ಇಂದಿನ ಟಾಪ್ 10 ಸುದ್ದಿಗಳು..! 06.01.2016

1
71

1. ಪ್ರಧಾನಿ ಮೋದಿ ವಿರುದ್ಧ ಟಿಎಂಸಿ ಸಂಸದನಿಂದ ಆರೋಪ

ಟಿಎಂಸಿ ಸಂಸದ ಇದ್ರಿಸ್ ಅಲಿ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದಾರೆ ಈ ಕಾರಣಕ್ಕಾಗಿಯೇ ಪಠಾಣ ಕೋಟ್ ಮೇಲೆ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ನರೇಂದ್ರ ಮೋದಿ ಭೇಟಿ ನೀಡಿದ ನಂತರವೇ ಪಠಾಣ್ ಕೋಟ್ ಮೇಲೆ ದಾಳಿ ನಡೆದಿದೆ. ಹೀಗಾಗಿ ಮೋದಿಗೆ ಉಗ್ರರ ಜೊತೆ ನಂಟಿದೆ, ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.

2. ಸಮ-ಬೆಸ ಪ್ರಾಯೋಗಿಕ ಜಾರಿ 1 ವಾರಕ್ಕೆ ಸೀಮಿತಗೊಳಿಸಿ: ಹೈಕೋರ್ಟ್

ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ 15 ದಿನಗಳ ಕಾಲ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮದ ಅವಧಿಯನ್ನು ಒಂದು ವಾರಕ್ಕೆ ಸೀಮಿತಗೊಳಿಸುವಂತೆ ದೆಹಲಿ ಹೈಕೋಟರ್್ ಬುಧವಾರ ಆಪ್ ಸರ್ಕಾರಕ್ಕೆ ಸೂಚಿಸಿದೆ.

3. 2ನೇ ಅವಧಿಗೂ ಬಿಜೆಪಿ ಅಧ್ಯಕ್ಷರಾಗಿ ಅಮಿತ್ ಶಾ ಆಯ್ಕೆ..?

ಬಿಹಾರ ವಿಧಾನಸಭೆ ಚುನಾವಣೆಯ ಸೋಲಿನ ಹೊರತಾಗಿಯೂ ಅಮಿತ್ ಶಾರವರು ಎರಡನೇ ಅವಧಿಗೂ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಈ ತಿಂಗಳಾಂತ್ಯಕ್ಕೆ ಅಮಿತ್ ಶಾರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡುವುದರೊಂದಿಗೆ ಕಳಪೆ ಪ್ರದರ್ಶನ ನೀಡಿದ ಕನಿಷ್ಠ ಒಬ್ಬ ಸಚಿವರು ಸೇರಿದಂತೆ ಕೆಲವು ಹೊಸಬರನ್ನು ಅಮಿತ್ ಶಾ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

4. ಮಧುರೈ ಮೀನಾಕ್ಷಿ ದೇಗುಲದ ಬಳಿ ಬಾಂಬ್ ಸ್ಪೋಟ
ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯವಾದ ಮಧುರೈ ಮೀನಾಕ್ಷಿ ದೇವಾಲಯದ ಬಳಿ ಪೆಟ್ರೋಲ್ ಬಾಂಬೊಂದು ಸ್ಪೋಟಗೊಂಡಿದೆ.
ಕಳೆದ ರಾತ್ರಿ ದುಷ್ಕರ್ಮಿಗಳು ದೇವಾಲಯದ ಬಳಿ ಮೂರು ಪೆಟ್ರೋಲ್ ಬಾಂಬ್ ಗಳನ್ನು ಎಸೆದು ಪರಾರಿಯಾಗಿದ್ದು, ಮೂರು ಬಾಂಬ್ ಗಳಲ್ಲಿ ಒಂದು ಪೆಟ್ರೋಲ್ ಬಾಂಬ್ ಸ್ಪೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

5. ಜನರನ್ನು ವಂಚಿಸುತ್ತಿದ್ದ 10 ಮಂದಿ ಬಂಧನ
ಅದೃಷ್ಟದ ಚೊಂಬು ತೋರಿಸಿ ಜನರಿಗೆ ಮಂಕು ಬೂದಿ ಎರಚುತ್ತಿದ್ದ 10 ಮಂದಿ ವಂಚಕರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅದೃಷ್ಟದ ಚೊಂಬು ಮನೆಯಲ್ಲಿಟ್ಟು ಪೂಜೆಸಿದರೆ ಅದೃಷ್ಟ, ಆರೋಗ್ಯ, ಐಶ್ವರ್ಯ ಲಭಿಸುತ್ತದೆ ಎಂದು ಹೇಳಿ ಖಾಸಗಿ ಕಂಪನಿಯ ಸಿಇಓ ಒಬ್ಬರಿಗೆ ವಂಚನೆ ಮಾಡಲು ಯತ್ನಿಸುತ್ತಿದ್ದ ವೇಳೆ 10 ಮಂದಿಯನ್ನು ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

6. ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ರಾಮಕೃಷ್ಣನ್ ಭಾಗವಹಿಸುವುದಿಲ್ಲ
ನೋಬೆಲ್ ಪ್ರಶಸ್ತಿ ಪುರಸ್ಕೃತ, ಭಾರತೀಯ ಸಂಜಾತ ವೆಂಕಟ್ರಾಮನ್ ರಾಮಕೃಷ್ಣನ್ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ.
ಹಿಂದೆ ಈ ಸಮಾವೇಶದಲ್ಲಿ ಭಾಗವಹಿಸಿರುವ ಅವರು, ಇಲ್ಲಿ ಕೆಲವೇ ಹೊತ್ತು ವಿಜ್ಞಾನದ ಚರ್ಚೆ ನಡೆಸುತ್ತಾರೆ.ಇದೊಂದು ಸರ್ಕಸ್ ಆದ್ದರಿಂದ ಇಂಥಾ ಸಮಾವೇಶದಲ್ಲಿ ಭಾಗವಹಿಸಲಾರೆ ಎಂದು ಅವರು ಈ ಬಾರಿಯ ಸಮಾವೇಶದ ಭಾಗಿಯಾಗಲು ನಿರಾಕರಿಸಿದ್ದಾರೆ.

7. ಫೆ. 27ಕ್ಕೆ ನಟ ಸಂಜಯ್ ದತ್ ಬಿಡುಗಡೆ..?
1993ರ ಮುಂಬೈ ಸರಣಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ 5 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಬಾಲಿವುಡ್ ನಟ ಸಂಜಯ್ ದತ್ ಫೆ.37ರಂದು ಯರವಾಡ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಅವಧಿಗೂ ಮುನ್ನವೇ ಸಂಜಯ್ ರಿಲೀಸ್ ಆಗುವ ಬಗ್ಗೆ ವರದಿಯಾಗಿದೆ.

8. ಮಲೆನಾಡ ಗಾಂಧಿ ಗೋವಿಂದೇಗೌಡರು ಇನ್ನಿಲ್ಲ
ಮಲೆನಾಡ ಗಾಂಧಿ ಎಂದೇ ಕರೆಯಲ್ಪಡುತ್ತಿದ್ದ ಶಿಕ್ಷಣ ತಜ್ಞ, ಮಾಜಿ ಶಿಕ್ಷಣ ಸಚಿವ ಗೋವಿಂದೇ ಗೌಡರು ಶೃಂಗೇರಿ ಸಮೀಪದ ಕೊಪ್ಪದ ಮಣಿಪುರ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. 90 ವರ್ಷದ ತುಂಬು ಜೀವನ ನಡೆಸಿದ ಗೌಡರು 2 ಬಾರಿ ಶಿಕ್ಷಣ ಸಚಿವರಾಗಿದ್ದರು.

9. ಕಾವೇರಿ ಸ್ವಚ್ಛಗೊಳಿಸುವ ಯೋಜನೆಯೇ ಇಲ್ವಂತೆ..!
ಕಾವೇರಿ ನದಿಯನ್ನು ಸ್ವಚ್ಛಗೊಳಿಸುವ ಯಾವುದೇ ಯೋಜನೆ ನಮ್ಮ ಮುಂದಿಲ್ಲ ಎಂದು ಕೈಗಾರಿಕ ಮತ್ತು ಪ್ರವಾಸೋಧ್ಯಮ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.
ಸುದ್ದಿಗಾರರೊಡನೆ ಮಾತಾಡಿದ ಅವರು ಕಾವೇರಿ ನದಿಗೆ ಇರುವ ಅಪಾಯ ತಿಳಿಯಲು ಗ್ಯಾಲರಿ ಸ್ಥಾಪಿಸಲು ಚಿಂತನೆ ನಡೆಸಿದ್ದೇವೆ ಎಂದೂ ಹೇಳಿದರು.

10. ಕೇಜ್ರಿವಾಲ್ 2015ರಲ್ಲಿ ಅತೀ ಹೆಚ್ಚು ದ್ವೇಷಿಸಲ್ಪಟ್ಟ ಭಾರತೀಯ..!
ದೆಹಲಿ ಮುಖ್ಯಮಂತ್ರಿ, ಆಪ್ ನಾಯಕ ಅರವಿಂದ ಕೇಝ್ರಿವಾಲ್ 2015ರಲ್ಲಿ ಅತೀ ಹೆಚ್ಚು ದ್ವೇಷಿಸಲ್ಪಟ್ಟ ಭಾರತೀಯ ಎಂಬ ಕುಖ್ಯಾತಿಗೆ ಭಾಜನರಾಗಿದ್ದಾರೆ.
ಭಾರತೀಯರು ಯಾವುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಯಾವ ವಿಚಾರ ಹೆಚ್ಚು ಚಚರ್ೆಯಾಗಿದೆ ಎಂದು ಸಮೀಕ್ಷೆ ನಡೆಸುವ `ದಿ ಗೂಂಜ್ ಇಂಡಿಯಾ ಇಂಡೆಕ್ಸ್ 2015ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅರವಿಂದ್ ಕೇಜ್ರಿವಾಲ್ 1.99 ಲಕ್ಷ ಮತ ಪಡೆಯುವುರೊಂದಿಗೆ ಮೊದಲ ಅತೀ ಹೆಚ್ಚು ದ್ವೇಷಿಸುವ ಭಾರತೀಯರ ಪಟ್ಟಿಯಲ್ಲಿ ಮೊದಲ ಸ್ಥಾನಿಯಾಗಿದ್ದಾರೆ.

1 COMMENT

LEAVE A REPLY

Please enter your comment!
Please enter your name here