Home ಎಲ್ಲೆಲ್ಲಿ ಏನೇನು.? ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ

0
ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ

ಈ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳ ಪೈಕಿ ಟಿವಿ9 ಎಂದಿನಂತೆ ಮೊದಲ ಸ್ಥಾನದಲ್ಲಿ ಭದ್ರವಾಗಿದ್ದು, 115 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 126 ಪಾಯಿಂಟ್ ಪಡೆದಿತ್ತು.


77 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಭದ್ರವಾಗಿದೆ. ಕಳೆದವಾರ ಈ ಚಾನಲ್ ನ ಪಾಯಿಂಟ್ 73 ಆಗಿತ್ತು.

ಸುವರ್ಣ ನ್ಯೂಸ್ 41 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ. ಸುವರ್ಣದ ಕಳೆದವಾರದ ಪಾಯಿಂಟ್ 42.


ನ್ಯೂಸ್ 18 ಕನ್ನಡ ಈ ವಾರ 30 ಪಾಯಿಂಟ್ ಪಡೆದಿದ್ದು, ಕಳೆದವಾರಕ್ಕಿಂತ (32) 2 ಪಾಯಿಂಟ್ ಕಡಿಮೆ ಪಡೆದಿದೆ. ಇದು 4ನೇ ಸ್ಥಾನದಲ್ಲಿದೆ.


ಇನ್ನುಳಿದಂತೆ ಬಿಟಿವಿ 21, (ಕಳೆದವಾರ 24), ದಿಗ್ವಿಜಯ 18 (ಕಳೆದವಾರ16), ಪ್ರಜಾ ಟಿವಿ 15 (ಕಳೆದವಾರ 14), ಟಿವಿ5 10 (ಕಳೆದವಾರ 13), ಕಸ್ತೂರಿ 9 (ಕಳೆದವಾರವೂ 9), ಸುದ್ದಿ 8 (ಕಳೆದವಾರ 9), ರಾಜ್ ನ್ಯೂಸ್ 8 (ಕಳೆದವಾರವೂ 8) ಪಾಯಿಂಟ್ ಪಡೆದಿವೆ.

 

LEAVE A REPLY

Please enter your comment!
Please enter your name here