No menu items!
18.2 C
Munich
Sunday, May 10, 2026

ಕನ್ನಡ ಸಿನಿ‌ ದುನಿಯಾದ ಚಾಕ್ಲೇಟ್ ಹೀರೋ ಪ್ರೇಮ್ ಅವರಿಗೆ ಇಂದು ಜನ್ಮದಿನ.

Must read

ಕನ್ನಡ ಸಿನಿ‌ದುನಿಯಾದ ಚಾಕ್ಲೇಟ್ ಹೀರೋ ಪ್ರೇಮ್ ಅವರಿಗೆ ಇಂದು ಜನ್ಮದಿನ. ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ನೆನಪಿರಲಿ ಪ್ರೇಮ್’ ಹಾಗೂ ‘ಲವ್ಲಿ ಸ್ಟಾರ್’ ಎಂದೇ ಪ್ರೀತಿಯಿಂದ ಕರೆಯುತ್ತಾರೆ.

ಇಂದು ಈ ಲವ್ಲಿ ಸ್ಟಾರ್ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. 50ನೇ ವಯಸ್ಸಿಗೆ ಕಾಲಿಟ್ಟಿದ್ದರೂ, ಇನ್ನೂ ಯುವಕರಂತೆ ಕಾಣುವ ಪ್ರೇಮ್ ತಮ್ಮ ಕುಟುಂಬದವರಾದ ಪತ್ನಿ, ಮಕ್ಕಳು ಹಾಗೂ ಸ್ನೇಹಿತರ ಜೊತೆ ಸರಳವಾಗಿ ಜನ್ಮದಿನವನ್ನು ಆಚರಿಸಿದ್ದಾರೆ.

ಈ ಸಂದರ್ಭದಲ್ಲಿ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆ ಹರಿದುಬಂದಿದೆ.ಹುಟ್ಟುಹಬ್ಬದ ವಿಶೇಷವಾಗಿ ಪ್ರೇಮ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಅದರ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅವರು ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

1976ರಲ್ಲಿ ಜನಿಸಿದ ಪ್ರೇಮ್ ಅವರು 2004ರಲ್ಲಿ ತೆರೆಕಂಡ ‘ಪ್ರಾಣ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ‘ನೆನಪಿರಲಿ’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ.

- Advertisement -spot_img

More articles

- Advertisement -spot_img

Latest article