No menu items!
18 C
Munich
Wednesday, August 19, 2026

ಯುವತಿಯರಿದ್ದ ಆಟೋಕ್ಕೆ ಡಿಕ್ಕಿ ಹೊಡೆದು, ಕೆಳಕ್ಕೆ ಬಿದ್ದ ಅವರ ಮೇಲೆ ಅತ್ಯಾಚಾರಕ್ಕೆ ಯತ್ನ…!

Must read

ಯುವತಿಯರು ಚಲಿಸುತ್ತಿದ್ದ ಆಟೋಗೆ ಡಿಕ್ಕಿ ಹೊಡೆದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ಗಂಡಿಬಾಗಿಲು ಆಶ್ರಮದ ಬಳಿ ಅಕ್ಕ-ತಂಗಿಯರಿಬ್ಬರು ಆಟೋದಲ್ಲಿ ಚಲಿಸುತ್ತಿದ್ದರು. ಈ ವೇಳೆ ಬಿ.ಜೆ ಥಾಮಸ್ ಎಂಬಾತ ಕಾರಿನಿಂದ ಆಟೋಗೆ ಡಿಕ್ಕಿ ಹೊಡೆದಿದ್ದು, ಆಟೋ‌ ಪಲ್ಟಿಯಾಗಿದೆ. ಬಳಿಕ ಕೆಳಕ್ಕೆ ಬಿದ್ದ ಅಕ್ಕ-ತಂಗಿಯರಿಬ್ಬರನ್ನೂ ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.


20ವರ್ಷ ಅಕ್ಕ ಮತ್ತು 18ವರ್ಷದ ತಂಗಿ ಇಬ್ಬರಿಗೂ ತುಟಿ ರಕ್ತ ಬರುವಂತೆ ಕಚ್ಚಿ ವಿಕೃತಿ ಮೆರೆದಿದ್ದಾನೆ. ಈತನ ವಿರುದ್ಧ ಸಂತ್ರಸ್ತ ಸಹೋದರಿಯರಿಬ್ಬರೂ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಈ ಹಿಂದೆ ಕೂಡ ಈತನ ಹುಚ್ಚಾಟದ ಬಗ್ಗೆ ಇದೇ ಸಹೋದರಿಯರು‌ ದೂರು ನೀಡಿದ್ದರು. ಇದೇ ಕಾರಣಕ್ಕೆ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article