ಚ್ಯಾಟಿಂಗ್ ಲವ್ ಹೇಗೆ ಕೊನೆಯಾಯ್ತು ಅಂತ ನೀವೇ ನೋಡಿ..!

1
82
ಅವನು ದಿನಕ್ಕೆ ಕನಿಷ್ಟ ಐದಾರು ಗಂಟೆ ಚ್ಯಾಟಿಂಗಲ್ಲೇ ಕಾಲ ಕಳೀತಿದ್ದ..! ಫೇಸ್ ಬುಕ್ಕು, ವಾಟ್ಸಾಪ್, ಒಮೇಗಲ್, ಇಂಡಿಯಾ ಚ್ಯಾಟ್ ಹೀಗೇ..! ಸಿಕ್ಕಸಿಕ್ಕ ಚ್ಯಾಟಿಂಗ್ ಸೈಟಲ್ಲೆಲ್ಲಾ ಇವನು ಮೆಂಬರ್ರು..! ಮಾತೆತ್ತಿದ್ರೆ ಆಶಾಳ ಅಂತ ಕೇಳೋನು..! ಆ ಕಡೆಯಿಂದರ್  ಅಂತ ರಿಪ್ಲೆ ಬಂದ್ರೆ ಚ್ಯಾಟಿಂಗೋ ಚ್ಯಾಟಿಂಗು..! ಅವಳು ಪಕ್ಕದ ಕಲಾಸಿಪಾಳ್ಯದವಳಾದ್ರೂ ಪರವಾಗಿಲ್ಲ, ದೂರದ ನ್ಯೂಯಾರ್ಕ್ ನವಳಾದ್ರೂ ಪರ್ವಾಗಿಲ್ಲ..! ಚ್ಯಾಟಿಂಗ್ ಚ್ಯಾಟಿಂಗ್ ಚ್ಯಾಟಿಂಗ್..! ಫ್ರೆಂಡ್ಸೆಲ್ಲಾ ಅವನನ್ನು ಚ್ಯಾಟಿಂಗ್ ಚಂದನ್ ಅಂತಾನೇ ಕರೆಯೋರು. ಅಷ್ಟರ ಮಟ್ಟಿಗೆ ಅವನು ಚ್ಯಾಟಿಂಗ್ ಒಳಗೆ ಮುಳುಗಿಹೋಗಿದ್ದ…! ಕೆಲಸ ಮುಗೀತು ಅಂದ್ರೆ ಅವನ ಪರಮೋಚ್ಛ ಕೆಲಸ ಚ್ಯಾಟಿಂಗ್ ಶುರು ಮಡೋದು, ಆಫೀಸಲ್ಲೂ ಒಂದು ಟ್ಯಾಬಲ್ಲಿ ಯಾವುದಾದ್ರೂ ಒಂದು ಚ್ಯಾಟಿಂಗ್ ಸೈಟ್ ಓಪನ್ ಇದ್ದೇ ಇರ್ತಿತ್ತು..! ಅವನು ಇದ್ದಿದ್ದು ಒಂದು ಬಾಯ್ಸ್ ಪಿ.ಜಿಯಲ್ಲಿ. ಅಲ್ಲಿ 12 ರೂಂ ಇತ್ತು..! ಅಕ್ಕಪಕ್ಕದ ರೂಮಿನವರು ಬಂದು ಚ್ಯಾಟಿಂಗ್ ಚಂದನ್ ರೂಮಿಗೆ ಬಂದು ಅವನನ್ನು ಮಾತಾಡಿಸಿದ್ರೂ ಸಹ, ಅವನು ಮಾತಿನ ಜೊತೆಗೇ ಇನ್ಯಾರದೋ ಜೊತೆಗೆ ಚ್ಯಾಟಿಂಗ್ ಮಾಡ್ತಿದ್ದ..! ಅವನ ಕ್ಲೋಸ್ ಫ್ರೆಂಡ್ ಸುಮಂತ್ ಅಂತೂ ಇವನ ಚ್ಯಾಟಿಂಗ್ ಹಾವಳಿಗೆ ಬೇಸತ್ತು ಹೋಗಿದ್ದ..! `ಲೋ ಬಿಡೋ ಮಗಾ, ಯಾವಳೂ ಚ್ಯಾಟಿಂಗಲ್ಲಿ ನಿಂಗೆ ಸಿಗಲ್ಲ, ನೀನ್ ಬಿಡಲ್ಲ’ ಅಂತ ರೇಗಿಸ್ತಿದ್ದ..! ಆದ್ರೂ ಚಂದನ್ ಗೆ ಕಾನ್ಫಿಡೆನ್ಸ್ ಇತ್ತು, ಯಾವತ್ತಿದ್ರೂ ಒಂದು ದಿನ ಯಾರಾದ್ರೂ ಒಬ್ಬಳು ಸಿಕ್ಕೇ ಸಿಗ್ತಾಳೆ ಅಂತ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಅವತ್ತು ಶನಿವಾರ, ಆಫೀಸ್ ರಜಾ ಇತ್ತು. ಚಂದನ್ ಚ್ಯಾಟಿಂಗಲ್ಲಿ ಫುಲ್ ಬಿಜಿ ಆಗಿದ್ದ. ಇದ್ದಕ್ಕಿದ್ದ ಹಾಗೇ ಒಂದು ಫ್ರೆಂಡ್ ರಿಕ್ವೆಸ್ಟ್ ಫೇಸ್ ಬುಕ್ಕಿಗೆ ಬಂತು, `ನಿಕ್ಕಿ ಸ್ವೀಟಿ’ ಅಂತ..! ನೋಟಿಫಿಕೇಶನ್ ಬರೋದ್ರೊಳಗೆ ಅದನ್ನು ಓಪನ್ ಮಾಡಿದ್ದ ಚಂದನ್..! ಹುಡುಗಿ ಬೆಳ್ಳಗಿದ್ದಾಳೆ, ಇಂಡಿಯಾದವಳ ತರ ಇಲ್ಲ. ಹೌದು, ಅವಳು ಅಮೆರಿಕದ ಹುಡುಗಿ..! ಮ್ಯೂಚುವಲ್ ಫ್ರೆಂಡ್ಸ್ ಯಾರೂ ಇಲ್ಲ..! ಇವಳು ನಂಗೆ ಹೇಗಪ್ಪಾ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ಲು ಅಂತ ಹುಳ ಬಿಟ್ಕೊಂಡ ಚಂದನ್..! ಅವಳ ಫೋಟೋಸ್ ನೋಡ್ದ, ಹೌದು ಅವಳು ಅಮೆರಿಕದವಳೇ, ಅವಳ ಪ್ರೊಫೈಲ್ ತುಂಬಾ ಅವಳ ಸುಂದರ ಸುಂದರ ಫೋಟೋಗಳು ತುಂಬಿಹೋಗಿವೆ..! ದೂಸ್ರಾ ಮಾತೇ ಇಲ್ಲ, ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟೆಡ್…!
ಆ ಕಡೆ ಅವಳು ಆನ್ ಲೈನ್ ಇದ್ದಾಳೆ, ಚ್ಯಾಟ್ ಮಾಡೋಣ ಅನ್ಕೊಂಡ..! `ಹಾಯ್’ ಅಂತ ಟೈಪ್ ಮಾಡೋದ್ರೊಳಗೆ ಆ ಕಡೆಯಿಂದ ಮೆಸೇಜ್ ಬಂತು. ` ಸಾರಿ, ಬೈ ಮಿಸ್ ಐ ಸೆಂಟ್ ಯೂ ಫ್ರೆಂಡ್ ರಿಕ್ವೆಸ್ಟ್. ಪ್ಲೀಸ್ ಡೋಂಟ್ ಮೈಂಡ್..!’ ಅಯ್ಯಯ್ಯೋ ಲಡ್ಡು ಬಂದು ಬಾಯಿಗೆ ಬಿದ್ದಿತ್ತು, ಇದೇನಪ್ಪಾ ತಿನ್ನೋಕ್ ಮುಂಚೆ ಬಿದ್ದೋಗೋ ತರ ಇದೆ ಅಂತ ಫೀಲ್ ಆಗೋಯ್ತು ಇವನಿಗೆ..! ಟೈಪ್ ಮಾಡಿಯೇ ಬಿಟ್ಟ, `ಇಟ್ಸ್ ಓಕೆ, ನೋ ಪ್ರಾಬ್ಲಂ, ಶಾಲ್ ವಿ ಬಿ ಫ್ರೆಂಡ್ಸ್..? ‘ ಆ ಕಡೆಯಿಂದ ರಿಪ್ಲೇನೂ ಬಂತು..` ಓಕೆ’..! ಈಗ ಆರಂಭವಾಯ್ತು ನೋಡಿ ಚಂದನ್ ಚ್ಯಾಟಿಂಗ್ ಬಾಣಗಳು..! ಮನೆ ಮಠ, ಅಪ್ಪ, ಅಮ್ಮ, ಫ್ಯಾಮಿಲಿ, ಊರು ಕೇರಿ, ಕಾಲೇಜ್, ಫ್ರೆಂಡ್ಸ್ ಹೀಗೆ ಎಲ್ಲಾ ಡಿಟೇಲ್ಸ್ ಕೊಟ್ಟ, ಅವಳಿಂದಾನೂ ತಗೊಂಡ..ಇಬ್ಬರ ಚ್ಯಾಟಿಂಗ್ ಹೀಗೇ 3 ಗಂಟೆ ನಡೀತು..! ಅಲ್ಲೀಗ ಟೈಮೆಷ್ಟು..? ಇಲ್ಲೀಗ ಇಷ್ಟು..! ಐ ಲೈಕ್ ನ್ಯೂಯಾರ್ಕ್, ಐ ಲವ್ ಪಿಜ್ಜಾ, ಮೈ ಆಂಟಿ ಈಸ್ ಇನ್ ಅಮೆರಿಕ… ಹಿಂಗೇ ಪುಂಖಾನುಪುಂಖವಾಗಿ ಬಾಣ ಬಿಡ್ತಾನೇ ಇದ್ದ..! ಅವಳೂ ಫುಲ್ ಇಂಪ್ರೆಸ್ ಆಗಿ ಚ್ಯಾಟಿಂಗ್ ಮಾಡ್ತಾನೇ ಇದ್ಲು…! ಕೊನೆಗೂ ಒಂದು ಹಕ್ಕಿ ಸಿಕ್ಕೇಬಿಡ್ತು, ಅದೂ `ಫಾರಿನ್ ಹಕ್ಕಿ’ ಅಂತ ಫುಲ್ ಜೋಶಲ್ಲಿದ್ದ ಚಂದನ್..!
ಹೀಗೇ ಚ್ಯಾಟ್ ಪ್ರಸಂಗ ನಡೀತಾನೇ ಇತ್ತು..! ರಾತ್ರಿ-ಹಗಲು ನಿಕ್ಕಿ-ಚಂದನ್ ಮಾತಾಡಿದ್ದೇ ಮಾತಾಡಿದ್ದು..! ಇವನು ಡಿಫರೆಂಟ್ ಡಿಫರೆಂಟ್ ಸೆಲ್ಫಿ ಹೊಡೆದೂ ಹೊಡೆದೂ ಅವಳಿಗೆ ಕಳ್ಸಿದ್ದೇ ಕಳ್ಸಿದ್ದು..! ಹೀಗೇ ಸಾಗಿದ ಚ್ಯಾಟಿಂಗ್ 3-4 ದಿನ ನಡೀತು..! ಚಂದನ್ ಫುಲ್ ಅಡಿಕ್ಟ್ ಆಗಿಬಿಟ್ಟಿದ್ದ. ಈ ಕಡೆ ಫ್ರೆಂಡ್ಸ್ ಕರೆದರೂ ಎಲ್ಲಿಗೂ ಬರ್ತಿರಲಿಲ್ಲ. ಸುಮಂತ್ ಬಂದು ಕರೆದರೂ ಅವನ ಉತ್ತರ ಒಂದೇ, `ನೀವ್ ಹೋಗ್ರೋ, ನಾನ್ ಸ್ವಲ್ಪ ಬಿಜಿ’..! ಅವನು ಯಾವುದ್ರಲ್ಲಿ ಬಿಜಿ ಅಂತ ಸುಮಂತ್ ಗೂ ಗೊತ್ತಿತ್ತು. ಸೋ `ಹಾಳಾಗ್ ಹೋಗು ಮಗನೇ’ ಅಂತ ಬೈಕೊಂಡು ಹೋಗ್ತಿದ್ದ…! ಒಂದು ದಿನ ಚ್ಯಾಟ್ ಮಾಡ್ತಾ ಮಾಡ್ತಾ ನಿಕ್ಕಿಗೆ `ಐ ಲವ್ ಯೂ’ ಅಂತ ಹೇಳೇಬಿಟ್ಟ ಚಂದನ್..! ಅವಳೂ ಶಾಕ್.. `ವಾಟ್ ..?’ ಅಂದ್ಲು… `ಯೆಸ್, ಐ ಲವ್ ಯೂ ಸೋ ಮಚ್’ ಅಂದ..! ಅವಳಿಗೆ ಏನು ಹೇಳ್ಬೇಕೋ ಗೊತ್ತಾಗಲಿಲ್ಲ..! `ನಾನು ಅಮೆರಿಕದಲ್ಲಿ, ನೀನು ಇಂಡಿಯಾದಲ್ಲಿ, ಇದೆಲ್ಲ ಚಾನ್ಸೇ ಇಲ್ಲ’ ಅಂದ್ಲು..! `ಪ್ರೀತಿ ನಿಜವಾಗಿದ್ರೆ ಖಂಡಿತ ನಮ್ಮ ಲವ್ ಸಕ್ಸಸ್ ಆಗುತ್ತೆ’ ಅಂದ..! ಅವಳೂ ಆಗಿದ್ದಾಗ್ಲಿ ಅಂತ `ಓಕೆ’ ಅಂತ ಹೇಳೇಬಿಟ್ಲು..!  ಅಷ್ಟೆ.. ಆಮೇಲೆ ಬರೀ ಡೇ ಅಂಡ್ ನೈಟ್ ಚ್ಯಾಟಿಂಗ್.. ಅವಳು ಅವನನ್ನು ಅಮೆರಿಕಕ್ಕೆ ಬಾ ಅಂದ್ಲು. ಇವನು ಅದಷ್ಟು ಸುಲಭ ಇಲ್ಲ ಅನ್ನೋದನ್ನು ಅವಳಿಗೆ ಮನವರಿಕೆ ಮಾಡಿಸ್ದ..!  ಅವಳು `ನಾನೇ ಬರ್ತೀನಿ’ ಅಂತ ಒಪ್ಪಿಕೊಂಡ್ಲು..! ಇವನಿಗೆ ತನ್ನ ಪ್ರೀತಿಯ ಭರವಸೆ ಜಾಸ್ತಿ ಆಯ್ತು..! `ನಿಜವಾಗ್ಲೂ ಬರ್ತಿಯಾ..? ಅಂತ ಕೇಳ್ದ.. ಐ ಡೋಂಟ್ ಲೈ ಅಂತ ಅವಳು ಇಪ್ಲೆ ಕೊಟ್ಲು..! ಹೀಗೇ ಮತ್ತೊಂದು ವಾರ ಕಳೀತು, ವೀಸಾ ರೆಡಿ ಇದೆ ಅಂತ ಅವಳು ಮೆಸೇಜ್ ಕಳಿಸಿದ್ಲು..! ಇದೇ ತಿಂಗಳು 19ನೇ ತಾರೀಕು ನಾನಿಲ್ಲಿಂದ ಹೊರಡ್ತೀನಿ, ಐ ವಿಲ್ ರೀಚ್ ಮುಂಬೈ ಆನ್ ಟ್ವೆಂಟಿಯತ್. ಸೇಮ್ ಡೇ ಐ ಹ್ಯಾವ್ ಫ್ಲೈಟ್ ಟು ಬ್ಯಾಂಗಲೋರ್’ ಅಂದ್ಲು..! ಇವನಿಗೆ ಕನಸೋ ನನಸೋ ಗೊತ್ತಾಗ್ತಿಲ್ಲ..! ಆಗಿದ್ದಾಗ್ಲಿ ಅಂತ ಸುಮಂತ್ ಗೆ ಕರೆದು ನಡೆದಿದ್ದೆಲ್ಲಾ ಹೇಳ್ದ..! ಅವನಿಗೆ ಏನು ಹೇಳ್ಬೇಕೋ ಗೊತ್ತಾಗಲಿಲ್ಲ..ಸುಮ್ಮನಾದ..! ಸುಮಂತ್ ನ ಕರ್ಕೊಂಡ್ ಹೋಗಿ ಅವಳಿಗೊಂದು ಗಿಫ್ಟ್, ಇವನಿಗೆ ಹೊಸ ಬಟ್ಟೆ ಎಲ್ಲಾ ತಗೊಂಡು ಆ ದಿನಕ್ಕೆ ಫುಲ್ ರೆಡಿಯಾಗಿದ್ದ ಚಂದನ್..! 20ನೇ ತಾರೀಕು 5 ಗಂಟೆಗೆ ಬೆಂಗಳೂರು ಏರ್ ಪೋರ್ಟ್ ಗೆ ಬರ್ತೀನಿ ಅಂದಿದ್ಲು ಅವಳು..! ಇವನು ಒಂದು ಗಂಟೆ ಮುಂಚೇನೇ ಹೋಗಿ ಏರ್ ಪೋರ್ಟಲ್ಲಿ ಕಾದುಕೂತ..! ಗಂಟೆ ಐದಾಯ್ತು, ಆರಾಯ್ತು, ಏಳಾಯ್ತು..! ನೋ, ಅವಳ ಸುದ್ದೀನೇ ಇಲ್ಲ..! ಅವಳ ಫೇಸ್ ಬುಕ್ ಅಕೌಂಟ್ ಇದ್ದಕ್ಕಿದ್ದ ಹಾಗೇ ಡಿಲೀಟ್ ಆಗಿತ್ತು..! ಇವನಿಗೆ ಕೈಕಾಲು ನಡುಗೋಕೆ ಶುರುವಾಯ್ತು..! ಫೋನ್ ಮಡೋಕೆ ಯಾವ ನಂಬರ್ರೂ ಇಲ್ಲ..! ಕಾದು ಕೂತಿದ್ದವನ ಎದುರಿಗೆ ಬಂದು ಕೂತಿದ್ದು ಅವನ ಫ್ರೆಂಡ್ ಸುಮಂತ್..! `ಏನಾಯ್ತೋ..? ನಿನ್ನ ಹುಡುಗಿ ಬರ್ಲಿಲ್ವಾ..?’ ಅಂತ ಕೇಳ್ದ..! `ಇವನ ಕಣ್ಣಲ್ಲಿ ನೀರು ತುಂಬಿತ್ತು, ಇಲ್ಲ ಮಗಾ, ಅವಳ ಫೇಸ್ ಬುಕ್ ಪೇಜೂ ಡಿಲೀಟ್ ಆಗಿದೆ. ಏನಾಯ್ತು ಅಂತಾನೇ ಗೊತ್ತಾಗ್ತಿಲ್ಲ ಅಂದ. ಸುಮಂತ್ ಅವನ ಮೊಬೈಲ್ ತೆಗೆದು ಆ ಹುಡುಗಿಯ ಜೊತೆಗೆ ಚಂದನ್ ಮಾಡಿದ್ದ ಅಷ್ಟೂ ಚ್ಯಾಟಿಂಗ್ ಸ್ಕ್ರೀನ್ ಶಾಟ್ ತೋರಿಸ್ದ..! ಚಂದನ್ ಶಾಕ್ ಆಗಿಬಿಟ್ಟ.. `ನಿನ್ನ ಹತ್ತಿರ ಇದೆಲ್ಲಾ ಹೇಗೆ ಬಂತು’ ಅಂದ..! ಇಷ್ಟು ದಿನ ನಿಕ್ಕಿ ಅಂತ ನಿನ್ನ ಜೊತೆ ಚ್ಯಾಟ್ ಮಾಡ್ತಾ ಇದ್ದಿದ್ದು ನಾನೇ, ನಿನ್ನ ಈ ಚ್ಯಾಟಿಂಗ್ ಚಟ ಕಮ್ಮಿ ಮಾಡೋಕೆ ನಾನೇ ಅವಳ ಹೆಸರಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ನಿನ್ನ ಆಟ ಆಡಿಸ್ದೆ..! ಈ ಚ್ಯಾಟಿಂಗ್ ಪ್ರಪಂಚದಲ್ಲಿ ಲವ್ ಮಾಡೋದು, ಮೀಟ್ ಮಾಡೋದು ಎಲ್ಲಾ ತಮಾಷೆ ಅಲ್ಲ..! ಅದೂ ಇಂಟರ್ ನ್ಯಾಶನಲ್ ಲವ್ ಮಾಡ್ತೀನಿ ಅಂತ ಹೋಗಿದ್ಯಲ್ಲಾ, ನಿಂಗೇನಾದ್ರೂ ಬುದ್ದಿ ಇದಿಯ..? ಇನ್ನು ಮುಂದಾದ್ರೂ ಚ್ಯಾಟಿಂಗ್ ಬಿಟ್ಟು ಬೇರೆ ಕೆಲಸದ ಕಡೆ ಗಮನಹರಿಸು..! ಅಮೆರಿಕದಿಂದ ನಿನ್ನ ನೋಡೋಕೆ ಯಾವುದೋ ಹುಡುಗಿ ಲವ್ ಮಾಡೋಕೆ ಬರ್ತಾಳೆ ಅನ್ನೋ ನಂಬಿಕೆ ಇಟ್ಟು ಮೂರ್ಖ ಆಗ್ಬೇಡ ಅಂತ ಬುದ್ಧಿ ಹೇಳ್ತಾನೆ..! ಚಂದನ್ ಮುಖ ಸೆಪ್ಪಗಾಗಿತ್ತು..! ತಾನು ಚ್ಯಾಟಿಂಗ್ ಚ್ಯಾಟಿಂಗ್ ಅಂತ ಮೂರು ಹೊತ್ತು ಕಳೀತಾ ಇದ್ದಿದ್ದಕ್ಕೆ ಸರಿಯಾಗೇ ಆಗಿದೆ ಅಂತ ಅವನಿಗೂ ಅರಿವಾಗಿತ್ತು..! ಇನ್ನು ಮುಂದೇ ಯಾವತ್ತೂ ಚ್ಯಾಟಿಂಗ್ ಅಂತ ಟೈಂ ವೇಸ್ಟ್ ಮಾಡಲ್ಲ ಮಗಾ ಅಂತ ಪ್ರಾಮಿಸ್ ಮಾಡಿ ಅಲ್ಲಿಂದ ಹೊರಟ..! ಇವತ್ತು ಚ್ಯಾಟಿಂಗ್ ಮಾಡೋ ಟೈಮಲ್ಲಿ ಬೇರೆಬೇರೆ ಕೆಲಸ ಮಾಡ್ತಾನೆ, ಫ್ರೀ ಟೈಮಲ್ಲಿ ಒಂದಷ್ಟು ಪುಡಿಗಾಸು ದುಡೀತಾನೆ ಚಂದನ್..! ನೀವೂ ಚ್ಯಾಟಿಂಗ್ ಪ್ರಪಂಚದಲ್ಲಿ ಯಾಮಾರಬೇಡಿ..! ಕಾಲಹರಣ ಬಿಟ್ರೆ ಬೇರೆ ಯಾವ ಲಾಭವೂ ಇಲ್ಲ..!
– ಕೀರ್ತಿ ಶಂಕರಘಟ್ಟ

1 COMMENT

LEAVE A REPLY

Please enter your comment!
Please enter your name here