ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!

1
127

ಅದು ಕಿತ್ತು ತಿನ್ನೋ ಬಡತನ. ಇಬ್ಬರು ಹೆಣ್ಣು ಮಕ್ಕಳು. ಪ್ರತಿದಿನ ಗದ್ದೆಯಲ್ಲಿ ಕೂಲಿ ಆಳಾಗಿ ದುಡಿಮೆ. ಬರ್ತಿದ್ದಿದ್ದು 5 ರೂಪಾಯಿ ಮಾತ್ರ..! ಆದ್ರೆ ಇಂತಹ ಕಷ್ಟದಲ್ಲಿ ಸಾಗಿದ ಬದುಕು, ಅಮೆರಿಕದ ಅಂಗಳದಲ್ಲಿ ಕಂಪನಿಯೊಂದರ ಸಿಇಓ ಆಗುವ ಮಟ್ಟಿಗೆ ಬೆಳಿದಿದ್ದು ಹೇಗೆ ಗೊತ್ತಾ..? ಓದಿ ಈ ಇಂಟರೆಸ್ಟಿಂಗ್ ಸ್ಟೋರಿ..!
ಜ್ಯೋತಿರೆಡ್ಡಿಯ ಕುಟುಂಬಕ್ಕೆ ಬಡತನ ಎಷ್ಟು ಹಿಂಸೆ ಕೊಟ್ಟಿತ್ತು ಅಂದ್ರೆ, ಒಂದು ಹೊತ್ತು ಊಟಕ್ಕೂ ಕಷ್ಟವಿತ್ತು..! ಆದ್ರೆ ಆ ಮಗುವಿಗೆ ತಾನು ಚೆನ್ನಾಗಿ ಓದಬೇಕು ಅನ್ನೋ ಕನಸು..! ಅಪ್ಪ ಅಮ್ಮನಿಗೆ, ಮಗಳನ್ನು ಓದಿಸುವ ಶಕ್ತಿ ಇಲ್ಲವೇ ಇಲ್ಲ. ಕೊನೆಗೆ ಆ ಮಗುವಿನ ತಾಯಿ ಇದ್ದರೂ ಸಹ, ಅನಾಥೆ ಅಂತ ಸುಳ್ಳು ಹೇಳಿ ಅನಾಥಾಶ್ರಮವೊಂದಕ್ಕೆ ಸೇರಿಸಲಾಗುತ್ತೆ..! ಅನಾಥಾಶ್ರಮದಲ್ಲಿದ್ದುಕೊಂಡೇ ಸರ್ಕಾರಿ ಶಾಲೆಯೊಂದರಲ್ಲಿ ವಿಧ್ಯಾಭ್ಯಾಸ ಶುರು ಮಾಡ್ತಾಳೆ ಆ ಹುಡುಗಿ. ಶಾಲೆಗೆ ಹೋಗುವ ಅಷ್ಟೂ ದಿನ, `ತಾಯಿ ಇಲ್ಲ’ ಅಂತ ಹೇಳಿದ್ದ ಸುಳ್ಳಿನ ಪರಿಣಾಮ, ಯಾವತ್ತೂ ತಾಯಿಯನ್ನು ಭೇಟಿ ಮಾಡುವಂತಿರಲಿಲ್ಲ..! ಅಂತಹ ಕಷ್ಟದಲ್ಲೇ ಶಾಲೆಯಲ್ಲಿ ಚೆನ್ನಾಗಿ ಓದ್ತಾ ಇದ್ದ ಆ ಹುಡುಗಿಗೆ ವಯಸ್ಸು 16 ತಲುಪಿದ ಕೂಡಲೇ ಕುಟುಂಬದವರು ಆ ಹುಡುಗಿಯ ನೆಂಟರಲ್ಲೇ ಒಬ್ಬರನ್ನು ನೋಡಿ ಮದುವೆ ಮಾಡಿ ಬಿಡ್ತಾರೆ. ಆದ್ರೆ ಅಲ್ಲಿಗೇ ಲೈಫ್ ಮುಗೀತು ಅಂತ ಯೋಚನೆ ಮಾಡದೇ ಹಠ, ಛಲದಿಂದ ರಾತ್ರಿ ಹಗಲು ಕಷ್ಟಪಟ್ಟು ಇವತ್ತು ಅಮೆರಿಕದ ಅಂಗಳದಲ್ಲಿ ಕಂಪನಿಯೊಂದರ ಕಾರ್ಯನಿರ್ವ್ಹಹಣಾಧಿಕಾರಿಯಾಗಿ ಯಶಸ್ಸಿನ ದಡ ಸೇರಿದ ಆ ದಿಟ್ಟೆ ಜ್ಯೋತಿ ರೆಡ್ಡಿ.

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಜ್ಯೋತಿ ರೆಡ್ಡಿ ಪಕ್ಕದ ಆಂಧ್ರಪ್ರದೇಶದವರು. ಶಾಲೆಗೆ ಹೋಗುವ ದಿನಗಳಿಂದಲೇ ತನ್ನ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದ ಜ್ಯೋತಿ, ತಾನೇನಾದ್ರೂ ಸಾಧಿಸಿಯೇ ಸಿದ್ಧ ಅಂತ ನಿರ್ಧಾರ ಮಾಡಿಕೊಂಡಿದ್ರು. 16 ವರ್ಷಕ್ಕೇ ಮದುವೆಯಾದ್ರೂ ಅವರ ಕನಸು ಕಮರಿ ಹೋಗಲಿಲ್ಲ..! ಎರಡು ಹೆಣ್ಣು ಮಕ್ಕಳು ಹುಟ್ಟಿದ ಮೇಲೂ, ಇನ್ನೂ ಭರವಸೆ ಇತ್ತು ಅವರಿಗೆ. ಯಾರದೋ ಗದ್ದೆಯಲ್ಲಿ ಪ್ರತಿದಿನ ಕೇವಲ 5 ರೂಪಾಯಿಗೆ ಕೂಲಿ ಆಳಾಗಿ ಕೆಲಸ ಮಾಡ್ತಿದ್ರು ಜ್ಯೋತಿ ರೆಡ್ಡಿ. ಆ 5 ರೂಪಾಯಿ ಎಲ್ಲಿಗೆ ಸಾಲುತ್ತೆ ಅಂತ ಅರಿತು ರಾತ್ರಿ ಎಲ್ಲಾ ಕೂತು ಪೆಟಿಕೋಟ್ ಹೊಲಿದು ಕೊಡೋಕೆ ಶುರು ಮಾಡಿದ್ರು. ಆಗ ಕೇಂದ್ರ ಸರ್ಕಾರದ ನೆಹರೂ ಯುವ ಕೇಂದ್ರ ಯೋಜನೆ ಆರಂಭವಾಯ್ತು. ಆಗ ಅನಕ್ಷರಸ್ತರಿಗೆ ಶಿಕ್ಷಣ ಹೇಳಿಕೊಟ್ಟರು. ಆದ್ರೆ ಅದರಿಂದ ಬರುತ್ತಿದ್ದ ಹಣವೂ ಕಮ್ಮಿ ಇತ್ತು. ಈ ಸಮಯಲ್ಲೇ ಜ್ಯೋತಿಯವರು ದೂರ ಶಿಕ್ಷಣದಲ್ಲಿ ಬಿ.ಎ ಓದಿ ಮುಗಿಸಿದ್ರು. ಟೈಪ್ ರೈಟಿಂಗ್ ಕಲಿತ್ರು. ಪ್ರತದಿನ 2 ಗಂಟೆ ಪ್ರಯಾಣ ಮಾಡಿ ಶಾಲೆಯೊಂದಕ್ಕೆ ಮಕ್ಕಳಿಗೆ ಪಾಠ ಹೇಳಿಕೊಡಲು ಹೋಗ್ತಾ ಇದ್ರು. ಅಲ್ಲಿ ಬರ್ತಿದ್ದಿದ್ದು 398 ರೂಪಾಯಿ ಸಂಬಳ..! ಶಾಲೆಗೆ ಹೋಗಿ ಬರುವ ವೇಳೆ ರೈಲಿನಲ್ಲಿ ಸಿಗುತ್ತಿದ್ದ ಸಹಪ್ರಯಾಣಿಕರಿಗೆ ಸೀರೆಗಳನ್ನು ಮಾರಿ ಇನ್ನು ಸ್ವಲ್ಪ ಹಣ ಸಂಪಾದಿಸೋಕೆ ಶುರು ಮಾಡಿದ್ರು. ಹೀಗೇ ಬದುಕು ಹಂತಹಂತವಾಗಿ ಸಾಗ್ತಾ ಇತ್ತು..!
ಒಂದು ದಿನ ಅವರ ನೆಂಟರೊಬ್ಬರು ಅಮೆರಿಕದಿಂದ ಊರಿಗೆ ಬಂದಿದ್ರು. ಆಗ ಜ್ಯೋತಿ ರೆಡ್ಡಿ ಮನಸ್ಸಲ್ಲಿ ಅಮೆರಿಕಾಗೆ ಹೋಗೋ ಆಸೆ ಮೊಳಕೆಯೊಡೀತು. ಅಲ್ಲಿ ಕೆಲಸ ಗಿಟ್ಟಿಸಲು ಬೇಕಾಗೋ ಕಂಪ್ಯೂಟರ್ ಕೋರ್ಸ್ ಮಾಡಿಕೊಂಡು, ತನ್ನಿಬ್ಬರು ಮಕ್ಕಳನ್ನು ಮಿಶನರಿ ಶಾಲೆಯೊಂದರಲ್ಲಿ ಓದಲು ಬಿಟ್ಟು, ನೆಂಟರ ಸಹಾಯದಿಂದ ಅಮೆರಿಕಕ್ಕೆ ಹಾರಿಯೇ ಬಿಟ್ರು..!
ಆದ್ರೆ ಅಮೆರಿಕ ಅದ್ಧೂರಿ ಸ್ವಾಗತಕ್ಕೆ ಕಾಯ್ತಾ ಇರಲಿಲ್ಲ. ಅಲ್ಲಿನ ದಿನಗಳು ಇನ್ನೂ ಕಷ್ಟದ್ದಾಗಿದ್ವು. ಹೊಸ ದೇಶದಲ್ಲಿ ಹೊಂದಿಕೊಳ್ಳೋದೇ ಕಷ್ಟವಾಯ್ತು. ಆದ್ರೆ ಹಠ ಬಿಡದ ಜ್ಯೋತಿರೆಡ್ಡಿ, ಗ್ಯಾಸ್ ಬಂಕ್ ಒಂದಕ್ಕೆ ಕೆಲಸಕ್ಕೆ ಸೇರಿಕೊಳ್ತಾರೆ. ಬಂದ ವಾಹನಗಳಿಗೆ ಪೆಟ್ರೋಲ್, ಡೀಸಲ್ ತುಂಬೋ ಕೆಲಸ ಅದು..! ಯಾರದೋ ಸಹಾಯದಿಂದ ಮತ್ತೊಂದು ಕೆಲಸಕ್ಕೆ ಹೋದರಾದರೂ ಅದು ಅಡ್ಜಸ್ಟ್ ಆಗದೇ ಮತ್ತೆ ಬಂದು ಅದೇ ಬಂಕ್ ಗೆ ಕೆಲಸಕ್ಕೆ ಸೇರಿಕೊಳ್ತಾರೆ. ಒಂದೊಂದು ಡಾಲರ್ ಖರ್ಚು ಮಾಡುವಾಗಲೂ ನೂರು ಸಲ ಯೋಚಿಸಿ ಖರ್ಚು ಮಾಡ್ತಾರೆ. ಹೀಗೆ ಮಾಡಿ 40,000 ಡಾಲರ್ ಉಳಿತಾಯ ಮಾಡ್ತಾರೆ..! ತಾನೇ ಏನಾದ್ರೂ ಬಿಸಿನೆಸ್ ಶುರು ಮಾಡಬೇಕು ಅನ್ನೋ ಆಸೆ ಆಗಲೇ ಮೊಳಕೆಯೊಡಿಯೋದು..! ಅದರಂತೆಯೇ 2011ರಲ್ಲಿ ಕೆಯೆಸ್ ಹೆಸರಿನ ಸ್ವಂತ ಕಂಪನಿ ಶುರು ಮಾಡಿಬಿಡ್ತಾರೆ. ಅಷ್ಟೆ, ಆಮೇಲೆ ಯಶಸ್ಸಿನ ಮೆಟ್ಟಿಲನ್ನು ಒಂದೊಂದಾಗಿ ಮೇಲೇರ್ತಾ ಹೋದ್ರು ಜ್ಯೋತಿ ರೆಡ್ಡಿ. ಇವತ್ತು ಅವರ ಇಬ್ಬರೂ ಮಕ್ಕಳೂ ಅಮೆರಿಕದಲ್ಲಿಯೇ ತಮ್ಮ ಶಿಕ್ಷಣ ಮುಗಿಸಿದ್ದಾರೆ..! ಯಶಸ್ಸು ಯಾವತ್ತೂ ಅವರ ತಲೆಗೆ ಏರಲಿಲ್ಲ. ಆ ಕಾರಣಕ್ಕೆ ಇವತ್ತೂ ಸಹ ತನ್ನ ಹುಟ್ಟೂರನಲ್ಲಿ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಶ್ರಮಿಸ್ತಾ ಇದ್ದಾರೆ..! ಹಲವು ಎನ್.ಜಿ.ಓಗಳೊಂದಿಗೆ ಗುರುತಿಸಿಕೊಂಡಿದ್ದಾರೆ, ಅವರದೇ ಟ್ರಸ್ಟ್ ಶುರುಮಾಡಿದ್ದಾರೆ. ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ..! ಅವತ್ತು ಇನ್ನೇನು ಜೀವನ ಜ್ಯೋತಿ ಆರಿಹೋಯ್ತು ಅಂತ ಅನ್ಕೊಂಡಿದ್ದವರು ಇವತ್ತು ಈ ಬೆಳಗುತ್ತಿರೋ ಜ್ಯೋತಿಯನ್ನು ನೋಡಿ ಹುಬ್ಬೇರಿಸುತ್ತಿದ್ದಾರೆ. ತನ್ನ ಜೊತೆ ಕೆಲಸ ಮಾಡುತ್ತಿದ್ದಾಕೆ ಐಶಾರಾಮಿ ಕಾರುಗಳಲ್ಲಿ ಬಂದಿಳಿವಾಗ `ಇದು ನಮ್ಮ ಜ್ಯೋತೀನೇನಾ..?’ ಅಂತ ಚಕಿತರಾಗ್ತಾರೆ..!
ಶ್ರಮ, ಹಠ, ಬದುಕಿನ ಬಗೆಗಿನ ಭರವಸೆ ಇವತ್ತು ಜ್ಯೋತಿ ರೆಡ್ಡಿಯವರನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಜ್ಯೋತಿ ರೆಡ್ಡಿಯವರೇ, ನಿಮಗೊಂದು ಸಲಾಂ…

 

POPULAR  STORIES :

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

1 COMMENT

LEAVE A REPLY

Please enter your comment!
Please enter your name here