No menu items!
24.1 C
Munich
Thursday, June 4, 2026

ಸಾಮಾನ್ಯ ಜನರಿಗೆ ಮತ್ತೆ ಇಂಧನ ಶಾಕ್; ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ! ತಕ್ಷಣದಿಂದಲೇ ಜಾರಿ

Must read

ಸಾಮಾನ್ಯ ಜನರಿಗೆ ಮತ್ತೆ ಇಂಧನ ಶಾಕ್; ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ! ತಕ್ಷಣದಿಂದಲೇ ಜಾರಿ

ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ತೈಲ ಕಂಪನಿಗಳು ಹೆಚ್ಚಳ ಮಾಡಿದ್ದು, ಹೊಸ ದರಗಳು ಶುಕ್ರವಾರ ಬೆಳಗ್ಗಿನಿಂದಲೇ ಜಾರಿಗೆ ಬಂದಿವೆ. ಪ್ರತಿ ಲೀಟರ್ಗೆ ಸುಮಾರು ₹3ರಷ್ಟು ಏರಿಕೆಯಾಗಿರುವುದು ವಾಹನ ಸವಾರರಿಗೆ ಮತ್ತೊಂದು ಹೊರೆ ತಂದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ ₹94.77ರಿಂದ ₹97.77ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಡೀಸೆಲ್ ಬೆಲೆ ₹87.67ರಿಂದ ₹90.67ಕ್ಕೆ ಹೆಚ್ಚಳವಾಗಿದೆ.
ಬೆಂಗಳೂರುದಲ್ಲೂ ಇಂಧನ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಪೆಟ್ರೋಲ್ ದರ ಲೀಟರ್ಗೆ ₹3.27ರಷ್ಟು ಹೆಚ್ಚಳವಾಗಿ ₹102.90ರಿಂದ ₹106.17ಕ್ಕೆ ತಲುಪಿದೆ. ಡೀಸೆಲ್ ದರ ಕೂಡ ₹3.12ರಷ್ಟು ಏರಿಕೆಯಾಗಿ ₹90.98ರಿಂದ ₹94.10ಕ್ಕೆ ಹೆಚ್ಚಳವಾಗಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ ₹3.29ರಷ್ಟು ಏರಿಕೆಯಾಗಿ ಲೀಟರ್ಗೆ ₹108.74ಕ್ಕೆ ತಲುಪಿದ್ದು, ಡೀಸೆಲ್ ಬೆಲೆ ₹95.13ಕ್ಕೆ ಏರಿಕೆಯಾಗಿದೆ.
ಮುಂಬೈನಲ್ಲಿ ಪೆಟ್ರೋಲ್ ದರ ₹3.14ರಷ್ಟು ಹೆಚ್ಚಳವಾಗಿ ₹106.68ಕ್ಕೆ ತಲುಪಿದೆ. ಡೀಸೆಲ್ ಬೆಲೆ ಕೂಡ ₹3.11ರಷ್ಟು ಏರಿಕೆಯಾಗಿ ₹93.14ಕ್ಕೆ ಮಾರಾಟವಾಗುತ್ತಿದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ₹2.83ರಷ್ಟು ಏರಿಕೆಯಾಗಿ ₹103.67ಕ್ಕೆ ತಲುಪಿದರೆ, ಡೀಸೆಲ್ ದರ ₹2.86ರಷ್ಟು ಹೆಚ್ಚಳವಾಗಿ ₹95.25ಕ್ಕೆ ತಲುಪಿದೆ.
ಸ್ಥಳೀಯ ತೆರಿಗೆ ಮತ್ತು ವ್ಯಾಟ್ ದರಗಳ ಆಧಾರದ ಮೇಲೆ ರಾಜ್ಯಾವಾರು ಇಂಧನ ದರಗಳಲ್ಲಿ ತುಸು ವ್ಯತ್ಯಾಸ ಕಂಡುಬರುತ್ತಿದೆ. ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಳವಾಗುವ ಸಾಧ್ಯತೆ ಇದ್ದು, ಸಾಮಾನ್ಯ ಜನರ ಮೇಲಿನ ಆರ್ಥಿಕ ಒತ್ತಡ ಮತ್ತಷ್ಟು ಹೆಚ್ಚುವ ಆತಂಕ ವ್ಯಕ್ತವಾಗುತ್ತಿದೆ.

- Advertisement -spot_img

More articles

- Advertisement -spot_img

Latest article