ಇಂದಿನ ಟಾಪ್ 10 ಸುದ್ದಿಗಳು..! 08.12.2015

0
57

ಐಪಿಎಲ್ ಗೆ ಎರಡು ಹೊಸ ತಂಡಗಳು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಎರಡು ಹೊಸ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಪುಣೆ ಮತ್ತು ರಾಜ್ ಕೋಟ್ ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್ ನಲ್ಲಿ ಆಡಲಿರುವ ಹೊಸ ತಂಡಗಳಾಗಿವೆ. ಬಿಸಿಸಿಐ ಇಂದು ಈ ತಂಡಗಳ ಆಯ್ಕೆಯನ್ನು ಅಂತಿಮಗೊಳಿಸಿ ಪ್ರಕಟಿಸಿದೆ.
ನ್ಯೂ ರೈಸಿಂಗ್ ಕನ್ಸೋರ್ಟಿಯಂ ಪುಣೆ ತಂಡದ ಮಾಲಿಕರಾಗಿದ್ದಾರೆ. ಇಂಟೆಕ್ಸ್ ಮೊಬೈಲ್ ಸಂಸ್ಥೆ ರಾಜ್ ಕೋಟ್ ತಂಡವನ್ನು ಹೊಂದಿದೆ.

ಲೋಕಾಯುಕ್ತ ನ್ಯಾ. ಭಾಸ್ಕರರಾವ್ ರಾಜೀನಾಮೆ

ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಕೊನೆಗೂ ರಾಜೀನಾಮೆ ಕೊಟ್ಟಿದ್ದಾರೆ.
ಲೋಕಾಯುಕ್ತದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು, ಅನೇಕ ಸಂಘಟನೆಗಳು ಭಾಸ್ಕರ್ ರಾವ್ ರಾಜೀನಾಮೆಗೆ ಒತ್ತಾಯಿಸುತ್ತಾ ಬಂದಿದ್ದವು. ಕೊನೆಗೂ ಜನರ ಒತ್ತಾಯಕ್ಕೆ ಮಣಿದ ಭಾಸ್ಕರ್ ರಾವ್ ರಾಜೀನಾಮೆ ನೀಡಿದ್ದಾರೆ.
ಲೋಕಾದಲ್ಲಿ ಭ್ರಷ್ಟಾಚಾರ ಕುರಿತು ತನಿಖೆಯನ್ನು ಎಐಟಿಗೆ ಒಪ್ಪಿಸಿದ ಬಳಿಕ 135 ದಿನಗಳಸರಣಿ ರಜೆಯನ್ನು ಭಾಸ್ಕರ್ ರಾವ್ ಪಡೆದಿದ್ದರು. ನಾಲ್ಕು ಭಾರಿ ರಜೆಯನ್ನುವಿಸ್ತರಿಸುತ್ತಲೇ ಬಂದಿದ್ದ ಲೋಕಾಯುಕ್ತು ನಿನ್ನೆ ರಾಜ್ಯಪಾಲ ವಜುಭಾಯಿವಾಲರಿಗೆ ರಾಜೀನಾಮೆ ಸಲ್ಲಿಸಿದ್ದರು. ರಾಜ್ಯಪಾಲರು ಲೋಕಾಯುಕ್ತರ ರಾಜೀನಾಮೆಯನ್ನು ಇಂದು ಅಂಗೀಕಸರಿದ್ದಾರೆ.

ಕರ್ನಾಟಕ ಜಲಮಂಡಳಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿವಿಧ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಜನವರಿ 6, 2016 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಒಟ್ಟು 53 ಹುದ್ದೆಗಳಿದ್ದು ಪ.ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸಹಾಯಕ ಸಿವಿಲ್ ಇಂಜಿನಿಯರ್ -2 ಹುದ್ದೆ
ಪ್ರಥಮ ದರ್ಜೆ ಸಹಾಯಕ – 3 ಹುದ್ದೆ
ದ್ವಿತೀಯ ದರ್ಜೆ ಸಹಾಯಕ – 19 ಹುದ್ದೆ
ಡೇಟಾ ಎಂಟ್ರಿ ಆಪರೇಟರ್ – 7 ಹುದ್ದೆ
ಪ್ರಥಮ ದರ್ಜೆ ಲೆಕ್ಕ ಸಹಾಯಕ -4 ಹುದ್ದೆ
ಕಿರಿಯ ನಿರೀಕ್ಷಕ 5- ಹುದ್ದೆಗಳು ಸೇರಿದಂತೆ ಒಟ್ಟು 53 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ದಿನಾಂಕದಂದು ಅಭ್ಯರ್ಥಿಗೆ 18 ವರ್ಷ ಪೂರ್ಣವಾಗಿರಬೇಕು.
ಸಹಾಯಕ ಸಿವಿಲ್ ಇಂಜಿನಿಯರ್, ಪ್ರಥಮ ದರ್ಜೆ ಸಹಾಯಕ, ಆಪರೇಟರ್ ಗ್ರೇಡ್-1 ಗೆ 300 ರೂಪಾಯಿಳು ಮತ್ತು ದ್ವಿತೀಯ ದರ್ಜೆ ಸಹಾಯಕ, ಕಿರಿಯ ನಿರೀಕ್ಷಕ ಹಾಗೂ ಡೇಟಾ ಎಂಟ್ರಿ ಮೊದಲಾದವುಗಳಿಗೆ 200 ರೂ ಅರ್ಜಿ ಶುಲ್ಕ ಇರುತ್ತದೆ.
ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಕೆಗಾಗಿ ಣಣಠಿ://50.97.43.238/ಕಠಣಓಠಣಜಿಛಿಚಿಣಠಟಿ.ಚಿಠಿಥ?ಕಚಿರಜ=ಕಗಿ6ಚಿಊಘಚರಣಕಿ4ಕಐಠಿರಿಔಠಿಣಡಿಟತಿ== ಈ ಸೈಟ್ ಪ್ರವೇಶಿಸಿ. ಅರ್ಜಿ ಸಲ್ಲಿಸಿದ ಬಳಿಕ ಚಲನ್ ಡೌನ್ಲೋಡ್ ಮಾಡಿಕೊಂಡು ಸಮೀಪದ ಇ-ಪಾವತಿ ವ್ಯವಸ್ಥೆ ಇರೋ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಿ.

ನಾಡಗೀತೆಯಲ್ಲಿ ಶಂಕರ, ರಾಮಾನುಜರ ಹೆಸರು ಬೇಕಿಲ್ಲ..!
ನಾಡಗೀತೆಯಲ್ಲಿ ಶಂಕರಾಚಾರ್ಯ ಮತ್ತು ರಾಮಾನುಜಚಾರ್ಯರ ಹೆಸರನ್ನು ಕೈ ಬಿಡಿ ಎಂದು ಪ್ರೊ. ಭಗವಾನ್ ಹೇಳಿದ್ದಾರೆ. ಬೆಂಗಳೂರಿನ ಸನಯನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಕನ್ನಡ ನುಡಿ ಹಬ್ಬ ಹಾಗೂ ಕದಂಬ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಗವಾನ್ ಈ ಬಗ್ಗೆ ಹೇಳಿದ್ದಾರೆ.
ಇವರ ಅಭಿಪ್ರಾಯದಂತೆ ಶಂಕರಚಾರ್ಯರು ಮತ್ತು ರಾಮಾನುಜರು ನಾಡಿಗೆ ಏನೂ ಕೊಡಿಗೆ ನೀಡಿಲ್ಲ..! ಆದ್ದರಿಂದ ನಾಡಗೀತೆಯಲ್ಲಿ ಇವರ ಹೆಸರನ್ನು ಕೈ ಬಿಡಬೇಕಂತೆ..!

ನಟಿ ರಾಗಿಣಿ ವಿರುದ್ಧ ದೂರು..!
ಸ್ಯಾಂಡಲ್ ವುಡ್ ನ ಹೆಸರಾಂತ ನಟಿ ರಾಗಿಣಿ ವಿರುದ್ಧ ವಂಚನೆ ಆರೋಪದಲ್ಲಿ ದೂರು ದಾಖಲಾಗಿದೆ. ನಾಟಿಕೋಳಿ ಚಿತ್ರದ ನಿರ್ಮಾಪಕ ರಾಗಿಣಿ ವಿರುದ್ಧ ಜೆ.ಪಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾಟಿಕೋಳಿ ಸಿನಿಮಾದ ಅಭಿನಯಕ್ಕೆ ರಾಗಿಣಿ ಸಂಭಾವನೆ ಪಡೆದಿದ್ದರು. ನಂತರ ಸಿನಿಮಾದಿಂದ ಹಿಂದೆ ಸರಿದಿದ್ದರು. ಈಗ ಪಡೆದಿದ್ದ ದುಡ್ಡನ್ನು ಹಿಂದೆ ನೀಡುತ್ತಿಲ್ಲ ಎಂಬುದು ರಾಗಿಣಿ ಅವರ ಮೇಲಿನ ಆರೋಪ.

ನಾನು ಇಂಧಿರಾ ಸೊಸೆ, ನಾನ್ಯಾರಿಗೂ ಹೆದರಲ್ಲ..!
ನಾನು ಇಂಧಿರಾಗಾಂಧಿ ಸೊಸೆ, ನಾನು ಯಾರಿಗೂ ಹೆದರುವುದಿಲ್ಲ ಎಂದು ಸೋನಿಯಾಗಾಂಧಿ ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿಮತ್ತು ರಾಹುಲ್ ಗಾಂಧಿಗೆ ನೀಡಿದ್ದ ಸಮನ್ಸ್ ರದ್ದುಪಡಿಸಲು ಕೈಕೋಟ್ ನಿರಾಕರಿಸಿತ್ತು. ಈ ಬಗ್ಗೆ ಮಾತನಾಡಿರೋ ಸೋನಿಯಾಗಾಂಧಿ ಪ್ರಕರಣ ಸಂಬಂಧದ ತೀರ್ಪು ನೀಡಿಕೆ ವಿಚಾರ ನ್ಯಾಯಾಧೀಶರಿಗೆ ಸಂಬಂಧಪಟ್ಟಿದ್ದು. ಆದ್ದರಿಂದ ಈ ರೀತಿಯ ವಿಚಾರಕ್ಕೆ ನಾನೇಕೆ ಹೆದರಬೇಕೆಂದು ಹೇಳಿದರು.
ತಮ್ಮ ವಿರುದ್ಧ ಬಿಜೆಪಿ ಪಿತೂರಿ ನಡೆಸುತ್ತಿದ್ದು, ಇಂಥಹದ್ದೆಕ್ಕೆಲ್ಲಾ ನಾನು ಹೆದರುವುದಿಲ್ಲವೆಂದು ಅವರು ತಿಳಿಸಿದ್ದಾರೆ.

ಅಶ್ವಿನ್ ಈಗ ವಿಶ್ವದ ನಂ.1 ಆಲ್ ರೌಂಡರ್..!
ವಿಶ್ವ ಟೆಸ್ಟ್ ಕ್ರಿಕೆಟ್ನ ನಂಬರ್1 ತಂಡವಾದ ದ. ಆಫ್ರಿಕಾ ವಿರುದ್ಧ ಭಾರತ ಸರಣಿ ಗೆಲುವಿನೊಂದಿಗೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಈ ಸಿಹಿಸುದ್ದಿಯ ಜೊತೆಗೇ ಆರ್. ಅಶ್ವಿನ್ ವಿಶ್ವದ ನಂ1 ಆಲ್ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಈ ವಿಷಯವನ್ನು ಐಸಿಸಿ ಇಂದು ಪ್ರಕಟಿಸಿತು.

ಅಮೆರಿಕಾದಲ್ಲಿ ಮುಸ್ಲಿಂರ ಪ್ರವೇಶ ನಿಷೇಧಿಸಿ – ಡೋನಾಲ್ಡ್ ಟ್ರಂಪ್

ಅಮೆರಿಕದಲ್ಲಿ ಮುಸ್ಲಿಮರ ವಿರುದ್ಧ ನಾಝಿ ರೀತಿಯಲ್ಲಿ ಅಂತಿಮ ಪರಿಹಾರವನ್ನು ಕಾಣುವ ಡೋನಾಲ್ಡ್ ಟ್ರಂಪ್ ಅವರ “ಮುಸ್ಲಿಮರಿಗೆ ಅಮೆರಿಕ ನಿಷೇಧ’ ಯೋಜನೆಯು ಇದೀಗ ಅಮರಿಕದಲ್ಲಿನ ಮುಸ್ಲಿಮರಲ್ಲಿ ಭೀತಿಯನ್ನು ಸೃಷ್ಟಿಸಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುವ ಡೋನಾಲ್ಡ್ ಟ್ರಂಪ್ ಅವರು, “ಮುಸ್ಲಿಮರನ್ನು ಅಮೆರಿಕ ಪ್ರವೇಶಿಸಲು ಬಿಡಲೇಬಾರದು. ದೇಶದ ಜನಪ್ರತಿನಿಧಿಗಳು ಮುಸ್ಲಿಮರ ಕುರಿತಾಗಿ ಸರಿಯಾದ ಮಾಹಿತಿಯನ್ನು ಕಲೆಯಾಗಿ ಅವರ ಸಮುದಾಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳುವ ತನಕ ಅವರಿಗೆ (ಮುಸ್ಲಿಮರಿಗೆ) ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಬೇಕು’ ಎಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಚೀನಾನಲ್ಲಿ ಮಾಲಿನ್ಯ, 2 ದಶಲಕ್ಷ ವಾಹನಗಳಿಗೆ ಕಡಿವಾಣ

ಬೀಜಿಂಗ್ ನಲ್ಲಿ ಕಳವಳಕಾರಿಯಾಗಿ ಹೆಚ್ಚಿರುವ ವಾಯುಮಾಲಿನ್ಯದ ಹೊಗೆಯಿಂದಾಗಿ ತುತರ್ು ಕಾಯರ್ಾಚರಣೆ ಕೈಗೆತ್ತಿಕೊಂಡಿರುವ ಸಕರ್ಾರ ಕನಿಷ್ಠ 2 ದಶಲಕ್ಷ ವಾಹನಗಳನ್ನು ರಸ್ತೆಗೆ ಇಳಿಯದಂತೆ ತಡೆದಿದೆ. ದಟ್ಟ ಕಪ್ಪು ಬಣ್ಣದ ಹೊಗೆ ಮಿಶ್ರಿತ ಗಾಳಿ ಚೀನಾದ ರಾಜಧಾನಿ ಬೀಜಿಂಗ್ ಆದ್ಯಂತ ಮಂಗಳವಾರ ಕಂಡುಬಂದಿದ್ದು ಮಂಗಳವಾರ ಮಧ್ಯಾಹ್ನದಿಂದ ಗುರುವಾರದವರೆಗೆ ಈ ಕಾಯರ್ಾಚರಣೆ ಮುಂದುವರೆಯಲಿದೆ. ಗಾಳಿಯ ಸಾಂದ್ರತೆ ಪಿಎಮ್ 2.5 ಇದ್ದು ಇದು ಕ್ಯೂಬಿಕ್ ಮೀಟರ್ ಗೆ 234 ಮೈಕ್ರೋ ಗ್ರಾಂನಷ್ಟು ಹಚ್ಚು ಮಾಲಿನ್ಯ ಇದೆ ಎನ್ನಲಾಗಿದೆ.

2 ಗಂಟೆ ಟ್ರಾಫಿಕ್ ನಲ್ಲಿ ಗಡ್ಕರಿ ಪರದಾಟ, 24 ಗಂಟೆಗಳಲ್ಲಿ ಪರಿಹಾರಕ್ಕೆ ಸೂಚನೆ..!

ದೆಹಲಿಯ ಸಾರ್ವಜನಿಕರು ನಿತ್ಯಲೂ ಅನುಭವಿಸುವ ಟ್ರಾಫಿಕ್ ಜಾಮ್ ಸಮಸ್ಯೆಯ ಅನುಭವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೂ ಆಯಿತು.
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ದೆಹಲಿಯ ಹೊರವಲಯದ ಗುರ್ಗಾಂವ್ ಮಾಹಿಪುರ್ ಮೇಲ್ ಸೇತುವೆಯಲ್ಲಿ ನಿನ್ನೆ ರಾತ್ರಿ 2 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಸಮಸ್ಯೆಯಿಂದ ಗಡ್ಕರಿ ಪರದಾಡಿದರು. ಇವರ ಪರಾದಾಟದಿಂದ ಒಂದು ಲೆಕ್ಕದಲ್ಲಿ ದೆಹಲಿ ಜನತೆಗೆ ಒಳ್ಳೆಯದೇ ಆದಂತಿದೆ. ಸ್ವತಃ ಟ್ರಾಪಿಕ್ ಸಮಸ್ಯೆ ಎದುರಿಸಿದ ಅವರು 24 ಗಂಟೆಯೊಳಗೆ ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಆದೇಶಿಸಿದ್ದಾರೆ.

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here