಧ್ಯಕ್ಷ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ಭೇಟಿಗೆ ನಿರ್ಧರಿಸಿದ್ದಾರೆ. ಈ ಮೂಲಕ ನರೇಂದ್ರ ಸ್ವಾಮಿಗೆ ಶಾಕ್ ನೀಡಲು ಮುಂದಾಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article