No menu items!
5.2 C
Munich
Friday, April 24, 2026

ನಿತ್ಯ ಸ್ನಾನ ಮಾಡ್ಲಿಲ್ಲ ಅಂದ್ರೆ ಹೃದಯ ಸಂಬಂಧಿ ಕಾಯಿಲೆಯಿಂದ ಮುಕ್ತಿ!

Must read

ಅಯ್ಯೋ ಇದೇನಪ್ಪಾ ಒಂದು ದಿನ ಸ್ನಾನ ಮಾಡ್ಲಿಲ್ಲ ಅಂದ್ರೇನೆ ದೇಹಕ್ಕೆ ಆಯಾಸ ಅನ್ನಿಸತ್ತೆ ಇಂತಹದ್ರಲ್ಲಿ ಸ್ನಾನನೇ ಮಾಡ್ಲಿಲ್ಲ ಅಂದ್ರೆ ಹೆಂಗೆ ಅಲ್ವಾ. ಬಿಸಿಲು, ಟ್ರಾಫಿಕ್, ಅಫೀಸ್ ಡ್ಯೂಟಿ ನಿತ್ಯ ಜಂಜಾಟದ ಬದುಕಿನ ಮಧ್ಯೆ ಮೈಯೆಲ್ಲಾ ಬೆಂದೊಗಿರುತ್ತೆ ಈ ಟೈಮ್ನಲ್ಲಿ ಬಿಸಿಬಿಸಿ ನೀರಲ್ಲಿ ಸ್ನಾನ ಮಾಡಿ ಮಲಗಿದ್ರೆ ಸ್ವರ್ಗಕ್ಕೆ ಇನ್ನೆರಡೆ ಮೆಟ್ಟಿಲು ಅಂತನ್ಸುತ್ತೆ. ಇನ್ನ ಸ್ನಾನಾನೇ ಮಾಡ್ಲಿಲ್ಲ ಅಂದ್ರೆ ಹೆಂಗೇಳಿ..!
ಒಂದೆರಡು ದಿನ ಸ್ನಾನ ಮಾಡ್ಲಿಲ್ಲ ಅಂದ್ರೆ ಪಕ್ಕದಲ್ಲಿ ಕುಳಿತವರು ಹತ್ತಾರು ಬಾರಿ ನಮ್ಮನ್ನು ನೋಡಿ ಅಸಹ್ಯ ಪಡುತ್ತಿರುತ್ತಾರೆ. ಇನ್ನು ಸ್ನಾನನೇ ಮಾಡದೇ ಇರುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ. ಆದ್ರೆ ಇದಕ್ಕಿಂತ ಭಯಾನಕರವಾದ ವಿಚಾರವೊಂದನ್ನು ಅಮೆರಿಕಾದ ಅಟಾಹ್ ಯುನಿವರ್ಸಿಟಿ ಹೊರಹಾಕಿದೆ ನೋಡಿ.
ಆದೇನ್ ಅಂತೀರಾ ನಿತ್ಯ ಸ್ನಾನ ನಮ್ಮ ದೇಹದಲ್ಲಿನ ಉಪಯುಕ್ತ ಸೂಕ್ಷ್ಮ ಜೀವಿಗಳನ್ನ ನಿರ್ಮೂಲನೆ ಮಾಡುತ್ತದೆ ಅದ್ದರಿಂದ ನಿತ್ಯ ಸ್ನಾನದಿಂದ ಮುಕ್ತಿ ಪಡೆದರೆ ಆರೋಗ್ಯ ಚನ್ನಾಗಿರುತ್ತದೆ ಎನ್ನುವುದರ ಮೂಲಕ ಆಶ್ಚರ್ಯಕರ ಸಂಗತಿಯೊಂದನ್ನ ಹೊರ ಹಾಕಿದೆ. ಸ್ನಾನ ಮಾಡಿದರೆ ಬೆವರಿನ ವಾಸನೆ ಹೋಗಿ ದೇಹ ಶುಚಿಯಾಗುತ್ತೆ ಅಲ್ವೇ.. ಆದ್ರೆ ಪ್ರತಿ ನಿತ್ಯ ಸ್ನಾನ ಮಾಡೋದ್ರಿಂದ ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾ, ವೈರಸ್, ಫಂಗಸ್‍ಗಳು ಸೋಪ್, ಶಾಂಪ್‍ಗಳ ಬಳಕೆಯಿಂದ ನಾಶವಾಗಿ ರೋಗಕ್ಕೆ ಎಡೆಮಾಡಿಕೊಡುತ್ತದೆ ಎಂಬ ವರದಿ ನೀಡಿದ್ದಾರೆ..!
ದೇಹದಲ್ಲಿರುವ ಸೂಕ್ಷ್ಮಾಣು ಜೀವಿಗಳಾದ ಬ್ಯಾಕ್ಟೀರಿಯಾ, ಫಂಗಸ್, ವೈರಸ್ ಜೀರ್ಣವ್ಯವಸ್ಥೆಯನ್ನು ಸುಗಮಗೊಳಿಸಿ ರಕ್ತಸಂಚಾರಕ್ಕೆ ನೆರವುಮಾಡಿಕೊಟ್ಟು ಹೃದಯ ಸಂಬಂಧಿ ಕಾಯಿಲೆ ಬಾರದಂತೆ ತಡೆಗಟ್ಟುತ್ತವೆಯಂತೆ ಎಂದು ವಿವಿ ಅಧ್ಯಯನದಿಂದ ತಿಳಿಸಿದೆ. ಸ್ನಾನ ಮಾಡದೇ ಇರುವುದರಿಂದ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳುವುದೇ ಇಲ್ಲವಂತೆ..! ಅಂದ್ರೆ ದೇಹದಲ್ಲಿ ಅಮೋನಿಯಾ-ಆಕ್ಸಿಡೈಸಿಂಗ್ ಬ್ಯಾಕ್ಟೀರಿಯಗಳು ಇದ್ದಷ್ಟು ಚರ್ಮದ ಕಾಯಿಲೆಗಳು ಕಡಿಮೆಯಾಗುತ್ತವೆ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದಿಯಂತೆ.
ಈ ಸಂಶೋಧನೆಗಾಗಿ ಲಂಡನ್ನಿನ ಪದವೀಧರ ಡೇವ್ ವಿಟ್‍ಲಾಕ್ ಎಂಬಾತನನ್ನು ಬಳಕೆ ಮಾಡಿಕೊಂಡಿದ್ದು, ಆತ ಸುಮಾರು 12 ವರ್ಷಗಳ ಕಾಲ ಸ್ನಾನಾನೆ ಮಾಡಿರ್ಲಿಲ್ವಂತೆ ನೋಡಿ. ಮನೆಯವರೆಲ್ಲಾ ಈತನ ಜೊತೆ ಅದೇಗೆ ಜೀವನ ಸಾಗಿಸಿದ್ರಪ್ಪ ಅನ್ನಿಸಿರಬೇಕಲ್ವಾ. ಈತ ಸ್ನಾನದ ಬದಲು ಎಒ ಬಯೋಮ್(ಅಮೋನಿಯಾ ಆಕ್ಸಿಡೈಸಿಂಗ್ ಬ್ಯಾಕ್ಟೀರಿಯ) ಸ್ಪ್ರೇಯನ್ನು ಬಳಸುತ್ತಿದ್ದನಂತೆ. ನಿತ್ಯ ಸ್ನಾನ ಮಾಡುವವರಿಗಿಂತಲೂ ಈತನ ಚರ್ಮ ಆರೋಗ್ಯಕರವಾಗಿ, ಕಾಂತಿಯುತವಾಗಿ ಇದೆಯಂತೆ ಅಷ್ಟೇ ಅಲ್ಲ ಹೃದಯದ ಆರೋಗ್ಯವೂ ಸಹ ಇತರರಿಗಿಂತ ಚನ್ನಾಗಿ ಇದೆ ಎಂದು ತಪಾಸಣೆ ಮೂಲಕ ತಿಳಿದು ಬಂದಿದೆ. ವೈಧ್ಯಕೀಯ ಲೋಕದಲ್ಲಿ ಅದೇನೇನೋ ಬದಲಾವಣೆಗಳು ಆಗ್ಬಹುದು. ಆದ್ರೆ ನನ್ನ ಪ್ರಕಾರ ಸ್ನಾನ ಮಾಡದೆ ಬದುಕಿರೋವುದು, ಬದುಕಿದ್ದು ಸತಂತ್ತೆ. ನೀವೇನಂತೀರಾ..?

  • ಹಾಲೇಶ್ ಎಂ.ಎಸ್ ಹುಣಸನಹಳ್ಳಿ

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article