9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!

1
73

ನೀರಲ್ಲಿ ಮುಳುಗೋನಿಗೆ ಹುಲ್ಲುಕಡ್ಡಿಯೆ ಆಸೆರೆ ಎಂಬಂತೆ, ನಮ್ಮಲ್ಲಿರೋ ಛಲವೇ ಬದುಕಿನಲ್ಲಿ ಗೆಲುವನ್ನ ತಂದು ಕೊಡುತ್ತೆ.. ಇಂತಹ ಗೆಲುವನ್ನ ಪಡೆದ ವ್ಯಕ್ತಿಯೇ ಈ ನಮ್ಮ ಸ್ಟೋರಿಯ ರಿಯಲ್ ಹೀರೊ ಕುಗನ್ ತಂಗೀಸುರನ್.. 23ವರ್ಷಗಳ ಹಿಂದೆ ತನ್ನ 8ನೇ ವಯಸ್ಸಿನಲ್ಲಿ ತನ್ನ ತಂದೆಯೊಂದಿಗೆ ಮಲೆಶಿಯಾದ ಪೆನಂಗ್ ನ ಇಂಟರ್ನ್ಯಾಷನಲ್ ಏರ್ಪೋರ್ಟ್ ಗೆ  ಹೋಗಿರ್ತಾನೆ.. ಅದು ಕೂಡ ತನ್ನ ತಂದೆಯನ್ನ ಬೀಳ್ಕೊಡೊಕೆ.. ಈ ಸಂದರ್ಭದಲ್ಲಿ ತುಂಬಾನೇ ಹತ್ತಿರದಿಂದ ವಿಮಾನಗಳ ಹಾರಟವನ್ನ ಕಣ್ಣಲ್ಲಿ ತುಂಬಿಕೊಂಡು, ಲವ್ ಅಟ್ ಫಸ್ಟ್ಸೈಟ್ ಅಂತಾರಲ್ಲ ಹಾಗೆ ತಾನು ಕೂಡ ಇಂತಹ ವಿಮಾನಗಳನ್ನ ಓಡಿಸೋ ಚಾಲಕನಾಗ್ಬೇಕು ಅಂತಾ ಕನಸು ಕಾಣ್ತಾನೆ.. ಯಾರಿಗೆ ಗೊತ್ತು ಯಾರಿಗೆ ಯಾವಾಗ ಏನ್ ಬೇಕಾದ್ರು ಇಷ್ಟ ಆಗಬಹುದ.. ಇದು ಪ್ರಕೃತಿಯ ಸಹಜ ನಿಯಮ ಅಲ್ವಾ.. ಆದ್ರೆ, ಇಷ್ಟ ಆಗಿದನ್ನ ಕನಸು ಕಂಡಿದನ್ನ ಇಡೇರಿಸಿಕೊಳ್ಳೊ, ನನಸು ಮಾಡಿಕೊಳ್ಳೊ ಗುಂಡಿಗೆ ಎಲ್ಲರಿಗೂ ಇರ್ಬೇಕಲ್ಲ.. ಆ ವಿಷ್ಯದಲ್ಲಿ ಕುಗನ್ ಸ್ವಲ್ಪ ಗಟ್ಟಿ ಗುಂಡಿಗೆಯವನೆ ಬಿಡಿ.. ಅದು ಹೇಗೆ ಅಂತಾ ಮುಂದೆ ನಿಮಗೆ ಗೊತ್ತಾಗುತ್ತೆ.. ಯಾಕಂದ್ರೆ 9 ವರ್ಷದ 11 ಪ್ರಯತ್ನಗಳಲ್ಲಿ ಈತ ಕೊನೆಗೂ ಪೈಲೆಟ್ ಆಗಿದ್ದಾನೆ… ಹುಟ್ಟಿದು ಸಾಮಾನ್ಯ ಮದ್ಯಮ ವರ್ಗದ ಕುಟುಂಬದಲ್ಲಿ.. ಹೀಗಿರೋವಾಗ ಪೈಲೆಟ್ ಆಗೋದೆಲ್ಲ ಆಕಾಶದಲ್ಲಿ ಹಾರೋ ವಿಮಾನದಷ್ಟೇ ದೂರದ ಮಾತು ಇವನಿಗೆ.. ಹೀಗಾಗೆ ತನ್ನ ಸ್ಕೂಲ್ನ ಮುಗಿಸಿದ ನಂತರ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಮುಗಿಸಿಕೊಂಡು ಹಲವಾರು ಹೊಟೇಲ್ ಗಳಲ್ಲಿ ತನ್ನ ಹೊಟ್ಟೆ ತುಂಬಿಸಿಕೊಳ್ಳೊಕೆ ಕೆಲಸ ಮಾಡ್ತಾನೆ..ಆದ್ರೆ ತಾನು ಪೈಲೆಟ್ ಆಗೋ ಆಸೆಯನ್ನ ಮಾತ್ರ ಬಿಡೋದಿಲ್ಲ.. ಆ ಸಮಯಕ್ಕಾಗಿ ಕಾಯ್ತನೇ ಇರ್ತಾನೆ.. ಈ ಸಂದರ್ಭದಲ್ಲೇ ಈತನ ಸ್ನೇಹಿತನೊಬ್ಬ ಏರ್ ಏಷ್ಯಾದಲ್ಲಿ ಆಫೀಸ್ ಬಾಯ್ ಜಾಬ್ ಇರೋ ಬಗ್ಗೆ ಮಾಹಿತಿ ನೀಡ್ತಾನೆ..  ಹೇಗಾದ್ರು ಅಲ್ಲಿ ಕೆಲಸಕ್ಕೆ ಸೇರಿಕೊಂಡ್ರೆ ತಾನು ಪೈಲೆಟ್ ಆಗಬಹುದು ಅನ್ನೋ ಆಸೆಯಲ್ಲಿ ಅಲ್ಲಿ ಕೆಲಸಕ್ಕೆ ಹೋಗ್ತಾನೆ.. ಆದ್ರೆ ಈತನಿಗೆ ಅಲ್ಲಿ ಸಿಕ್ಕಿದ್ದು ಮಾತ್ರ ಡಿಸ್ ಪ್ಯಾಚ್ ಬಾಯ್ ಕೆಲಸ.. ತನ್ನ ಗುರಿಯನ್ನ ತಲುಪೋಕೆ ಇದೆ ಮೊದಲ ಮೆಟ್ಟಿಲು ಅಂತಾ ತಿಳಿದುಕೊಂಡು ಆ ಕೆಲಸವನ್ನ ಶ್ರದ್ಧೆಯಿಂದ ಮಾಡೋಕೆ ಶುರು ಮಾಡ್ತಾನೆ.. ಇನ್ನೂ 2006ರಲ್ಲಿ ಕುಗನ್ ಎಕ್ಸಾಂ ಬರೆದು  ಕೆಡೆಟ್ ಪೈಲೆಟ್ ಆಗಿ ಸೆಲೆಕ್ಟ್ ಆಗೇಬಿಡ್ತಾನೆ..

3

ಆನಂತರ ಪೈಲೆಟ್ ಆಗೋದಕ್ಕಾಗಿ ಮತ್ತೆ  ಹಲವಾರು ಟೆಸ್ಟ್ ಗಳನ್ನ ಪಾಸ್ ಮಾಡಬೇಕಾಗಿ ಬರುತ್ತೆ.. ಒಂದು ಕ್ಷಣವೂ ಕುಗ್ಗದೆ ಎಲ್ಲವನ್ನ ಸಮರ್ಥವಾಗಿ ಎದುರಿಸ್ತಾನೆ.. ಆ ನಂತರ `ಏಶಿಯಾ ಪೆಸಿಫಿಕ್ ಫ್ಲೈಟ್ ಟ್ರೈನಿಂಗ್’ನಲ್ಲಿ ಸೀಟ್ ಪಡಿತಾನೆ.. ತನ್ನ ಮುಂದಿನ ವಿಮಾನ ಚಾಲನ ತರಬೇತಿಯನ್ನ ಇಲ್ಲಿ ಮುಗಿಸಿ ಕೋ-ಪೈಲೆಟ್ ಆಗಿ ಬಿಳಿ ಬಟ್ಟೆ ತೊಟ್ಟು ಪ್ಲೈಟ್ ನ ಏರೇ ಬಿಡ್ತಾನೆ… ನೆಲದಲ್ಲಿ ನಿಂತು ಕೌತುಕದಿಂದ ವಿಮಾನದ ಹಾರಾಟ ನೋಡಿ ತಾನೊಂದು ದಿನ ಅದರ ಚಾಲಕನಾಗೇ ಆಗುತ್ತೇನೆ ಅಂತಾ ಕನಸನ್ನ ಕಂಡು, ಹತ್ತಾರು ವರ್ಷ ಕಷ್ಟ ಪಟ್ಟು, ಪೈಲೆಟ್ ಆದ ಕುಗನ್ ತಂಗೀಸುರನ್ ಇಂದಿನ ಆತ್ಮಸ್ಥೈರ್ಯ `ಸತ್’ಪ್ರಜೆಗಳಿಗೆ ಮಾದರಿ ಆಗೋದ್ರಲ್ಲಿ ಡೌಟೇ ಇಲ್ಲ ಅಲ್ವಾ.. ಈ ಸಂದರ್ಭದಲ್ಲಿ ವಿವೇಕಾನಂದರ ಮಾತೊಂದು ನೆನನಪಿಗೆ ಬರುತ್ತೆ “ಯೂ ಆರ್ ದ ಕ್ರೀಯೇಟರ್ ಆಫ್ ಯುವರ್ ಓನ್ ಡೆಸ್ಟಿನಿ”

2

  • ಅಶೋಕ್

POPULAR  STORIES :

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

1 COMMENT

LEAVE A REPLY

Please enter your comment!
Please enter your name here