Home ಎಲ್ಲೆಲ್ಲಿ ಏನೇನು.? ಬಾರ್ ಸಪ್ಲೇಯರ್ ಮಹೇಶ್ ಕುಟುಂಬಕ್ಕೆ ಬೇಕಿದೆ ನೆರವು

ಬಾರ್ ಸಪ್ಲೇಯರ್ ಮಹೇಶ್ ಕುಟುಂಬಕ್ಕೆ ಬೇಕಿದೆ ನೆರವು

0
ಬಾರ್ ಸಪ್ಲೇಯರ್ ಮಹೇಶ್ ಕುಟುಂಬಕ್ಕೆ ಬೇಕಿದೆ ನೆರವು

ಬೆಂಗಳೂರಿನ ಕೆ.ಆರ್ ಮಾರ್ಕೆಟ್‍ನ ಬಾರ್ ವೊಂದರಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಐವರು ಸಾವನ್ನಪ್ಪಿರೋ ದಾರುಣ ಘಟನೆಯ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ.
ಕೈಲಾಶ್ ಬಾರ್‍ನಲ್ಲಿ ಬೆಳಗ್ಗೆ 2.30ರ ಸುಮಾರಿಗೆ ಸಂಭವಿಸಿದ ಅವಘಡದಲ್ಲಿ ಮಂಜುನಾಥ್, ಕೀರ್ತಿ, ಮಹೇಶ್, ಸ್ವಾಮಿ ಹಾಗೂ ಪ್ರಸಾದ್ ದುರ್ಮರಣವನ್ನಪ್ಪಿದ್ದಾರೆ.  ಕೆಲಸ ಮಾಡಿ ಮಲಗಿದ್ದ ಇವರು ಮಲಗಿದಲ್ಲೇ ಸುಟ್ಟು ಹೋಗಿದ್ದಾರೆ.


ಬಾರ್ ನಲ್ಲಿ ಕೆಲಸ ಮಾಡ್ತಿದ್ದ ಈ ಐವರ ಕುಟುಂಬಕ್ಕೂ ನೆರವಿನ ಅಗತ್ಯವಿದೆ. ಅದರಲ್ಲೂ ಮಹೇಶ್ ಕುಟುಂಬವಂತೂ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ದಾರಿ ತೋಚದೆ ಕಂಗಾಲಾಗಿದೆ.
ಮಹೇಶ್ ಕಳೆದ 6 ವರ್ಷದಿಂದ ಬಾರ್ ನಲ್ಲಿ ಕೆಲಸ ಮಾಡ್ತಿದ್ದ. ತಂದೆ ಮಾಲಿಂಗ ಗೌಡ ಅವರು ನಿಧನರಾಗಿದ್ದು, ತಾಯಿ ಪದ್ಮಮ್ಮ ಕೂಲಿ ಮಾಡಿ ಬದುಕು ಸವೆಸುತ್ತಿದ್ದಾರೆ. ತಮ್ಮ ಗಣೇಶ್ ದುಡಿಮೆಯೂ ಹೇಳಿಕೊಳ್ಳುವಷ್ಟೇನೂ ಇಲ್ಲ.
ಕೆಲಸ ನಿಮಿತ್ತ ಊರಿಗೆ ಹೋಗಿದ್ದ ಮಹೇಶ್ ಎರಡು ದಿನದ ಹಿಂದಷ್ಟೇ ಬಾರ್ ಕೆಲಸಕ್ಕೆ ವಾಪಸ್ಸಾಗಿದ್ದರು. ಸ್ವಲ್ಪ ಹಣವನ್ನು ಹೊಂದಿಸಿಕೊಂಡು ಮನೆಗೆ ಹೋಗಲೆಂದು ಬಂದಿದ್ದ ಮಹೇಶ್ ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಿದ್ದಂತೆ ತಾಯಿಯ ಆಕ್ರಂಧನ ಮುಗಿಲು ಮುಟ್ಟಿದೆ. ಸಂಬಂಧಿಕರೊಬ್ಬರು ಇವರ ಕುಟುಂಬದ ಕುರುಣಾಜನರ ಸ್ಥಿತಿಯನ್ನು ವಿವರಿಸಿ ಆರ್ಥಿಕ ನೆರವನ್ನು ಕೋರಿದ್ದಾರೆ.
ಇಲ್ಲಿ ಮಹೇಶ್ ಅವರ ತಾಯಿ ಪದ್ಮಮ್ಮ ಅವರ ಬ್ಯಾಂಕ್ ಖಾತೆ ವಿವರ ಇದ್ದು, ಸಹಾಯ ಮಾಡಲಿಚ್ಚಿಸುವವರು ಸಹಾಯ ಮಾಡಬಹುದು.

Padmamma

Ac/no : 0824119001190

IFSC : CNRB0000824

LEAVE A REPLY

Please enter your comment!
Please enter your name here