ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

Date:

ಬಣ್ಣದ ಲೋಕ ಅಂದ್ರೆ ಅಲ್ಲಿ ಲವ್, ಡೇಟಿಂಗ್, ರೋಮ್ಯಾನ್ಸ್ ಕಾಮನ್ ಅಲ್ವೇ? ತಿಂಗಳುಗಳು ಕಳೆದಂತೆ ಬಾಯ್ ಫ್ರೆಂಡ್, ಗರ್ಲ್‍ಫ್ರೆಂಡ್ ಚೇಂಜ್ ಮಾಡೋರೆ ಹೆಚ್ಚು ಆದ್ರೆ ಈ ನಟಿಮಣಿಗೆ ಲವ್ ಮ್ಯಾರೇಜ್ ಅಂದ್ರೇನೆ ಆಗೋಲ್ಲಾ. ಸೆಲೆಬ್ರೆಟಿಗಳು ಅಂದ್ರೆ ಇವತ್ತು ಇದ್ದವರ ಜೊತೆ ನಾಳೆ ಇರೋಲ್ಲಾ ಅನ್ನೊದೆ ನಮ್ಮ ತಲೆಲಿರುತ್ತೆ ಅಲ್ವಾ.. ಫಾರ್ ಎಗ್ಸಾಂಪಲ್ ಹೇಳೋದಾದ್ರೆ ರಣಬೀರ್ ಕಪೂರ್ ದೀಪಿಕಾಳ ಜೊತೆ ಡೇಟಿಂಗ್, ಲವ್ ಅಂತೆಲ್ಲಾ ಸುತ್ತಾಡಿ ಕ್ಯಾಟ್ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದೆ ಆಕೆಯ ಮಾದಕ ನೋಟಕ್ಕೆ ಮನಸೋತು ಆಕೆಯ ಹಿಂದೆ ಬಿದ್ದ, ಆಕೆಯ ಜೊತೆನೂ ಬ್ರೇಕ್ ಅಪ್ ಮಾಡ್ಕೊಂಡು ಈಗ ಸೋನಮ್ ಕಪೂರ್ ಜೊತೆ ಕುಚ್ಚ್ ಕುಚ್ಚ್ ನಡೆಸ್ತಿದ್ದಾನಂತೆ ಎನ್ನುವು ಗುಸುಗುಸು ಪಿಸುಪಿಸು ಮತುಗಳು ಬಾಲಿವುಡ್‍ನಲ್ಲಿ ಕೇಳಿಬರುತ್ತಿದೆ.. ದೀಪಿಕಾ ಏನ್ ಕಡ್ಮೆ ಅಲ್ಲ ರಣಬೀರ್ ಕೈಕೊಟ್ಟಿದ್ದೆ ಕಾಯುತ್ತಿದ್ದವಳು ಬಾಲಿವುಡ್‍ನಲ್ಲಿ ಹೆಣೈಕ್ಳ ಮನಕದಿಯುತ್ತಿದ್ದ ನಟ ರಣವೀರ್ ಕಪೂರ್, ಅವ್ನ ಹಿಂದೆ ಬೀಳ್ತಾಳೆ ಈ ನಟಿ ಮಣಿ ಅಷ್ಟೆ ಆಗಿದ್ರೆ ಹೇಗೋ ಆಗ್ತಿತ್ತು ಬಾಲಿವುಡ್‍ನಿಂದ ಹಾಲಿವುಡ್‍ಗೆ ಆರಿದ್ದೆ ಥ್ರಿಬಲ್ ಎಕ್ಸ್ ಖ್ಯಾತಿಯ ವಿನ್ ಡೀಸೆಲ್‍ಗೆ ಮನಸೋತು ಅವನಿಂದ ಮಗುಪಡೆಯುವ ಆಸೆಯನ್ನು ವ್ಯಕ್ತಪಡಿಸುತ್ತಾಳೆ ದೀಪಿಕಾ..

ಇಷ್ಟೆಲ್ಲಾ ಕಲರ್ ಕಲರ್ ಕಾಗೆ ಹಾರಿಸಿಕೊಂಡು, ದಿನಕಳೆಯುವ ಬಣ್ಣದ ಲೋಕದಲ್ಲಿ ಲವ್ ಡೇಟಿಂಗ್ ಅಂದ್ರೇನೆ ಇಷ್ಟಾ ಇಲ್ಲ ನಾನ್ ಪಕ್ಕಾ ಆರೆಂಜ್ಡ್ ಮ್ಯಾರೇಜೇ ಆಗೊದು ಎನ್ನುವ ಗೌರಮ್ಮ ಯಾರಿದ್ದಾರಪ್ಪಾ ಎನ್ನುವ ಡಾಟ್ ನಿಮ್ಮನ್ನ ಕಾಡ್ತಿದೆ ಅಲ್ವಾ. ಟಾಲಿವುಡ್, ಕಾಲಿವುಡ್, ಬಾಲಿವುಡ್‍ನಲ್ಲೂ ಮಿಂಚುತ್ತಿರುವ ಮಗಧೀರನ ರಾಣಿ.. ಇತ್ತೀಚಿಗಷ್ಟೆ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದ ಮೆಗಾಸ್ಟಾರ್ ಚಿರಂಜೀವಿ ಅವರ ಖೈದಿ ನಂ.150 ಚಿತ್ರದ ನಾಯಕಿ.. ಇಷ್ಟೆಲ್ಲಾ ಹೇಳಿದ್ಮೇಲೆ ಯಾರಪ್ಪಾ ಈ ನಾರಿ ಅಂಥಾ ಗೋತ್ತಾಗಿರುತ್ತೆ ಅಲ್ವಾ.. ಕಾಜಲ್ ಆಗರ್‍ವಾಲ್ ಕಣ್ರಿ..

ಆದ್ರೆ ಲವ್, ಡೇಟಿಂಗ್, ರೊಮ್ಯಾನ್ಸ್ ಅಂದ್ರೆ ನನಗೆ ಅಲರ್ಜಿ ಅಂಥಾ ಈ ಮೇಡಮ್ ಯಾಕೇಳಿದ್ರು ಗೊತ್ತಾ? ಎಲ್ಲಾ ಫೀಲ್ಡ್ ನಲ್ಲೂ ಪೈಪೊಟಿ ಇದ್ದೇ ಇರುತ್ತೆ ಅಲ್ವೇ? ಅದ್ರಲ್ಲೂ ಸಿನಿಜಗತ್ತಿನಲ್ಲಿ ಸ್ವಲ್ಪ ಜಾಸ್ತಿ ಅನ್ಬಹುದು.. ಆದ್ರಲ್ಲೂ ಈ ಹೆಣೈಕ್ಳಿಗೆ ತೀರಾ ಜಾಸ್ತಿ ಆದೇನೋ ಅಂತಾರಲ್ಲಾ ಜಲಸ್ ಹಂಗೆ ನಮ್ಮ ಹಳ್ಳಿ ಲಾಗ್ವೇಜ್‍ನಲ್ಲಿ ಹೇಳೋದಾದ್ರೆ ಹೊಟ್ಟೆ ಉರಿ ಅಂತಾ ಸಿಂಪಲಾಗ್ ಹೆಳ್ಬಹುದಪ್ಪಾ.. ಹೊಟ್ಟೆ ಉರಿ ಅಂತಾ ಇಲ್ಲಿ ಯಾಕೆ ಹೇಳ್ದೆ ಅಂತಾ ಅನ್ನಿಸ್ತಿರ್ಬೇಕು ಅಲ್ವಾ ವಿಷ್ಯ ಇದೇ ರೀ.. ಇತ್ತೀಚಿಗೆ ಟಾಲಿವುಡ್ ಮಾದಕ ಬೆಡಗಿ ಸಮಂತಾ ಹಾಗೂ ನಾಗಚೈತನ್ಯ ಜೊತೆ ಎಂಗೇಜ್ಮೆಂಟ್ ಆಗಿದ್ದು ಗೊತ್ತೇ ಇದೆ ಅಲ್ವಾ, ಇದರ ಕುರಿತು ಮಾತ್ನಾಡುವಾಗ ನಾನು ಸಮಂತಾ ತರ ಅಲ್ಲಾ ನನಗೆ ಲವ್ ಮ್ಯಾರೇಜ್ ಆಗೋದಿಲ್ಲ ನಾನ್ ಪಕ್ಕಾ ಸಂಪ್ರದಾಯಸ್ಥೆ ಮನೆಯವರು ತೋರಿಸಿದ ಹುಡ್ಗನನ್ನೆ ಮದ್ವೆ ಆಗೊದು ಅಂತಾ ಖಡಕ್ ಆಗಿ ಉತ್ತರಿಸಿದ್ದಾಳೆ.. ಆದೇನೋ ಗಾದೆ ಇದಿಯಲ್ಲಾ ನೂರು ತಲೆ ಒಂದ್ ಮಾಡಿದ್ರೂ ಎರಡು ಜಡೆ ಒಂದ್ ಮಡೋಕೆ ಆಗಲ್ಲಾ ಅಂತಾ..

ಇಷ್ಟಕ್ಕೆ ಸುಮ್ನಾಗಿದ್ರೆ ಸರಿ ಆಗೊದು ಸತ್ರೂ ನಾನು ಲವ್ ಮ್ಯಾರೇಜ್ ಆಗೊಲ್ಲ ಅಂತಾ ಟಾಂಗ್ ಕೊಟ್ಟಿದ್ದಾಳೆ. ಇಬ್ಬರು ಸಹ ಸಿನಿ ಲೋಕದಲ್ಲಿ ಮಿಂಚುತ್ತಿರುವ ನಟಿಯರೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೊದಿಲ್ಲ ಎನ್ನುವ ಸತ್ಯ ಹೊರಬಿದಿದ್ದೆ ನೋಡಿ.. ಇಬ್ಬರ ನಡುವೆ ಕೆಲದಿನಗಳಿಂದ ಕೊಲ್ಡ್ ವಾರ್ ಶುರುವಾಗಿರುವುದು ಪಕ್ಕಾ ಆಯ್ತು.. ಏನೇ ಆಗ್ಲಿ ಪಾಪ ಕಾಜಲ್ ಸಾಯೋದ್ ಬೇಡ ಮನೆಯವರು ತೋರ್ಸಿದ್ ಹುಡ್ಗನ್ನೆ ಮದ್ವೆ ಮಡ್ಕೊಂಡ್ ಚನ್ನಾಗಿರ್ಲಿ ಅಲ್ವೇ? ಯಾಕಂದ್ರೆ ಬಣ್ಣದ ಲೋಕದಲ್ಲಿ ಕಾಜಲ್ ಸಾಧಿಸಿಬೇಕಿರೋದು ಸಾಕಷ್ಟಿದೆ..

  • ಹಾಲೆಶ್ ಎಂ.ಎಸ್ ಹುಣಸನಹಳ್ಳಿ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...