No menu items!
5.1 C
Munich
Friday, April 24, 2026

ಸದ್ಯದಲ್ಲೆ ಮಂತ್ರಿಮಾಲ್ ರೀ ಓಪನ್..!

Must read

ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಮಾಲ್‍ಗಳಲ್ಲಿ ಒಂದಾದ ಮಂತ್ರಿ ಮಾಲ್ ಕಳೆದೆರಡು ವಾರಗಳಿಂದ ಸಖತ್ ಸುದ್ದಿಯಲ್ಲಿತ್ತು. ಈ ಮಂತ್ರಿಮಾಲ್‍ನ ಹಿಂಬದಿಯ ಗೋಡೆ ಕುಸಿತದಿಂದ ಇಬ್ಬರು ಗಾಯಗೊಂಡಿದ್ದು, ಕಳಪೆ ಕಟ್ಟಡ ನಿರ್ಮಾಣದ ಆರೋಪ ಹೊತ್ತು ಸುಮಾರು ಎರಡು ವಾರ ಮುಚ್ಚಲ್ಪಟ್ಟಿತ್ತು. ಆದ್ರೆ ಮತ್ತೆ ಮಂತ್ರಿಮಾಲ್ ಆರಂಭವಾಗುವ ಎಲ್ಲಾ ಲಕ್ಷಣಗಳಿದ್ದು ಇನ್ನೆರಡು ದಿನಗಳಲ್ಲಿ ಮಂತ್ರಿಮಾಲ್ ಗ್ರಾಹಕರಿಗಾಗಿ ಪುನರಾರಂಭಗೊಳ್ಳುವ ಸಾಧ್ಯತೆ ಇದೆ. ಗೋಡೆ ಕುಸಿತದಿಂದ ಜನರಲ್ಲಿ ಭಾರಿ ಆತಂಕ ಸೃಷ್ಠಿಸಿದ್ದ ಈ ಮಾಲ್‍ಗೆ ಧೃಡತೆ ಪ್ರಮಾಣ ಪತ್ರ ದೊರೆತಿದ್ದು ಜನರು ಯಾವುದೇ ಆತಂಕವಿಲ್ಲದೆ ಮಂತ್ರಿಮಾಲ್‍ಗೆ ಬಂದು ಶಾಪಿಂಗ್ ಮಾಡ್ಬೋದು ಎಂದು ನಗರ ಯೋಜನೆ ಸಹಾಯಕ ನಿರ್ದೇಶಕ ಎನ್.ತಿಪ್ಪಣ್ಣ ಬಿಬಿಎಂಪಿ ಆಯುಕ್ತರಿಗೆ ವರದಿ ನೀಡಿದ್ದು, ಇನ್ನೆರಡು ದಿನಗಳಲ್ಲಿ ಮಂತ್ರಿಮಾಲ್ ತೆರೆಯಲ್ಪಡಲಿದೆ. 4ನೇ ಮಹಡಿಯ ಮೇಲೆ ವಾಟರ್ ಟ್ಯಾಂಕ್ ಲೀಕಾಗಿ ನೀರು ಸೋರಿಕೆಯಾಗಿತ್ತು. ಇದು ಯಾರ ಗಮನಕ್ಕೂ ಬಂದಿರಲಿಲ್ಲ. ನೀರು ಸೋರಿಕೆ ಪ್ರಮಾಣ ವಿಪರೀತವಾದ ಹಿನ್ನಲೆಯಲ್ಲಿ ಗೋಡೆ ಕುಸಿತ ಕಂಡು ಬಂದಿತ್ತು. ಈ ಘಟನೆ ನಡೆದ ತಕ್ಷಣವೇ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಸಚಿವ ಜಾರ್ಜ್, ಮೇಯರ್ ಪದ್ಮಾವತಿ ಸೇರಿದಂತೆ ಬಿಬಿಎಂಪಿ ಸದಸ್ಯರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತನಿಖಾ ತಂಡ ರಚಿಸುವಂತೆ ತಿಳಿಸಿದರು. ಇನ್ನು ಮಾಲ್‍ನ ಗೋಡೆ ಕುಸಿತಕ್ಕೆ ಸಂಬಂಧಿಸಿದಂತೆ ಅತಿಯಾದ ನೀರು ಸೋರಿಕೆಯೇ ಕಾರಣ ಎಂದು ಧೃಡಪಟ್ಟ ಹಿನ್ನಲೆಯಲ್ಲಿ ಮಂತ್ರಿಮಾಲ್‍ನಲ್ಲಿ ದುರಸ್ತಿ ಕಾರ್ಯ ಮುಗಿಯುವವರೆಗೂ ಓಪನ್ ಮಾಡಿರಲಿಲ್ಲ. ಈಗ ದುರಸ್ತಿ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು ಇನ್ನೆರಡು ದಿನಗಳಿಗೊಳಗಾಗಿ ಮಾಲ್ ಪುನರಾರಂಭಗೊಳ್ಳುವ ಸಾಧ್ಯತೆ ಇದೆ.
ಮಾಲ್‍ನ ಸುತ್ತ ಅನುಮಾನಗಳ ಹುತ್ತ..!
ಹೌದು.. ಮಂತ್ರಿಮಾಲ್ ಧೃಡತೆ ಪ್ರಮಾಣ ಪತ್ರ ನೀಡಿರುವ ಕುರಿತು ಭಾರಿ ಅನುಮಾನಗಳು ಮೂಡಿ ಬರ್ತಾ ಇದೆ. ಧೃಡತೆ ಪ್ರಮಾಣ ಪತ್ರ ನೀಡಿರುವ ಹಿಂದೆ ಭಾರಿ ಪ್ರಮಾಣದ ಗೋಲ್‍ಮಾಲ್ ನಡೆದಿದೆ ಎಂಬ ವದಂತಿಗಳು ಕೇಳಿ ಬರ್ತಾ ಇದೆ. ಈಗಾಗ್ಲೆ ಅಕ್ರಮ ಜಾಗ ಒತ್ತುವರಿ ಆರೋಪ ಹೊತ್ತಿರುವ ಮಂತ್ರಿಮಾಲ್ ಈಗ ಗೋಡೆ ಕುಸಿತದಿಂದ ಸಾಕಷ್ಟು ಚರ್ಚೆಗಳಿಗೆ ಕಾರಣವಾಯ್ತು. ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದ್ದ ಮರಳು ಕಳಪೆ ಮಟ್ಟದ್ದಾಗಿದ್ದು ಈ ಕುರಿತಾಗಿ ಹಲವು ಪ್ರತಿಭಟನೆಗಳು ನಡೆದು ಹೋಗಿದ್ವು. ಇವೆಲ್ಲದರ ನಡುವೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ದಕ್ಕಿತ್ತು. ಆದ್ರೆ ಈಗ ಮಂತ್ರಿಮಾಲ್ ಗೋಡೆ ಕುಸಿತಗೊಂಡಿದ್ರೂ ಇದಕ್ಕೆ ತಂತ್ರಜ್ಞರು ಧೃಡತೆ ಪ್ರಮಾಣ ಪತ್ರ ನೀಡಿರೋದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆಯಲ್ಲದೆ, ಇದರ ಹಿಂದೆ ಸಾಕಷ್ಟು ಅಕ್ರಮಗಳು ನಡೆದಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article