ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್

Must read

ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್

 

ರಾಮನಗರ: ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ವೈದ್ಯೆ ಡಾ.ಶ್ರೀನಿಧಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಮನಗರದ ಹೊರವಲಯದಲ್ಲಿರುವ ಜಾನಪದಲೋಕದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ, ಯಾವುದೇ ಆಡಂಬರವಿಲ್ಲದೆ ಮಂತ್ರ ಮಾಂಗಲ್ಯ ಪದ್ಧತಿಯ ಮೂಲಕ ಸರಳವಾಗಿ ಮದುವೆಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮೂಲದ ವೈದ್ಯೆ ಡಾ.ಶ್ರೀನಿಧಿ ಅವರೊಂದಿಗೆ ದರ್ಶನ್ ಧ್ರುವನಾರಾಯಣ್ ಅವರ ವಿವಾಹ ನೆರವೇರಿದೆ. ಸಾಂಪ್ರದಾಯಿಕ ಮಂತ್ರ ಮಾಂಗಲ್ಯ ವಿಧಿವಿಧಾನಗಳ ಮೂಲಕ ನಡೆದ ಈ ಮದುವೆ ಸಮಾರಂಭ ಸರಳತೆಗೆ ಸಾಕ್ಷಿಯಾಗಿದೆ.

ವಿವಾಹ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ನೂತನ ದಂಪತಿಗೆ ಶುಭ ಹಾರೈಸಿ, ಅವರ ಮುಂದಿನ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.

ಒಟ್ಟಿನಲ್ಲಿ, ಆಡಂಬರದ ಮದುವೆಗೆ ಆದ್ಯತೆ ನೀಡದೆ ಸರಳವಾಗಿ ವೈವಾಹಿಕ ಜೀವನ ಆರಂಭಿಸಿರುವ ಶಾಸಕ ದರ್ಶನ್ ಧ್ರುವನಾರಾಯಣ್ ಅವರ ವಿವಾಹ ಸಮಾರಂಭ ಗಮನ ಸೆಳೆದಿದೆ.

- Advertisement -spot_img

More articles

- Advertisement -spot_img

Latest article