ಬಿಬಿಎಂಪಿ & ಗುತ್ತಿಗೆದಾರರು GST ಕಟ್ಟುತ್ತಿಲ್ಲ

0
3

ಬೆಂಗಳೂರು : ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಬಿಬಿಎಂಪಿ & ಗುತ್ತಿಗೆದಾರರು GST ಕಟ್ಟುತ್ತಿಲ್ಲ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಮಾಹಿತಿ ಹಕ್ಕು ಅಧ್ಯಯನ ಕೇಂದ್ರವು ಬಿಬಿಎಂಪಿ ಮೇಲೆ ಗಂಭೀರ ಆರೋಪ ಮಾಡಿದ್ದು, ಬಿಬಿಎಂಪಿಯು ಯಾವ ಟೆಂಡರ್ ಗೂ GST ಕಟ್ಟಲಾಗುತ್ತಿಲ್ಲ ಎಂದು ಆರೋಪ ಮಾಡಿದೆ.

 

 

ಕೇಂದ್ರದ One Nationa – One Tax ಅಡಿಯಲ್ಲಿ ಕಡ್ಡಾಯವಾಗಿ GST ಕಟ್ಟಬೇಕು ಎನ್ನುವ ನಿಯಮವಿದೆ. ಆದರೆ ಬಿಬಿಎಂಪಿಯಲ್ಲಿ ಬಿಡುಗಡೆಯಾಗುತ್ತಿರುವ ಎಲ್ಲಾ ಕಾಮಗಾರಿಯ ಬಿಲ್ ಗಳಿಗೆ GST Invoice ಮಾಡಲಾಗುತ್ತಿಲ್ಲ. ಈ ಮೂಲಕ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸೇರಿ ಸರ್ಕಾರಕ್ಕೆ GST ಕಟ್ಟದೆ ಮೋಸ ಮಾಡುತ್ತಿದೆ. ದಾಸರಹಳ್ಳಿ ವಲಯದಲ್ಲಿ ಮಾಡಲಾದ ರಸ್ತೆ ಕಾಮಗಾರಿಯ ಬಿಲ್ ನಲ್ಲಿ ಈ‌ ವಿಚಾರ ಬಹಿರಂಗವಾಗಿದ್ದು, 2017ರಿಂದ 2022ರ ವರೆಗೂ ಸಾವಿರ ಕೋಟಿಗೂ ಅಧಿಕ ಮೊತ್ತದ GSTಯನ್ನು ಕೇಂದ್ರಕ್ಕೆ ಕಟ್ಟಿಲ್ಲ ಎಂದು ಮಾಹಿತಿ ಹಕ್ಕು ಕೇಂದ್ರದಿಂದ ಪ್ರಧಾನಿ ಮೋದಿ ಕಚೇರಿಗೆ ಈ ಮೇಲ್ ಮೂಲಕ ದೂರು ಬಂದಿದೆ.

LEAVE A REPLY

Please enter your comment!
Please enter your name here