No menu items!
6.3 C
Munich
Friday, May 1, 2026

ನೋಟ್ ಬ್ಯಾನ್ ಎಫೆಕ್ಟ್: ದಂಡದ ಬದಲಿಗೆ ರೀಚಾರ್ಜ್ ಮಾಡಿಸಿಕೊಂಡ ಪೊಲೀಸ್..!

Must read

ನೋಟ್ ಬ್ಯಾನ್‍ನಿಂದ ಜನ ಸಾಮಾನ್ಯರು ಸ್ವಲ್ಪ ಮಟ್ಟಿಗೆ ಕಂಗಾಲಾಗಿರೋದು ಸಹಜ. ಆದ್ರೆ ಇಲ್ಲೋರ್ವ ಸಂಚಾರಿ ಪೊಲೀಸ್ ದಂಡ ಪಡೆಯೋ ಬದ್ಲಿಗೆ 250ರೂ. ರಿಚಾರ್ಜ್ ಮಾಡಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ..!
ಈ ಬಗ್ಗೆ ಕೃಷ್ಣ ಎಂಬ ಯುವಕ ತನ್ನ ಫೇಸ್ ಬುಕ್ ಮುಖಾಂತರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾನೆ. ಈ ಘಟನೆಯು ಇದೇ ತಿಂಗಳ 18ರಂದು ಮಾರತ್ ಹಳ್ಳಿಯ ರಿಂಗ್‍ರೋಡ್ ಬಳಿ ನಡೆದಿದ್ದು ಬೈಕ್‍ನಲ್ಲಿ ಬಂದಿದ್ದ ಕೃಷ್ಣ ಎಂಬಾತನಿಗೆ ಹೆಚ್‍ಎಎಲ್ ಸಂಚಾರಿ ಹೆಡ್ ಕಾನ್ಸ್ಟೆಬಲ್ ಶಿವಮೂರ್ತಿ ತೆಡೆದು ನಿಲ್ಲಿಸಿದ್ದಾರೆ. ಬೈಕ್ ಮೇಲೆ ಎರಡು ಕೇಸ್ ಇರೋದ್ರಿಂದ 400ರೂ. ಕಟ್ಟುವಂತೆ ತಿಳಿಸಿದ್ದ ಶಿವಮೂರ್ತಿ ಬೈಕ್ ಜಪ್ತಿ ಮಾಡುವುದಾಗಿ ತಿಳಿಸಿದ್ದಾರೆ. ದಂಡ ಕಟ್ಟಲು ಹಣವಿಲ್ಲ ಎಂದು ಹೇಳಿದ್ದನ್ನು ಕೇಳದ ಹೆಡ್ ಕಾನ್ಸ್ಟಬಲ್ ತನ್ನ ಮೊಬೈಲ್‍ಗೆ ರೀಚಾರ್ಜ್ ಮಾಡಿಸಿಕೊಂಡಿದ್ದಾರೆ. ಇದರಿಂದ ಬೇಸರಗೊಂಡ ಯುವಕ ಫೇಸ್‍ಬುಕ್ ಮೂಲಕ ದೂರು ನೀಡಿದ್ದಾನೆ.

Like us on Facebook  The New India Times

POPULAR  STORIES :

ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!

ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!

50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ

ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!

ಕ್ಯೂನಲ್ಲಿ ನಿಂತಿದ್ದ ಜನರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸ್..!

ವಾಟ್ಸಾಪ್‍ನಿಂದ 10 ವರ್ಷದ ಲವ್ ಬ್ರೇಕಪ್..!

ಬಿಗ್‍ಬಾಸ್ ಸದಸ್ಯರ ಬಗ್ಗೆ ಜನ ಏನ್ ಹೇಳ್ತಾರೆ…?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article