ನಿಮಗೂ ಕೋಟಿ ಕೋಟಿ ದುಡ್ಡು ಬೇಕಾ..?

0
87
ಈ ದುಡ್ಡು, ಹಣ, ಮನಿ, ಕಾಸು ಅನ್ನೋದು ಈ ಪ್ರಪಂಚಕ್ಕೆ ಯಾಕೆ ಬಂತೋ ಗೊತ್ತಿಲ್ಲ, ಆದ್ರೆ ಅದರಷ್ಟು ಇಂಪಾರ್ಟೆಂಟ್ ಇವತ್ತು ಬೇರ್ಯಾವುದೂ ಇಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿದೆ… ಎಂಟಾಣೆ ಚಾಕಲೇಟಿಂದ ಹಿಡಿದು ಕೋಟಿ ರೂಪಾಯಿ ಬಂಗಲೆ ತಗೊಳೋ ತನಕ ಮಾತಾಡೋದು ಓನ್ಲಿ ಮನಿ ಮನಿ ಮನಿ..! ಹೌದಪ್ಪಾ, ದುಡ್ಡಿಲ್ಲ ಅಂದ್ರೆ ಹೆಂಗೆ..? ಅದಕ್ಕೇ ಅಲ್ವಾ ಮನುಷ್ಯ ಕಷ್ಟ ಪಡೋದು ಅಂತ ಕೆಲವರು ಕೇಳ್ತಾರೆ..! ನಿಜಾ ಸ್ವಾಮಿ, ಅದು ಬೆಕೇಬೇಕು..! ಆದ್ರೆ ಅದರಿಂದಾಗಿ ಬದುಕೇ ಕಳ್ಕೊಂಡುಬಿಟ್ರೆ ಹೇಗೆ..? ಅದರ ಬೆನ್ನಹಿಂದೆ ಬಿದ್ದು ಜೀವನ ಸಂತೋಷವೇ ನಾಶವಾಗಿಬಿಟ್ರೆ ಹೇಗೆ..? ದುಡ್ಡಿನ ಹಿಂದೆ ಬಿದ್ದು ದಡ್ ಅಂತ ಬಿದ್ದು ಸತ್ತರೆ ಅಷ್ಟು ಮಾಡಿಟ್ಟು ಏನು ಲಾಭ..? ಕೋಟಿಕೋಟಿ ದುಡಿದು ಅನುಭವಿಸಲೇ ಇಲ್ಲ ಅಂದ್ರೆ ನಿಮಗೂ ಒಂದು ಮೆಷಿನ್ ಗೂ ಏನು ವ್ಯತ್ಯಾಸ..! ಅದಕ್ಕೆ ಗ್ರೀಸ್, ಆಯಿಲ್ ಹಾಕ್ಬೇಕು. ನೀವು ಅನ್ನ ನೀರು ಅಂತ ಸೇವಿಸ್ತೀರಿ ಅನ್ನೋದು ಬಿಟ್ರೆ ಬೇರೆ ಯಾವ ವ್ಯತ್ಯಾಸವೂ ಕಾಣಲ್ಲ..! ದುಡ್ಡೇ ದೊಡ್ಡಪ್ಪ ನಿಜ, ಆದ್ರೆ ಸಂತೋಷ, ಸಂಸಾರ, ಖುಷಿ ಇವೆಲ್ಲ ಅದರಪ್ಪ ಅನ್ನೋದು ನಮ್ಮ ಜನಕ್ಕೆ ಯಾಕೆ ಅರ್ಥ ಆಗ್ತಿಲ್ಲ..? ಜೀವನ ನಡೆಸೋಕೆ ದುಡ್ಡಿನ ಹಿಂದೆ ಬಿದ್ದೋರ ಬಗ್ಗೆ ನಾನು ಮಾತಾಡ್ತಿಲ್ಲ, ದುಡ್ಡು ಮಾಡೋಕೆ ದುಡ್ಡಿನ ಹಿಂದೆ ಬಿದ್ದವರ ಬಗ್ಗೆ ಮಾತಾಡ್ತಿದೀನಿ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಇವತ್ತು ಮದುವೆ ವಿಚಾರಕ್ಕೆ ಬಂದ್ರೆ ಹುಡುಗನ ಸಂಬಳ ಫಸ್ಟ್ ಮೋಸ್ಟ್ ಇಂಪಾರ್ಟೆಂಟ್..! ಅವನ ಜೀವನ ನಡೆಯೋಕೆ ಹೆಚ್ಚಂದ್ರೆ 40 ಸಾವಿರ ಸಾಕಾಗಬಹುದು. ಮನೆ ಬಡಿಗೆ, ರೇಶನ್, ಪೆಟ್ರೋಲ್, ಅದೂ ಇದೂ ಖರ್ಚು, ಎಲ್ಲಾ ಸೇರಿ…! ಆದ್ರೆ ಹುಡುಗಿ ಮನೆಯವರಿಗೆ ಮಿನಿಮಂ ಒಂದು ಲಕ್ಷ ಸಂಬಳ ಬರಬೇಕು..! ತಪ್ಪೇನಿಲ್ಲ ಬಿಡಿ, ಮಗಳು ಚೆನ್ನಾಗಿರನೇಕು, ಅಳಿಯ ಮುಂದೆ ಮನೆ ಕಟ್ಟಬೇಕು, ದೊಡ್ಡ ಕಾರ್ ತಗೋಬೇಕು..! ಆಸೆ ಇರೋದ್ರಲ್ಲಿ ತಪ್ಪಿಲ್ಲ.. ಹಂಗಂತ ಮದುವೆ ಅನ್ನೋದು ಬಿಸಿನೆಸ್ ಆಗೋಗ್ಬಿಟ್ರೆ ಹೆಂಗೆ..! ನಿಮಗೆ ಒಂದು ಲಕ್ಷ ಸಂಬಳ ಬರ್ತಿದ್ರೆ ನಮ್ಮ ಕಡೆಯಿಂದ 50 ಲಕ್ಷ ವರದಕ್ಷಿಣೆ…! 50 ಬರ್ತಿದ್ರೆ 25ಲಕ್ಷ ತಗೊಳಿ..! 10 ಸಾವಿರಕ್ಕೆ ಐದರಿಂದ ಹತ್ತು ಲಕ್ಷ ಮ್ಯಾಕ್ಸಿಮಂ..! ನೀವು ಹತ್ತಿರೋದು ಮಗಳನ್ನಾ? ಅಥವಾ ಬಿಸಿನೆಸ್ ಪ್ರಾಡಕ್ಟಾ..? ಹೀಗೆಲ್ಲಾ ಡಿಮ್ಯಾಂ ಕ್ರಿಯೇಟ್ ಮಾಡ್ಕೊಳೋ ಸಲುವಾಗಿ ಹುಡುಗರು ಕೆಲಸ ಪಡೆಯೋಕೆ ಮುಂಚೆ ನೆಟ್ ಸ್ಯಾಲರಿ ಬಗ್ಗೆ ಮೊದಲು ಕೇಳ್ತಾರೆ..! ಆ ಪ್ಯಾಕೇಜ್ ಅಮೌಂಟ್ ಗೊತ್ತಾದ ಕೂಡ್ಲೆ ಕಣ್ಣಮುಂದೆ ಕಾರು, ಮನೆ, ಮದುವೆ ಎಲ್ಲ ರಪ್ ಅಂತ ಪಾಸಾಗುತ್ತೆ..! ಆಲ್ ಬಿಕಾಸ್ ಆಫ್ ಮನಿ ಮ್ಯಾನ್ ಮನಿ…!
ಇವತ್ತು ದುಡ್ಡಿಲ್ಲದಿದ್ರೆ ಏನೂ ಇಲ್ಲ ಬಿಡಿ..! ನಿಮ್ಮ ಹತ್ತಿರ ಎಷ್ಟು ಅನ್ನೋದರ ಮೇಲೇನೇ ನಿಮ್ಮ ಫ್ರೆಂಡ್ಸ್, ನಿಮ್ಮ ಫ್ಯಾಮಿಲಿ ಎಲ್ಲ ನಿಧರ್ಾರ ಆಗೋದು..! ಇದ್ದಾಗ ಎಲ್ಲ ನೆಂಟರು ಅನ್ನೋ ಮಾತು ಸುಮ್ಮನೆ ರೂಢಿಗೆ ಬಂದಿಲ್ಲ..! ಹಾಗಂತ ದುಡ್ಡಿದ್ದವರೆಲ್ಲಾ ಸಖತ್ ನೆಮ್ಮದಿಯಾಗಿರ್ತಾರೆ ಅಂತಲ್ಲ, ದುಡ್ಡಿಲ್ಲದವರೆಲ್ಲಾ ಬದುಕ್ತಾನೆ ಇಲ್ಲ ಅಂತಲ್ಲ..! ಎರಡೂ ತರದ ಜನ ಬದುಕ್ತಾರೆ. ಆದ್ರೆ ಹೇಗೆ ಬದುಕ್ತಾರೆ ಅನ್ನೋದೇ ಮ್ಯಾಟರ್,..! ಒಂದಷ್ಟು ಉದಾಹರಣೆ ಕೊಡ್ತೀನಿ..!
ಆನಂದ್ ಮತ್ತು ವರುಣ್ ಒಂದೇ ಸ್ಕೂಲಲ್ಲಿ ಐದನೇ ಕ್ಲಾಸಲ್ಲಿ ಓದ್ತಾ ಇದಾರೆ..! ಆನಂದ್ ಅಪ್ಪನದೊಂದು ಪುಟ್ಟ ಹೋಟೆಲ್ ಇದೆ. ವರುಣ್ ಅವರಪ್ಪ ದೊಡ್ಡ ಬಿಸ್ನೆಸ್ ಮ್ಯಾನ್..! ವರುಣ್ ಪ್ರತೀ ದಿನ ಅವರಪ್ಪನ ಲಕ್ಷುರಿ ಕಾರಲ್ಲಿ ಸ್ಕೂಲಿಗೆ ಬರ್ತಾನೆ.. ಆದ್ರೆ ಕರ್ಕೊಂಡ್ ಬರೋದು ಅವರಪ್ಪನ ಡ್ರೈವರ್..! ಆನಂದ್ ಡೈಲಿ ಸ್ಕೂಲಿಗೆ ಅವರಪ್ಪನ ಬೈಕಲ್ಲಿ ಅವರಪ್ಪನ ಜೊತೇನೇ ಬರ್ತಾನೆ..! ಅವರಪ್ಪ ಬೈಕಿಂದ ಇಳಿಸಿ, ಅವನ ಕೈಗೆ ಚಾಕಲೇಟ್ ಕೊಟ್ಟು, ಕೆನ್ನೆಗೆ ಮುತ್ತು ಕೊಟ್ಟು ಬಿಟ್ಟು ಹೋಗ್ತಾರೆ.. ಈ ಸಂತೋಷ ವರುಣ್ ಪಾಲಿಗೆ ಯಾವತ್ತೂ ಸಿಕ್ಕಲ್ಲ..! ಅವನಪ್ಪ ಎಷ್ಟು ದೊಡ್ಡ ಬಿಸ್ನೆಸ್ ಮ್ಯಾನ್ ಆದ್ರೆ ಏನು ಲಾಭ..? ಮಗುವಿಗೆ ಬೇಕಾದ ಸಂತೋಷ ಕೊಡೋಕೆ ಯಾವತ್ತೂ ಸಾಧ್ಯವಾಗದಿದ್ರೆ ಏನಿದ್ರೂ ವೇಸ್ಟ್..! ವರುಣ್ ಪಾಲಿಗೆ ಆನಂದ್ ಯಾವಾಗ್ಲೂ ಲಕ್ಕಿ ಬಾಯ್ ತರ ಕಾಣ್ತಾನೆ..! ಬೆಳಗ್ಗೆ ವರುಣ್ ಏಳೋಕೆ ಮುಂಚೆ ಅವರಪ್ಪ ಅಮ್ಮ ಬಿಸ್ನೆಸ್ ಹೆಸರಲ್ಲಿ ಹೊರಗೆ ಹೋಗ್ತಾರೆ..! ರಾತ್ರಿ ಅವರು ವಾಪಸ್ ಬರೋದ್ರೊಳಗೆ ವರುಣ್ ಮಲಗಿರ್ತಾನೆ..! ಈ ಕಡೆ ಆನಂದ್ ಅವರಪ್ಪ ಅಮ್ಮನ ಜೊತೇಲೇ ಮಲಗಿ, ಅವರೇ ಬೆಳಗ್ಗೆ ಎಬ್ಬಿಸಿ, ಹಾಲು ಕುಡಿಸಿ, ತಿಂಡಿ ತಿನ್ನಿಸಿ, ಯೂನಿಫಾಮರ್್ ಹಾಕಿಸಿ, ಸ್ಕೂಲಿಗೆ ಬಿಟ್ಟು ಬರ್ತಾರೆ..! ಯಾವುದು ಇಂಪಾರ್ಟೆಂಟ್..? ದುಡ್ಡಾ..? ಪ್ರೀತೀನ..? ಮಿಡ್ಲ್ ಕ್ಲಾಸ್ ಫ್ಯಾಮಿಲಿಯ ಆನಂದ್ ಯಾವತ್ತೂ ಉಪವಾಸ ಮಲಗಲ್ಲ, ಅವನ ಭವಿಷ್ಯವೇನು ಬೀದಿಗೆ ಬರಲ್ಲ..! ಆದ್ರೆ ವರುಣ್ ಲೈಫಗ್ ಬಗ್ಗೆ ನೋ ಗ್ಯಾರಂಟಿ..! ಕಾರಣ ಅವರಪ್ಪ ಅಮ್ಮನಿಗೆ ಅವನ ಭವಿಷ್ಯದ ಬಗ್ಗೆ ಕಾಳಜಿ ವಹಿಸೋ ಭರದಲ್ಲಿ ಇವತ್ತಿನ ಸಂತೋಷದ ಬಗ್ಗೆ ಕೇರ್ ಮಾಡೋ ಅಷ್ಟು ಟೈಮ್ ಇಲ್ಲ..! `ಮನಿ ಈಸ್ ನಾಟ್ ಎವ್ರಿತಿಂಗ್’..!
ದುಡ್ಡು ಮಾಡೋದು ಹೇಗೆ ಅನ್ನೋ ಸೆಮಿನಾರಿಗೆ ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಹೋಗೋ ಜನ ಅದೇ ಸಾವಿರಾರು ರೂಪಾಯಿ ಇಟ್ಕೊಂಡು ಏನಾದ್ರೂ ಮಾಡ್ಬೇಕು ಅಂತ ಯೋಚನೆ ಮಾಡಲ್ಲ..! ದುಡ್ಡು ಜೀವನ ನಡೆಸೋಕೆ ದುಡೀಬೇಕೇ ಹೊರತು ಪ್ರತಿಷ್ಟೆಗಲ್ಲ..! ಅವಶ್ಯಕತೆಗೆ ಮೀರಿ ದುಡಿದ ದುಡ್ಡನ್ನು ಅವರೇ ಅನುಭವಿಸಿದ ಉದಾಹರಣೆ ತುಂಬಾ ಕಮ್ಮಿ..! ಸಾಯೋ ತನಕ ದುಡಿಯೋದ್ರಲ್ಲೇ ಕಳೆದ್ರೆ ಸತ್ತಾಗ ತಗೊಂಡೋಗೋದು ಏನು ಸ್ವಾಮಿ..? ಮಕ್ಕಳ ಜೊತೆ ಕಾಲ ಕಳೀಲಿಲ್ಲ, ಫ್ಯಾಮಿಲಿ ಪ್ರೋಗ್ರಾಂ ಅಟೆಂಡ್ ಮಾಡ್ಲಿಲ್ಲ, ನೀವೇ ತಗೊಂಡ ಐದು, ಆರನೇ ಮನೇಲಿ ನೀವೇ ವಾಸವಿರಲಿಲ್ಲ, ನಿಮ್ಮ ಆಸ್ತಿ ಎಷ್ಟಿದೆ ಅಂತ ನಿಮಗೇ ಗೊತ್ತಿಲ್ಲ..! ಹೆಲೋ…! ಮತ್ಯಾವ ಕಾರಣಕ್ಕೆ ಸ್ವಾಮಿ ಈ ದುಡ್ಡು..? ನಮ್ಮ ಹತ್ತಿರ ಅಷ್ಟು ಕಾರಿದೆ, ಇಷ್ಟು ಮನೆ ಇದೆ, ಅಲಲಿ ಸೈಟಿದೆ, ಇಷ್ಟು ಗೋಲ್ಡ್ ಇದೆ, ಮತ್ತೊಂದಿಷ್ಟು ಸಿಲ್ವರ್ ಇದೆ ಅಂತ ಹೇಳಿಕೊಳ್ಳೋಕಾ..? ಪ್ರತಿಷ್ಟೆ ತೋರಿಸಿಕೊಳ್ಳೋಕಾ..? ಫಾರ್ ವಟ್ ರೀಸನ್…?
ಇವತ್ತಿನ ತನಕ ದುಡ್ಡಿನ ಹಿಂದೆ ಹೋದವರ್ಯಾರೂ ಏನೂ ಆಗಿಲ್ಲ..! ಸಾಧನೆಯ ಹಿಂದೆ ಬಿದ್ದವರಿಗೆ ದುಡ್ಡು ಒಲಿದಿದೆ ಅಷ್ಟೆ, ಶ್ರಮ ಪಟ್ಟವರ ಜೇಬಲ್ಲಿ ನೋಟಿನ ಕಂತೆಗಳಿಎತಾವೆ ಅಷ್ಟೆ, ತುಂಬಾ ಪ್ಲ್ಯಾನ್ಡ್ ಲೈಫ್ ಲೀಡ್ ಮಾಡೋರ ಬ್ಯಾಂಕ್ ಅಕೌಂಟಲ್ಲಿ ಮಾತ್ರ ದೊಡ್ಡ ಮೊತ್ತ ಇರುತ್ತೆ..! ಅದು ಬಿಟ್ಟು ಇವತ್ತು ಸಾವಿರ ಇಟ್ಕೊಂಡು ನಾಳೆ ಲಕ್ಷ, ನಾಡಿದ್ದು ಕೊಟಿ ಅಂತ ಯೋಚನೆ ಮಾಡೋರು, ಇರೋ ಸಾವಿರಾನೂ ಕಳ್ಕೊಂಡು ಬೀದಿಗೆ ಬರ್ತಾರೆ ಅಷ್ಟೆ..! ದುಡ್ಡು ದುಡ್ಡು ಅಂತ ದುಡ್ಡಿನ ಹಿಂದೆ ಹೋಗೋ ಬದಲು ಅದನ್ನು ಹೇಗೆಲ್ಲ ಇನ್ವೆಸ್ಟ್ ಮಾಡಿದ್ರೆ ಒಂದಷ್ಟು ಲಾಭ ತಗೋಬೋದು ಲಾಂಗ್ ಟರ್ಮಲ್ಲಿ ಒಂದಷ್ಟು ಉಳಿಸಬಹುದು ಅಂತ ಯೋಚನೆ ಮಾಡಿ..! ದುಡ್ಡು ಖಂಡಿತ ಬರುತ್ತೆ.
ಹೌದು, ನಿಮ್ಮ ಹತ್ತಿರ ದುಡ್ಡಿಲ್ಲ ಅಂದ್ರೆ ಸಮಾಜ ನಿಮ್ಮನ್ನು ನೋಡೋ ದೃಷ್ಟೀನೇ ಬೆರೆ ಆಗುತ್ತೆ.! ನಿಮ್ಮನ್ನು ಹತ್ತೊರ ಸೇರಿಸಲ್ಲ, ಅವಮಾನಗಳನ್ನು ಎದುರಿಸಬೇಕಾಗುತ್ತೆ, ತುಂಬಾ ಹತ್ತಿರದವರು ದೂರಾಗಿ ಬಿಡ್ತಾರೆ, ಮನೆಯಲ್ಲೇ ಗೌರವ ಕಮ್ಮಿ ಆಗುತ್ತೆ..! ಇವೆಲ್ಲಾ ನಿಜ, ಆದ್ರೆ ಅದಕ್ಕೆ ಉತ್ತರ ಕೊಡೋ ಭರದಲ್ಲಿ ಬದುಕು ಬರ್ಬರ ಆಗಬಾರದು..! ನೀವು ಉತ್ತರ ಕೊಡಬೇಕು ಅಂತ ಡಿಸೈಡ್ ಮಾಡ್ಕೊಳಿ, ಅವಮಾನ ಮಡಿದವರು ನಿಮ್ಮ ಮನಸಲ್ಲಿ ಹಾಗೇ ಇರಲಿ, ನೀವೂ ಒಮದು ಹಂತಕ್ಕೆ ಬೆಳೆಯೋ ತನಕ ಅವರ ಸಹವಾಸವೇ ಬೆಡ ಅನ್ನೋ ತರ ಇದ್ದುಬಿಡಿ… ನೀವು ನಿಮ್ಮ ಕೆಲಸ, ಅಷ್ಟಕ್ಕೆ ಮಾತ್ರ ಗಮನ ಕೊಡಿ..! ಎಲ್ಲರನ್ನು ಮೀರಿ ಬೆಳದಾಗ, ಅವಮಾನ ಮಾಡಿದ ಸಮಾಜವೇ ನಿಮ್ಮ ಬಳಿ ವಾಪಸ್ ಬರುತ್ತೆ…! ನೀವು ಮೆಲೆರಿದಂತೆ `ನಮ್ಮ ಪರಿಚಯದವನು, ನನ್ನ ಫ್ರೆಂಡು, ನನ್ನ ಹತ್ತಿರದ ರಿಲೇಟಿವ್’ ಅವರ ಬಾಯಲ್ಲೇ ಹೇಳಿಸುತ್ತೆ..! ಆದ್ರೆ ಆ ಟೈಮ್ ಬಂದ ಮೇಲೆ ಅತಿಯಾಸೆಗೆ ಬಿದ್ದು ಇರೋ ಸಂತೋಷವನ್ನೂ ಕಳ್ಕೋಬೇಡಿ..! ಗೋ ವಿತ್ ಲೈಫ್, ಡೋಂಟ್ ಗೋ ಬಿಯಾಂಡ್ ದ ಲೈಫ್..!
ಡಿಯರ್ ಫ್ರೆಂಡ್ಸ್, ದುಡ್ಡಿಗೋಸ್ಕರ ಅಣ್ಣತಮ್ಮ ದೂರ ಆಗ್ತಾರೆ, ದರೋಡೆ ಕೊಲೆ ಆಗುತ್ತೆ, ಸ್ನೇಹಿತರು ಬಿಟ್ಟು ಹೋಗ್ತಾರೆ, ಫ್ಯಾಮಿಲಿಗಳು ಕಿತ್ತಾಡ್ತವೆ..! ಹೀಗೆ ಒಂದಾ ಎರಡಾ..? ಈ ದುಡ್ಡಿಂದ ಇಷ್ಟೆಲ್ಲಾ ಆಗುತ್ತೆ ಅಂದಿದ್ರೆ ತಮ್ಮ ಫೋಟೋ ನೋಟಿನ ಮೆಲೆ ಹಾಕೋಕೆ ಗಾಂಧೀಜಿ ಒಪ್ಪುತಾನೆ ಇರ್ಲಿಲ್ಲ ಅನ್ಸುತ್ತೆ..! ದುಡ್ಡು ಜೀವನಕ್ಕೆ ಬೇಕು ನಿಜ, ಆದ್ರೆ ದುಡ್ಡೇ ಜೀವನ ಅಲ್ಲ..! ದುಡ್ಡಿದ್ರೆ ಮಾತ್ರ ಮರ್ಯಾದೆ ಕೊಡೋರನ್ನ ಆದಷ್ಟು ದೂರವಿಡಿ. ಅವರು ಯಾವತ್ತಿದ್ರೂ ಹಿತಶತ್ರುಗಳೇ..! ಸುಖದುಃಖ, ಕಷ್ಟ ಸುಖ, ಎಲ್ಲಾ ಟೈಮಲ್ಲೂ ಜೊತೆಗಿರೊನೇ ನಿಜವಾದ ಫ್ರೆಂಡ್..! ದುಡ್ಡಿರ್ಲಿ, ಇಲ್ಲದಿರಲಿ ನಿಮ್ಮನ್ನು ಗೌರವಿಸೋನೇ ನಿಜವಾದ ಬಂಧು..! ದುಡೀರಿ, ದುಡ್ಡು ಮಾಡಿ, ಆದ್ರೆ ಅದರ ಬೆನ್ನ ಹಿಂದೆ ಬಿದ್ದು ಜೀವನದ ಎಲ್ಲ ಸಂತೋಷಗಳನ್ನೂ ಹಾಳು ಮಾಡ್ಕೋಬೇಡಿ..! ಅದು ಬರೋ ಟೈಮಲ್ಲಿ, ನಿಮ್ಮ ಶ್ರಮಕ್ಕೆ ತಕ್ಕಷ್ಟು ಖಂಡಿತ ಬರುತ್ತೆ..!

-ಕೀರ್ತಿ ಶಂಕರಘಟ್ಟ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here