No menu items!
11.1 C
Munich
Wednesday, April 29, 2026

ಮಂಗಳೂರು ಸಮೀಪ ಸಾಗರದ ಅಲೆಗಳಿಂದ ವಿದ್ಯುತ್ ಉತ್ಪಾದನೆ

Must read

ಸಾಗರದ ಅಲೆಗಳ ಶಕ್ತಿಯ ಸಹಾಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಮಂಗಳೂರು ಹತ್ತಿರದ ಸಾಗರದ ಅಲೆಗಳ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಬಗ್ಗೆ ಫ್ರಾನ್ಸ್ ಮೂಲದ ಕಂಪನಿಯೊಂದಿಗೆ ಅಂದಾಜು 2,284 ಕೋಟಿ ರೂಪಾಯಿ ಮೊತ್ತದನ ಯೋಜನೆಗೆ ಕುರಿತು ಒಪ್ಪಂದ ಮಾಡಿಕೊಂಡಿದೆ.
ಮುಂಬೈಯಲ್ಲಿ ನಡೆಯುತ್ತಿರೋ ಮೇಕ್ ಇನ್ ಇಂಡಿಯಾ ಸಪ್ತಾಯದಲ್ಲಿ ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆಯವರು ಫ್ರಾನ್ಸ್ ಮೂಲದ ತಾರ್ ಕೊವಾಕ್ಸ್ ಸಿಸ್ಟಂ ಸಮೂಹದೊಂದಿಗೆ ಮಂಗಳೂರಿನ ಬಳಿಯ ಸಾಗರದ ಅಲೆಗಳ ಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರ ಜೊತೆಗೆ ಅಮೆರಿಕಾ ಮೂಲದ ಕಂಪನಿಯೊಂದಿಗೆ ಆಹಾರ ಸಂಸ್ಕರಣಾ ಘಟಕವನ್ನು ರಾಜ್ಯದಲ್ಲಿ ಪ್ರಾರಂಭವಿಸುವುದಕ್ಕೆ 150 ಕೋಟಿ ರೂ, ಪರ್ಟ್ ದೂರ ಸಂಪರ್ಕ ಉತ್ಪನ್ನ ತಯಾರಿಕೆ ಘಟಕ ಸ್ಥಾಪನೆಗೆ 1250 ಕೋಟಿ ರೂ, ಗ್ಲೋಬಲ್ ಮೋಡ್ ಅಂಡ್ ಆ್ಯಕ್ಸಸರೀಸ್ ಪ್ರೈ.ಲಿ. ನ ಜವಳಿ ರಫ್ತು ಘಟಕ ಸ್ಥಾಪನೆಗೆ 25 ಕೋಟಿ, ಫಸ್ಟ್ ಸೋಲರ್ ಸೆಲ್ ಯುನಿಟ್ ಸ್ಥಾಪನೆಗೆ 6000 ಕೋಟಿ ರೂ ಸೇರಿದಂತೆ 9,700 ಕೋಟಿ ರೂಪಾಯಿಗಳ ಹೂಡಿಕೆಗೆ ಕಂಪನಿಗಳು ಆಸಕ್ತಿ ತೋರಿವೆ ಎಂದು ತಿಳಿದು ಬಂದಿದೆ .

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article