ಅವರ ಪ್ರೀತಿಗೆ ಬೆಂಕಿ ಹಚ್ಚಿದ್ದೇ ಮೊಬೈಲ್, ಚ್ಯಾಟಿಂಗ್..! ಪ್ರೀತಿಗೆ ಮೊಬೈಲ್ ಹೇಗೆ ಶಾಪವಾಯ್ತು ಗೊತ್ತಾ..?

0
103

ಆತ ಮದನ್.., ಅವನಿಗೆ ಪ್ರಿಯಾ ಅಂದ್ರೆ ತುಂಬಾ ಇಷ್ಟ..! ಅವಳಿಗೂ ಇವನೆಂದರೆ ಪಂಚಪ್ರಾಣ..! ನಿದ್ರೆ ಮಾಡೋ ಟೈಮಲ್ಲಿ ಮಾತ್ರ ಇವರಿಬ್ಬರು ಚಾಟ್ ಮಾಡ್ತಾ ಇರಲ್ಲ..! ಆ ನಿದ್ರೆ ಮಾಡೋ ಟೈಮ್ ಬಿಟ್ರೆ ಒಂದು ಕ್ಷಣವೂ ಚ್ಯಾಟಿಂಗ್ ತಪ್ತಾ ಇರಲ್ಲ..! ಅವನ ರೂಮ್ ಮೇಟ್ ಪುನೀತ್ ಹೇಳುವಂತೆ, ಬಾತ್ ರೂಮ್ ಗೂ ಮೊಬೈಲ್ ತಗ್ಗೊಂಡು ಹೋಗ್ತಾ ಇದ್ನಂತೆ..! ಅದೇನು ಚಾಟ್ ಮಾಡ್ತಾ ಇದ್ರು ಅಂಥ ಆ ಪ್ರೇಮದೇವತೆಗೂ ಗೊತ್ತಿರ್ಲಿಲ್ಲ..! ದಾರಿಯಲ್ಲಿ ನಡೆದುಕೊಂಡು ಹೋಗ್ತಾನೇ ಚಾಟ್ ಮಾಡುವ ಹುಚ್ಚೂ ಇವರಿಬ್ಬರಿಗಿತ್ತು,…! ಎದುರುಗಡೆ ಬರುವವರಿಗೆ ಇವರೆಂದೂ ದಾರಿ ಬಿಟ್ಟವರಲ್ಲ..! ಎಷ್ಟು ಜನ ಬೈಕೊಂಡು ಹೋಗ್ತಾ ಇದ್ರೋ!? ಬಟ್, ಅದನ್ನೂ ಕೂಡ ಹಿಂಗಾಯ್ತು ಕಣೇ.. ನಿನ್ನ ಜೊತೆ ಚಾಟ್ ಮಾಡ್ತಾ ಯಾರಿಗೋ ಗುದ್ದಿದೆ, ಸಿಕ್ಕಾಪಟ್ಟೆ ಬೈದು ಹೋದ್ರು ಎಂದು ಮದನ್ ಹೇಳಿದ್ದೂ ಇದೆ…! ಇದೇ ಅನುಭವ ಪ್ರೀಯಾಗೂ ಆಗಿದ್ದುಂಟು..! ಈಗ ಅರ್ಥವಾಯ್ತಲ್ಲಾ.. ಇವರದೆಂಥಾ ಚ್ಯಾಟಿಂಗ್ ಹುಚ್ಚು..! ಇದೆಂಥಾ ಪ್ರೀತಿ ಮಾರಾಯರೇ..! ಮೊಬೈಲ್ ಇಲ್ದೇ, ಚಾಟ್ ಮಾಡ್ದೇ ಪ್ರೀತಿನೇ ಇಲ್ಲ..!
ಹೀಗೆ ಮೊನ್ನೆ ಪ್ರೀಯಾಳೊಡನೆ ಚಾಟ್ ಮಾಡ್ತಾ ಮಾಡ್ತಾ ಮದನ್ ನ ಮೊಬೈಲ್ ಇದ್ದಕ್ಕಿದ್ದಂತೆ ಹ್ಯಾಂಗ್ ಆಯ್ತು..! ಸ್ವಿಚ್ ಆಫ್ ಮಾಡಿ ಆನ್ ಮಾಡಿದ್ರೂ.. ಬ್ಯಾಟರಿ ತೆಗೆದು, ಹಾಕಿ ಆನ್ ಮಾಡಿದ್ರೂ ಊ್ಞಂ, ಊ್ಞಂ ಮೊಬೈಲ್ ಸರಿ ಆಗ್ಲೇ ಇಲ್ಲ..! ಹೆಚ್ಚು ಕಡಿಮೆ ಎರಡು ಗಂಟೆ ಪ್ರಯತ್ನಿಸಿದ್ರೂ ಸರಿ ಆಗ್ಲೇ ಇಲ್ಲ..! ಅವಳಿಗೆ ಚಾಟ್ ಮಾಡೋಕೆ ಆಗಲ್ಲ ಅಂತ ಸಿಟ್ಟು ನೆತ್ತಿಗೇರ್ತು..! ಪದೇ ಪದೇ ಕಾಲ್ ಮಾಡಿದ್ಲು..! ಕಾಲ್ ಪಿಕ್ ಮಾಡೋಕೆ ಈ ಹ್ಯಾಂಗ್ ಆದ ಮೊಬೈಲ್ ನಲ್ಲಿ ಸಾಧ್ಯ ಆಗ್ಲೇ ಇಲ್ಲ..! ತಕ್ಷಣ ಪ್ಯಾಂಟ್ ಹಾಕಿಕೊಂಡು, ಸಿಕ್ಕ ಟೀ ಶರ್ಟ್ ಅನ್ನ ಹಾಕಿ ಕೊಂಡು, ತಲೆ ಬಾಚೋ ಶಾಸ್ತ್ರ ಮಾಡಿ..ಕೈಗೆ ಸಿಕ್ಕಷ್ಟು ದುಡ್ಡನ್ನು ಬ್ಯಾಗ್ನಿಂದ ತೆಗೆದು ಜೇಬಿಗಾಕಿಕೊಂಡು, ಆ ಮೊಬೈಲ್ ಎತ್ಕೊಂಡು, ಸರಿ ಮಾಡಿಸಲಿಕ್ಕಂತ ಹೋದ್ರೆ.. ಭಾನುವಾರ..! ಯಾವ ಮೊಬೈಲ್ ಶಾಪ್ ಕೂಡ ಬಾಗಿಲು ತೆರೆದಿಲ್ಲ..! ಇವಳ ಕಾಲ್ ಬರ್ತಾ ಇದೆ.. ಪಿಕ್ ಮಾಡೋಕೆ ಆಗಲ್ಲ..! ಇವನಿಗೆ ಸಿಟ್ಟು ನೆತ್ತಿಗೇರೋಕ್ಕೆ ಶುರುವಾಗುತ್ತೆ..! ರೂಮ್ ಗೆ ಬಂದ.. ಮೊಬೈಲ್ ಬಿಚ್ಚಿದ, ಬ್ಯಾಟ್ರಿ ತೆಗೆದು, ಬೇರೆ ಬ್ಯಾಟ್ರಿ..ಹಾಕಿದ.. ಆದ್ರೂ ಸರಿ ಆಗ್ಲೇ ಇಲ್ಲ..! ಸ್ವಲ್ಪ ಹೊತ್ತು ಹಾಗೇ ಬಿಟ್ಟಿದ್ರೆ ಆಗ್ತಾ ಇತ್ತೇನೋ..ಸುಮ್ಮನೇ ಇಡೋ ಬದಲು ತೆಗೆದು ತೆಗೆದು ಮೊಬೈಲನ್ನ ನೆಲಕ್ಕೆ ಜಪ್ಪಿದ..! ನೆಟ್ಟಕ್ಕಿದ್ದ ಡಿಸ್ಪ್ಲೇ ಕೂಡ ಡಮಾರ್..! ಈಗ ಆ ಕಡೆಯಿಂದ ಕಾಲ್ ಇಲ್ಲ. ಬೇರೆ ಮೊಬೈಲ್ ಗೆ ಸಿಮ್ ಹಾಕ್ಕೊಂಡು ಇವಳಿಗೆ ಫೋನ್ ಮಾಡೋಕೆ ನೋಡಿದ್ರೆ ಗ್ರಹಚಾರಕ್ಕೆ ಅವಳ ನಂಬರ್ ಸಿಮ್ ನಲ್ಲಿ ಸೇವ್ ಆಗಿರ್ಲಿಲ್ಲ..! ಇವನ ಚಡಪಡಿಕೆ, ಕೋಪ ಹೆಚ್ಚಾಗ್ತಾ ಇದೆ..! ತಡೆದುಕೊಳ್ಳಲಿಕ್ಕೆ ಆಗ್ಲೇ ಇಲ್ಲ..! ಇಷ್ಟೆಲ್ಲಾ ಆಗುವಷ್ಟರಲ್ಲಿ ರಾತ್ರಿ ಒಂಬತ್ತು ಗಂಟೆ ಆಗಿದೆ..! ಇವಳ ನಂಬರ್ ಹೇಗಪ್ಪಾ ಹುಡುಕೋದು , ಏನು ಮಾಡೋದು ಅಂತ ತಲೆ ಕೆಡಿಸಿಕೊಂಡಾಗ ನೆನಪಿಗೆ ಬಂದಿದ್ದೇ ಫೇಸ್ ಬುಕ್..!
ಹೌದು, ಮದನ್ ಗೆ ನೆನಪಾಯಿತು.. ಪರಿಚಯದ ಆರಂಭದಲ್ಲಿ ಪ್ರೀಯಾ ಅವಳ ಕಾಟೆಂಕ್ಟ್ ನಂಬರ್ ಅನ್ನು ಫೇಸ್ ಬುಕ್ ಮೂಲಕ ಮೆಸೇಜ್ ನಲ್ಲಿ ಕಳುಹಿಸದ್ದಳು..! ಆ ಮೆಸೇಜ್ ನಿಂದ ಆದ್ರೂ ನಂಬರ್ ತೆಗೆದುಕೊಳ್ಳೋಣ ಅಂಥ ಲ್ಯಾಪ್ ಟಾಪ್ ಆನ್ ಮಾಡಿ, ಡಾಂಗಲ್ ಹಾಕಿದ..! ಅವನ ಬ್ಯಾಡ್ಲಕ್ ಗೆ ಆ ಡಿಲಿಂಕ್ ಡಾಂಗಲ್ನಲ್ಲಿದ್ದ ನೆಟ್ ಪ್ಯಾಕ್ ಖಾಲಿ ಆಗಿತ್ತು..! ಫೇಸ್ ಬುಕ್ ಗೆ ಲಾಗಿನ್ ಆಗುವುದಾದರೂ ಹೆಂಗೇ? ತಕ್ಷಣ ತನ್ನ ಮೊಬೈಲ್ ಸಿಮ್ಮನ್ನ ಡಾಂಗಲ್ ಗೆ ಹಾಕಿದ.. ಅಂತೂ ಇಂತೂ 2ಜಿ ಸ್ಪೀಡ್ ನಲ್ಲಿ ಹಂಗೋ ಹಿಂಗೊ ಫೇಸ್ ಬುಕ್ ಗೆ ಲಾಗಿನ್ ಆದ..! ಪ್ರೀಯಾಳ ಜೊತೆ ಮಾಡಿದ ಚ್ಯಾಟಿಂಗ್ ಹಿಸ್ಟರಿ ತೆಗೆದ..! ಅದು ಯಾವ ಕಾಲದಲ್ಲೋ ನಂಬರ್ ಕಳುಹಿಸಿದ್ದಾಗಿತ್ತು, ನೆಟ್ ಬೇರೆ ಸಿಕ್ಕಾಪಟ್ಟೆ ಸ್ಲೋ..! ಆದ್ರೂ ತಾಳ್ಮೆಯಿಂದ ಹುಡಿಕಿದ..ಹೆಚ್ಚು ಕಡಿಮೆ ಎರಡು ಗಂಟೆ ಬಳಿಕ ನಂಬರ್ ಸಿಗ್ತು..! ಅದನ್ನು ಒಂದೆಡೆ ಬರೆದುಕೊಂಡು, ತನ್ನ ಸಿಮ್ಮನ್ನು ಡಾಂಗಲ್ ನಿಂದ ತೆಗೆದು ಬೇಸಿಕ್ ಸೆಟ್ ಗೆ ಹಾಕಿ..ಸಾರಿ ಹಿಂಗೆಲ್ಲಾ ಆಯ್ತು ಕಣೇ..! ಅಂಥ ಮೊಬೈಲ್ ರಾಮಾಯಣವನ್ನು ಮೆಸೇಜ್ ನಲ್ಲಿ ಹೇಳಿದ..! ಸುಮಾರು ಐದಾರು ಗಂಟೆಗಳ ಕಾಲ ಇವನ ಮೆಸೇಜ್ ಗಾಗಿ ಕಾದಿದ್ದ ಪ್ರೀಯಾಳಿಗೆ ಪಿತ್ತ ನೆತ್ತಿಗೇರಿತ್ತು..! ಬೇಕಂತಲೇ ಮೆಸೇಜ್ ಗೆ ರಿಪ್ಲೇ ಮಾಡಲ್ಲ..! ಕಾಲ್ ಮಾಡಿದ ಪಿಕ್ ಮಾಡಲ್ಲ..! ರಾತ್ರಿ ಹನ್ನೆರಡು ಗಂಟೆ ಆಗುತ್ತೆ… ಹುಟ್ಟು ಹಬ್ಬದ ಶುಭಾಷಯಗಳನ್ನು ಮೆಸೇಜ್ ಮೂಲಕ ತಿಳಿಸಿದ..! ಆಗ ರಿಪ್ಲೇ ಮಾಡಿದ್ಲು, “ಥ್ಯಾಂಕ್ಯೂ..ನಿನಗೆ ನನ್ನ ಹುಟ್ಟು ಹಬ್ಬವಾದ್ರೂ ನೆನಪಿದೆಯಲ್ಲಾ..?! ನೀನೇ ಮೊದಲ ವಿಶ್ ಮಾಡಿದೆಯಲ್ಲಾ”..! ಎಂದು ರಿಪ್ಲೇ ಮಾಡಿದ್ಲು..! ಮದನ್, ಮತ್ತೆ ಏನಾಯ್ತು ಅಂಥೆಲ್ಲಾ ಬಿಡಿಸಿ ಹೇಳಿದ..! ಅದಕ್ಕೆ “ಸುಳ್ಳು ಹೇಳ್ಬೇಡ, ನಾನು ಕಾಲ್ ಮಾಡಿದ್ರೂ ಪಿಕ್ ಮಾಡ್ಲಿಲ್ಲ..! ಬೇಕಂತಲೇ ಸ್ವಿಚ್ ಆಫ್ ಮಾಡಿದ್ದಿ, ಅಂಥ ಹೇಳ್ತಾಳೆ..! ಮದನ್ ಮಾತನ್ನು ಕೇಳುವುದೇ ಇಲ್ಲ..! ಅವಳಿಗೆ ಅವಳದ್ದೇ ಹಠ..! ಹೋಗ್ಲಿ, ನನ್ನ ನಂಬರ್ ಫೇಸ್ ಬುಕ್ ನಿಂದ ಹುಡುಕೋಕೆ ಇಷ್ಟೊತ್ತು ಬೇಕಾ..? ಸಿಮ್ ನಲ್ಲಿ ಮೆಸೇಜ್ ಕೂಡ ಸೇವ್ ಆಗಿರಿಲ್ವಾ..? ಫೇಸ್ ಬುಕ್ ಲ್ಲಾದ್ರೂ ಮೆಸೇಜ್ ಹಾಕ್ಬೇಕಿತ್ತೆಂದು ರೇಗಾಡುತ್ತಾಳೆ..! ಇಲ್ಲ, ನಿನ್ನ ನಂಬರ್ ಅಂತಲ್ಲ, ಯಾರ ನಂಬರ್ರೂ ನನ್ನಬಳಿಯಲ್ಲೀಗ ಇಲ್ಲ..! ಫೇಸ್ ಬುಕ್ ಆನ್ ಮಾಡಿ ನಂಬರ್ ಹುಡುಕಿದೆ..! ಸಿಕ್ಕ ತಕ್ಷಣವೇ ನಿನಗೆ ಈಗ ಮೆಸೇಜ್ ಹಾಕಿದೆ..! ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡಲಿಕ್ಕೆ ನೋಡಿದ್ರೆ, ನೀನು ಆನ್ ಲೈನ್ನಲ್ಲಿ ಇರ್ಲಿಲ್ಲ..! ಎಂದು ಇದ್ದ ವಿಷ್ಯವನ್ನ ಇದ್ದಂಗೆ ಹೇಳ್ತಾನೆ..! ಆದ್ರೂ ಅವಳು ಕೇಳಲ್ಲ..! ರಾತ್ರಿ ಇಡೀ ಅವಳಿಗೆ ಸಮಾಧಾನ ಮಾಡಿ ಮಾಡಿ ಸಾಕಾಗುತ್ತೆ..! ಕೊನೆಗೆ, ಸರಿ ನಾಳೆ ಸಿಗೋಣ, ಪ್ಲೀಸ್ ಸಿಗು ಎಂದು ಹೇಳಿ ಪ್ರೀಯಾ ಚ್ಯಾಟಿಂಗ್ ನಿಲ್ಲಿಸಿದಳು..! ಆಗ ಬೆಳಗಿನ ಜಾವ ಸುಮಾರು ಮೂರು ಗಂಟೆ..! ಆ ಹೊತ್ತಲ್ಲಿ ಗುಡ್ ನೈಟ್, ಟೇಕ್ ಕೇರ್, ಸ್ವೀಟ್ ಡ್ರೀಮ್ ಎಂದು ಮೆಸೇಜ್ ಮಾಡಿ ಮಲಗುತ್ತಾಳೆ..! ಇವನಿಗೂ ಜೋರು ನಿದ್ರೆ ಬರ್ತಾ ಇತ್ತು.., ಇವನಾಗಿಯೇ ಗುಡ್ ನೈಟ್ ಅಂದಿದ್ರೆ.. ಮಾತಡಕ್ಕೆ ಇಷ್ಟ ಇಲ್ಲ ಅಂಥ ಹೀಗೆ ಹೇಳ್ತಾ ಇದ್ದೀಯಾ ಎಂದು ಕೋಪ ಮಾಡಿಕೊಳ್ತಾಳೆ ಅಂಥ ಸುಮ್ಮನೇ ನಿದ್ರೆಗಣ್ಣಲ್ಲೇ ಚಾಟ್ ಮಾಡ್ತಾ ಮಾಡ್ತಾ ಇದ್ದ..! ಇವಳು ಗುಡ್ ನೈಟ್ ಅಂದಿದ್ದೇ ತಡ ಸರಿ, ಎಂದು ನಿದ್ರೆಗೆ ಜಾರಿದ..!
ಎಚ್ಚರವಾಗುವಾಗ ಬೆಳಿಗ್ಗೆ ಹತ್ತುಗಂಟೆ..! ಮೊಬೈಲ್ ನೋಡ್ತಾನೆ, 20ಕ್ಕೂ ಹೆಚ್ಚುಸಲ ಪ್ರೀಯಾ ಕಾಲ್ ಮಾಡಿದ್ದು, ಮಿಸ್ ಕಾಲ್ ಲೀಸ್ಟ್ ನಲ್ಲಿದೆ..! ಸಿಕ್ಕಾಪಟ್ಟೆ ಏನೇನೋ ಮೆಸೇಜ್ ಗಳು ಇನ್ ಬಾಕ್ಸ್ ನಲ್ಲಿದೆ…! ಅದನ್ನೆಲ್ಲಾ ನೋಡ್ತಾ ಕೂತ್ರೆ ಆಫೀಸ್ ಗೆ ಹೋಗೋಕೆ ಆಗಲ್ಲವೆಂದು ಮೊಬೈಲ್ ಬದಿ ಹಾಕಿ, ತಕ್ಷಣ ಬಾತ್ ರೂಂಗೆ ಹೋದ..! ನೀರನ್ನು ಬಿಸಿ ಮಾಡಿಕೊಳ್ಳಲೂ ಸಮಯವಿಲ್ಲದೆ ತಣ್ಣೀರಲ್ಲೇ ಸ್ನಾನ ಮಾಡಿ ಆಫೀಸ್ ಗೆ ಹೋದ..! ಆಫೀಸ್ ಗೆ ಹೋಗುವಾಗ ದಿನಕ್ಕಿಂತ ಒಂದು ಗಂಟೆ ತಡವಾಗಿದೆ..! ಆದ್ರೂ ಬಾಸ್ ದೇವರಂತವರು.. ಅದಕ್ಕೇನು ಆಕ್ಷೇಪ ಮಾಡಲಿಲ್ಲ..! ಆಫೀಸಿನಿಂದಲೇ ಪ್ರೀಯಾಳಿಗೆ ಕಾಲ್ ಮಾಡಿದ..! “ಎದ್ದಿದ್ದು ಲೇಟ್ ಆಯ್ತು, ಹೀಗೀಗೇ ಹೀಗೀಗೆ ಅಂಥ ಸತ್ಯವನ್ನೆಲ್ಲಾ ಹೇಳಿದ..! ಆಫೀಸ್ ಗೂ ಜಸ್ಟ್ ಬಂದೆ ಕಣೇ ಅಂದ..! ಆದ್ರೆ ಪ್ರೀಯಾ, ಮಾತು ಕೇಳಲೇ ಇಲ್ಲ..! ನಿನ್ನೆಯಿಂದ ನಾನ್ಯಾಕೋ ನಿನಗೆ ಬೇಡವಾಗಿದ್ದೇನೆ..ಎಂದು ಏನೇನೋ ಕಲ್ಪಿಸಿಕೊಂಡು ಬೈಯೋಕೆ, ಮುಸುಮುಸು ಅನ್ನೋಕೆ ಶುರು ಮಾಡಿದ್ಲು..! ಸರಿ, ಅರ್ಥ ಮಾಡ್ಕೊಳಕ್ಕಾದ್ರೆ ಮಾಡ್ಕೋ.. ಮೊದಲೇ ಆಫೀಸ್ ಗೆ ತಡವಾಗಿ ಬಂದಿದ್ದೇನೆ.. ನಿನ್ನ ಜೊತೆ ಹೀಗೇ ಮಾತಾಡ್ತಾ ಇದ್ರೆ ಆಗಲ್ಲ..! ಮೆಸೇಜ್ ಮಾಡು ರಿಪ್ಲೇ ಮಾಡ್ತೀನಿ.. ಇಲ್ಲ, ಸಂಜೆ ಸಿಗ್ತೀನಿ..ಅಂದು ಕಾಲ್ ಕಟ್ ಮಾಡಿದ..! ಇದನ್ನೂ ಅರ್ಥಮಾಡಿಕೊಳ್ಳದೆ ಮತ್ತಷ್ಟು ಕೋಪಗೊಂಡಳು ಪ್ರೀಯಾ..!
ಸಂಜೆ ಆಫೀಸ್ನಿಂದ ಹೊರಟವನೇ ಫೋನ್ ಮಾಡಿದ..! ಅವಳು ಪಿಕ್ ಮಾಡ್ಲಿಲ್ಲ..! ತುಂಬಾ ಹೊತ್ತು ಆದ್ಮೇಲೆ ಅವಳೇ ಫೋನ್ ಮಾಡಿದ್ಲು ನಾನು ಮನೆಗೆ ಬಂದಿದ್ದೇನೆ..! ನೀನೇನು ನನ್ನ ಕರ್ಕೊಂಡು ಹೋಗಿ ಟ್ರೀಟ್ ಕೊಡಿಸ ಬೇಕಿಲ್ಲ..! ನನ್ನ ಬರ್ತಡೆ ಸೆಲಬ್ರೇಟ್ ಮಾಡ್ಬೇಕಿಲ್ಲ..! ಗುಡ್ ಬಾಯ್ ಅಂಥ ಕಾಲ್ ಕಟ್ ಮಾಡಿಯೇ ಬಿಟ್ಲು..! ಇವಳಿಗಾಗಿ ಮನೆಗೂ ಹೋಗದೆ, ಮಾಮೂಲಿ ಜಾಗದಲ್ಲಿ ಕಾಯ್ತ ಇದ್ದ ಮದನ್ ಗೆ ಬೇಜಾರೂ ಆಯ್ತು.. ಎಂಥಾ ಹುಡುಗಿಯಪ್ಪಾ.. ಮುಂದೆ ಕಷ್ಟವಿದೆ.. ಸಾಕಪ್ಪಾ ಸಾಕು ಅಂಥ ಅವಳನ್ನು ಮರೆಯಲು ನಿರ್ಧರಿಸಿದ..! ಕಷ್ಟವಾಗ್ತಾ ಇದೆಯಂತೆ..! ಆದ್ರೂ ಮರೆಯುತ್ತೇನೆಂದು ಹಠ ಹಿಡಿದಿದ್ದಾನೆ..! ಅವಳಿಗೂ ಅದೇ ಮೊಂಡು ಹಠ..! ಈಗ ಪರಸ್ಪರ ಇಬ್ಬರೂ ಮಾತಾಡ್ತಾ ಇಲ್ಲ..!ಚ್ಯಾಟಿಂಗ್ ಹುಚ್ಚು.., ಯಾವಾಗ್ಲೂ ಮೆಸೇಜ್ ಮಾಡ್ತಾ ಇರ್ಬೇಕೆಂಬ ಹುಚ್ಚು ಪ್ರೀತಿ..! ಅರ್ಥಮಾಡಿಕೊಳ್ಳದ ಮೊಂಡು ಹಠ ಅವರ ಪ್ರೀತಿಗೇ ವಿಷವಾಗಿದೆ..! ಯಾವತ್ತು ಮಾತಾಡ್ತಾರೋ, ಒಂದಾಗ್ತಾರೋ ಗೊತ್ತಿಲ್ಲ…! ಬಟ್ ಇವರ ಪ್ರೀತಿಗೆ ಮೊಬೈಲ್, ಚ್ಯಾಟಿಂಗ್ ಹುಚ್ಚೇ ಬೆಂಕಿ ಹಚ್ಚಿತು..! ಮೊಬೈಲ್ ಇಲ್ದೇ ಆಗಾಗ ಸಿಗುವುದು, ಮಾತನಾಡುವುದು ಇದ್ದಿದ್ರೆ ಇವರ ಪ್ರೀತಿ ಸಾಯ್ತಾ ಇತ್ತೇ..? ಇವರು ದೂರ ಆಗ್ತಾ ಇದ್ರೆ..? ಗೊತ್ತಿಲ್ಲ, ಬಟ್, ಆದಷ್ಟು ಬೇಗ ಪ್ರೀಯಾ ಮದನ್ ಒಂದಾಗಲಿ ಎಂದು ಹರಸೋಣ..! ಒಂದಾಗಿ.. ಒಂದಾದ ಮೇಲೆ ಮೊಬೈಲ್ ಬಿಟ್ಟು ಪ್ರೀತಿಸಿ ನೋಡಿ..!
ಶಶಿಧರ ಡಿ ಎಸ್ ದೋಣಿಹಕ್ಲು

Story Courtesy : The New Indian Express

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

ಅಕ್ಟೋಬರ್ 14ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್..!

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

ತಿನ್ನುವ ಮುನ್ನ ಯೋಚಿಸು ಚಿನ್ನಾ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?

ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

LEAVE A REPLY

Please enter your comment!
Please enter your name here