No menu items!
19.6 C
Munich
Tuesday, April 28, 2026

ಉತ್ತರ ಕೋರಿಯಾದಿಂದ ಮತ್ತೊಂದು `ಬಾಂಬ್'.! ಹೈಡ್ರೋಜನ್ ಬಾಂಬ್ ಪರೀಕ್ಷೆ ಉ.ಕೋರಿಯಾದ ಈ ನಡೆ ಆತಂಕವನ್ನು ನಿರ್ಮಿಸಿದೆ..!

Must read

ಇಡೀ ಜಗತ್ತಿನಾದ್ಯಂತ ಅಣ್ವಸ್ತ್ರವನ್ನು ನಿಷೇಧಿಸಬೇಕೆಂಬ ಕೂಗು ಗಟ್ಟಿಯಾಗಿರುವ ಬೆನ್ನಲ್ಲೇ ಉತ್ತರ ಕೋರಿಯಾ ಅಣ್ವಸ್ತ್ರ ಯೋಜನೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ…! ಉ. ಕೋರಿಯಾ ಇವತ್ತಷ್ಟೇ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ..! ಇಡೀ ವಿಶ್ವವೇ ಅಣ್ವಸ್ತ್ರ ನಿಷೇಧವನ್ನು ಮಾಡಬೇಕೆಂದು ಹೇಳುತ್ತಿರುವ ಈ ಸಂದರ್ಭದಲ್ಲಿ ಉತ್ತರ ಕೋರಿಯಾದ ಈ ನಡೆ ಆತಂಕವನ್ನು ನಿರ್ಮಿಸಿದೆ..!
ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಉತ್ತರ ಕೋರಿಯಾದ ಪುಂಗ್ಯೇರಿಯಲ್ಲಿ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಮಾಡಲಾಗಿರುವುದು ತಿಳಿದು ಬಂದಿದೆ..! ಅಲ್ಲಿನ ನಾಯಕ ಕಿಮ್ ಜಾಂಗ್ ಯುನ್ ಆದೇಶದ ಮೇರೆಗೇ ಬಾಂಬ್ ಪರೀಕ್ಷೆ ನಡೆದಿರುವುದಾಗಿ ವರದಿಯಾಗಿದೆ.
ಉತ್ತರ ಕೋರಿಯಾ ತಾನು ಹೈಡ್ರೋಜನ್ ಬಾಂಬ್ ಪರೀಕ್ಷಿಸಿರುವುದರ ಬಗ್ಗ ಸ್ಪಷ್ಟನೆ ನೀಡುವುದಕ್ಕೂ ಮೊದಲು ಭೂಕಂಪ ಸಂಭವಿಸಿದೆ ಎಂದೇ ಭಾವಿಸಲಾಗಿತ್ತು..! ಹೈಡ್ರೋಜನ್ ಬಾಂಬ್ ಸಿಡಿಸಿದ್ದೇವೆಂದು ಹೇಳೋ ಮೂಲಕ ಉ. ಕೋರಿಯಾ ಇಡೀ ವಿಶ್ವದ ಕಂಗೆಣ್ಣಿಗೂ ಗುರಿಯಾಗಿದೆ..! ಪರಿಕ್ಷಾರ್ಥ ಸಿಡಿಸಿದ ಬಾಂಬ್ನಿಂದ 5.1ರಷ್ಟು ತೀವ್ರತೆಯ ಕಂಪನವಾಗಿರೋದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ..! ದ. ಕೋರಿಯಾ, ಚೀನಾ, ಅಮೇರಿಕಾ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ರಾಷ್ಟ್ರಗಳು ಉತ್ತರ ಕೋರಿಯಾದ ಈ ನಡೆಗೆ ವಿರೋಧ ವ್ಯಕ್ತಪಡಿಸಿವೆ..! ಅಮೇರಿಕಾಕ್ಕಂತೂ ಇದು ನುಂಗಲಾರದ ತುತ್ತೇ ಸರಿ..! ಉತ್ತರ ಕೋರಿಯಾಕ್ಕೆ ವಿರುದ್ಧವಾಗಿ ದಕ್ಷಿಣ ಕೋರಿಯಾಕ್ಕೆ ತನ್ನ ಬೆಂಬಲ, ಸಹಾಯವನ್ನು ನೀಡುತ್ತಿರುವ ಅಮೇರಿಕಾ ಉತ್ತರ ಕೋರಿಯಾದ ಶತ್ರುವೂ ಹೌದು..! ಈಗ ಅಣ್ವಸ್ತ್ರ ವಿಚಾರವಾಗಿ ಉ. ಕೋರಿಯಾ ವಿಶ್ವವನ್ನೇ ಬೆಚ್ಚಿ ಬೀಳಿಸೋ ಹೆಜ್ಜೆಯನ್ನಿಟ್ಟಿರುವುದು ಅಮೇರಿಕಾದ ನಿದ್ದೆಗೆಡಿಸಿರುವುದರಲ್ಲಿ ಅನುಮಾನವೇ ಇಲ್ಲ..! 2006, 2009, 2013ರಲ್ಲೂ ಉತ್ತರ ಕೋರಿಯಾ ಪುಂಗ್ಯೇರಿಯಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು ಅನ್ನೋದನ್ನು ಕೂಡ ಇಲ್ಲಿ ಸ್ಮರಿಸಬಹುದಾಗಿದೆ..!

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!

ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್..!

ಹೆಂಡತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಪತಿದೇವ..! ಇವರು ಕಳೆದ 59 ವರ್ಷದಿಂದಲೂ ಹೆಂಡತಿಯ ಸೇವೆ ಮಾಡ್ತಿದ್ದಾರೆ..!

ಕಿಲ್ಲಿಂಗ್ ವೀರಪ್ಪನ್ ಸಿನಿಮಾ ನೀವಿನ್ನೂ ನೋಡಿಲ್ವಾ..?

800 ವರ್ಷ ಇತಿಹಾಸ ಇರೋ ಮೊಬೈಲ್..! ನೀವಿನ್ನೂ 800 ವರ್ಷ ಇತಿಹಾಸದ ಮೊಬೈಲ್ ನೋಡಿಲ್ವಾ..?!

ರತನ್ ಟಾಟಾ ಹೇಳಿದರು ಅನ್ನದ ಪಾಠ ಜರ್ಮನಿಯಲ್ಲಿ ಪಾಠ ಕಲಿಸಿದ್ದಳಂತೆ ಓರ್ವ ಅಜ್ಜಿ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article