No menu items!
11.1 C
Munich
Wednesday, April 29, 2026

ಕಾಂಡೋಮ್ ಇಲ್ಲದೇ ಗರ್ಭ ತಡೆಯಲು ಸಾಧ್ಯ! ಹೀಗೆ ಮಾಡಿದ್ರೆ ಬೇಡದ ಗರ್ಭ ತಡೆಯಬಹುದು

Must read

ಬೇಡದ ಗರ್ಭ ತಡೆಗೆ ಕಾಂಡೋಮ್ ಬಳಕೆ ಮಾತ್ರವೇ ದಾರಿ ಎಂದು ಕೆಲವರು ಅಂದುಕೊಂಡಿದ್ದಾರೆ. ಕಾಂಡೋಮ್ ಇಲ್ಲದೆಯೂ ಇದು ಸಾಧ್ಯ‌. ನಮ್ಮ ಭಾರತದಲ್ಲಿ ಶೇ. 47.8 ರಷ್ಟು ಮಹಿಳೆಯರು ಮಾತ್ರ ಗರ್ಭ ನಿರೋಧಕ ವಿಧಾನದ ಬಗ್ಗೆ ತಿಳಿದಿದ್ದಾರೆ. ಶೇ‌. 52.2 ಮಂದಿಗೆ ಈ ಬಗ್ಗೆ ಕಿಂಚಿತ್ತೂ ಐಡಿಯಾ ಇಲ್ಲ.‌

ಕಾಂಡೋಮ್ ಬಿಟ್ಟು ಬೇರೆ ದಾರಿಗಳು ಹೀಗಿವೆ.
* ಗರ್ಭ ನಿರೋಧಕ ಮಾತ್ರೆಗಳಿವೆ. ಇವುಗಳು ಬೇಡದ ಗರ್ಭವನ್ನು ತಡೆಯುತ್ತವೆ. ಆದರೆ, ಇವುಗಳಿಂದಾಗುವ ಅಡ್ಡಪರಿಣಾಮಗಳನ್ನು ಎದುರಿಸಲು‌ ಮಹಿಳೆಯರು ಸಿದ್ಧರಿರಬೇಕು.

* ವಂಕಿ ಅನ್ನುವ ರಿಂಗ್ ನಂತಹ ವಸ್ತು ಇದೆ. ಇದನ್ನು ವೈದ್ಯರ ಮೂಲಕ ಮಹಿಳೆಯರ ಯೋನಿಯೊಳಗೆ ಸೇರಿಸಲಾಗುತ್ತೆ‌. ಇದರಿಂದ ಯಾವ್ದೇ ರೀತಿಯ ಅಡ್ಡಪರಿಣಾಮಗಳಿಲ್ಲ.

* ಗರ್ಭತಡೆಗೆ ಇಂಜೆಕ್ಷನ್ ಗಳೂ ಇವೆ. ಗರ್ಭತಡೆಯವಂತಹ ಚುಚ್ಚು ಮದ್ದುಗಳನ್ನು ಮಹಿಳೆಯರು ಪಡೆಯಬಹುದು. ಇದು ಮಾತ್ರೆಗಿಂತ ಒಳ್ಳೆಯದಷ್ಟೇ…ಆದರೆ, ಇದರಿಂದಲೂ ಸೈಡ್ ಎಫೆಕ್ಟ್ ಇದ್ದುದ್ದೇ.

*ಕಾಪರ್ ಟಿ ಎಂಬ ವಸ್ತು ಇದೆ. ಇದು ಇಂಗ್ಲಿಷ್ ನ ಟಿ ಅಕ್ಷರದಂತೆ ಇರುತ್ತದೆ. ಇದನ್ನು ಮಹಿಳೆಯ ಗರ್ಭಕೋಶದ ಬಳಿ ಇನ್ ಸರ್ಟ್ ಮಾಡುತ್ತಾರೆ. ಹೀಗೆ ಮಾಡಿದರೆ 12 ವರ್ಷ ಗರ್ಭ ತಡೆಯಬಹುದು.

ಇಂಥಹ ಅನೇಕ ವಿಧಾನಗಳು ಗರ್ಭತಡೆಗೆ ಇದೆ. ಆದರೂ ಕಾಂಡೋಮ್ ಇವುಗಳೆಲ್ಲವಕ್ಕಿಂತ ಒಳ್ಳೇದು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article