ಟೀಂ ಇಂಡಿಯಾ ನಾಯಕ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗನನ್ನು ಸೋಲಿಸಿದ್ದು ಹೇಗೆ ಗೊತ್ತಾ..?

0
126

ಟೀಂ ಇಂಡಿಯಾ ಏಕದಿನ ಮತ್ತು ಟಿ20 ನಾಯಕ “ಮಹೇಂದ್ರ ಸಿಂಗ್ ಧೋನಿ” ಬಿಡುವಿಲ್ಲದ ಕ್ರಿಕಟಿನಿಂದ ತುಂಬಾನೇ ಬ್ಯುಸಿ ಆಗಿರ್ತಾರೆ..! ಈಗಂತೂ ದಕ್ಷಿಣಾಫ್ರಿಕಾ ತಂಡವನ್ನು ಎದುರಿಸಲು ತಯಾರಿ ನಡೆಸ್ತಾ ಇದ್ದಾರೆ..! ಹೀಗಾಗಿ ಅವರು ಟ್ಟೀಟರ್, ಫೇಸ್ ಬುಕ್ ಇತ್ಯಾದಿ ಇತ್ಯಾದಿ ಸಾಮಾಜಿಕ ಜಾಲತಾಣಗಳಿಗೆ ಎಂಟ್ರೀ ಕೊಡುವುದು ತೀರಾ ಅಪರೂಪ..! ಆದ್ರೂ ಕೆಲವೊಮ್ಮೆ ಎಂಟ್ರಿ ಕೊಟ್ಟಾಗ ಸಿಕ್ಕಾಪಟ್ಟೆ ಸುದ್ದಿ ಆಗ್ತಾನೇ ಇರ್ತಾರೆ..! ಅಪರೂಪಕ್ಕೊಮ್ಮೆ ಟ್ವೀಟರ್ ಗೆ ಲಾಗ್ ಇನ್ ಆದಾಗಲೆಲ್ಲಾ ಸುದ್ದಿಯಲ್ಲಿರ್ತಾರೆ..! ಅದೇ ರೀತಿ ಈ ಬಾರಿಯೂ ಸುದ್ದಿಯಲ್ಲಿದ್ದಾರೆ..! ಧೋನಿ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ “ಡೆರೇನ್ ಗಾಫ್” ಜೊತೆಯಲ್ಲಿ “ಟ್ವೀಟ್ ಕದನ” ಮಾಡಿದ್ದಾರೆ..! ಆ ಕದನದಲ್ಲಿ ಎದುರಾಳಿಯನ್ನು ಅತೀ ಕಡಿಮೆ ಅವಧಿಯಲ್ಲೇ ಸೋಲಿಸಿದ್ದಾರೆ..! ಆ “ಟ್ವೀಟ್ ಕದನ”ದ ವಿವರ ಇಲ್ಲಿದೆ..!
“ಮಹೇಂದ್ರ ಸಿಂಗ್ ಧೋನಿ” 2 ಸ್ಟ್ರೋಕ್ ಸಿಂಗಲ್ ಸಿಲೆಂಡರ್ ಬೈಕಿನ ಫೋಟೋ ಹಾಕಿ, “ಈ ಬೈಕ್ ಅನ್ನು ರೈಡ್ ಮಾಡಲು ತುಂಬಾ ಖುಷಿಯಾಗುತ್ತೆ..ರೀ ಈ ಬೈಕ್ ಮತ್ತೆ ರೀ ಸ್ಟೋರ್ ಆಗಿ ಮರಳಿ ಬರಲಿ..! ಇದನ್ನು ನೀವು ಒಪ್ಪುತ್ತೀರಿಯೇ? ಎಂಬ ಅರ್ಥದಲ್ಲೊಂದು ಟ್ಟೀಟ್ ಮಾಡಿದ್ರು..! ಅದಕ್ಕೆ ಇಂಗ್ಲೇಂಡಿನ ಮಾಜಿ ಕ್ರಿಕೆಟಿಗ “ಡೆರೇನ್ ಗಾಫ್” ಮತ್ತೊಂದು ಬೈಕ್ ನ ಚಿತ್ರ ಪೋಸ್ಟ್ ಮಾಡಿ “ಇದರಷ್ಟು ಒಳ್ಳೆಯದೇನು ಅಲ್ಲ” ಎಂದು ಪ್ರತಿ ಟ್ವೀಟ್ ಮಾಡಿದ್ರು..! ಆಗ ಧೋನಿ ಮತ್ತೊಂದು ಫೋಟೋ ಹಾಕಿ “ಇದು ಆ ಬೈಕಿಗೆ ಸರಿಸಾಟಿ” ಎಂದು ಮತ್ತೊಂದು ಟ್ವೀಟ್ ಮಾಡಿದ್ರು..! ಆ ಟ್ವೀಟ್ ನೀವೇ ನೋಡಿ..! ಕೊನೆಗೂ ಡೆರೇನ್ ಗಾಫ್, ಧೋನಿ ಎದುರು ಸೋತೇ ಬಿಟ್ರು..! ಅಲ್ಲಾ ಸ್ವಾಮಿ ಎರಡೆರಡು ವಿಶ್ವಕಪ್ ಗೆದ್ದು ಕೊಟ್ಟ ಟೀಂ ಇಂಡಿಯಾ ನಾಯಕನಿಗೆ ಇವೆಲ್ಲಾ ಒಂದ್ ಮ್ಯಾಟ್ರಾ..?

ಡೆರೇನ್ ಗಾಫ್ ಮತ್ತು ಧೋನಿ ನಡುವೆ “ಟ್ಟೀಟ್ ಕದನ”..!

 

 

  • ಶಶಿಧರ ಡಿ ಎಸ್ ದೋಣಿಹಕ್ಲು

POPULAR  STORIES :

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here