No menu items!
12.4 C
Munich
Wednesday, April 29, 2026

ಪ್ರಿಯಾಂಕಾ ಗಾಂಧಿ ಅವಶ್ಯಕತೆ ಇಲ್ವಂತೆ ವಾದ್ರಾಗೆ….!

Must read

ಗಾಂಧಿ ಕುಟುಂಬದ ಅಳಿಯ ರಾಬರ್ಟ್ ವಾದ್ರಾ ಇಂಥದ್ದೊಂದು ಹೇಳಿಕೆ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು ಎಂಥದ್ದೇ ಸಮಸ್ಯೆ ಬಂದರೂ ಪರಿಹಾರ ಕಂಡುಕೊಳ್ಳುವಷ್ಟು ಶಿಕ್ಷಣ, ಸಂಪತ್ತು ನನ್ನ ಬಳಿ ಇದೆ. ನನ್ನ ತಂದೆ ಸಾಕಷ್ಟು ಆಸ್ತಿ ಮಾಡಿದ್ದಾರೆ, ನನಗೆ ಉತ್ತಮ ಶಿಕ್ಷಣವನ್ನೂ ನೀಡಿದ್ದಾರೆ. ನಾನು ಆರ್ಥಿಕವಾಗಿ ಸಧೃಢನಾಗಿದ್ದೇನೆ. ಯಾವುದೇ ವಿಚಾರದಲ್ಲೂ ನಾನು ಯಾರ ಮೇಲೂ ಅವಲಂಬಿತನಾಗಿಲ್ಲ ಅಂತ ಗುಡುಗೋ ಮೂಲಕ ವಾದ್ರಾ ನಾನು ಸ್ವಾವಲಂಬಿ ಆರ್ಥಿಕವಾಗಿ ಪ್ರಿಯಾಂಕಾ ಮೇಲೆ ಅವಲಂಬಿತವಾಗೋ ಅವಶ್ಯಕತೆ ಇಲ್ಲ ಅಂದಿದ್ದಾರೆ.

ವಾದ್ರಾ ತನ್ನ ವಿಚಾರಗಳಿಗೆ ಅಥವಾ ಪ್ರಿಯಾಂಕ ಗಾಂಧಿ ಪತಿ ಅನ್ನೋ ಕಾರಣಕ್ಕೆ ಸುದ್ದಿಯಾಗಿದ್ದಕ್ಕಿಂತ ಹೆಚ್ಚಾಗಿ ಈತ ಸುದ್ದಿಯಾಗಿದ್ದೇ ಹಗರಣಗಳಿಂದ. ಸದ್ಯ ಹರಿಯಾಣ ಹಾಗೂ ರಾಜಸ್ಥಾನದಲ್ಲಿ ಭೂಮಿ ಖರೀದಿಯಲ್ಲಿ ನಡೆಸಿದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ವೇಳೆ ಈ ಹೇಳಿಕೆ ನೀಡಿರೋ ವಾದ್ರಾ, ಯಾವುದೇ ವಿಚಾರದಲ್ಲಿ ಪ್ರಿಯಾಂಕಾ ಕೇಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ದೇಶ ಬಿಟ್ಟು ಹೋಗುವುದಿಲ್ಲ ಎಂದಿರುವ ವಾದ್ರಾ, ಭವಿಷ್ಯದಲ್ಲಿ ತಾನೂ ರಾಜಕಾರಣಿ ಆಗೋ ಸುಳಿವು ನೀಡಿದ್ದಾರೆ.

ನಾನು ಎಲ್ಲವನ್ನೂ ಸ್ವಾವಲಂಬಿಯಾಗಿ ನಿಭಾಯಿಸುವಷ್ಟು ಸಮರ್ಥನಾಗಿದ್ದೇನೆ. ವ್ಯವಹಾರ, ರಾಜಕೀಯ ಎರಡನ್ನೂ ನಿಭಾಯಿಸುವ ಶಕ್ತಿ ನನಗಿದೆ.ಯಾವುದೇ ಕಾರಣಕ್ಕೂ ನಾನು ಪ್ರಿಯಾಂಕಾ ಮೇಲೆ ಅವಲಂಬಿತನಾಗಿಲ್ಲ. ನಾವಿಬ್ಬರು ಪತಿ ಪತ್ನಿಯಾಗಿ ಪರಸ್ಪರ ಅವಲಂಬಿತರೇ ಹೊರತು ರಾಜಕೀಯ, ಆರ್ಥಿಕ, ವ್ಯಾವಹಾರಿಕವಾಗಿ ಅಲ್ಲ ಅಂತ ಹೇಳೋ ಮೂಲಕ ಹಲವು ವಿಚಾರಗಳಿಗೆ ತೆರೆ ಎಳೆದಿದ್ದಾರೆ.

  •  “ಶ್ರೀ”

POPULAR  STORIES :

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article