No menu items!
12 C
Munich
Monday, October 5, 2026

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮಹತ್ವದ ದಿನ; ಪ್ರದೋಷ್ʼನಿಂದ ಇಂದು 4ನೇ ದಿನದ ಮಾಫಿ ಸಾಕ್ಷ್ಯ ಹೇಳಿಕೆ

Must read

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮಹತ್ವದ ದಿನ; ಪ್ರದೋಷ್ʼನಿಂದ ಇಂದು 4ನೇ ದಿನದ ಮಾಫಿ ಸಾಕ್ಷ್ಯ ಹೇಳಿಕೆ

ಬೆಂಗಳೂರು: ರಾಜಧಾನಿಯಲ್ಲಿ ಸಂಚಲನ ಮೂಡಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 4ನೇ ದಿನದ ಪ್ರದೋಷ್ ಮಾಫಿ ಸಾಕ್ಷ್ಯ ಹೇಳಿಕೆ ದಾಖಲಾಗಲಿದ್ದು, ಬಹುತೇಕ ಇಂದು ಹೇಳಿಕೆ ಪ್ರಕ್ರಿಯೆ ಮುಕ್ತಾಯವಾಗುವ ಸಾಧ್ಯತೆಯಿದೆ.
ಇದೇ ವೇಳೆ ಕ್ರಾಸ್ ಎಗ್ಸಾಮಿನೇಷನ್ಗೆ (Cross-Examination) ನ್ಯಾಯಾಲಯ ದಿನಾಂಕ ನಿಗದಿಪಡಿಸಲಿದ್ದು, ನಿಗದಿತ ದಿನದಂದು ಆರೋಪಿಗಳ ಪರ ವಕೀಲರು ಪ್ರದೋಷ್ನ ಕ್ರಾಸ್ ಎಗ್ಸಾಮಿನೇಷನ್ ನಡೆಸಲಿದ್ದಾರೆ.
ಮತ್ತೊಂದೆಡೆ, ಎವಿಡೆನ್ಸ್ ಆಕ್ಟ್ ಸೆಕ್ಷನ್ 137 ಹಾಗೂ 138ರ ಅಡಿಯಲ್ಲಿ ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಇಂದು 59ನೇ ಸೆಷನ್ಸ್ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಲಿದೆ. ಮಾಫಿ ಸಾಕ್ಷಿ ಹೇಳಿಕೆ ನೀಡುವಾಗ ಪ್ರದೋಷ್ ಮರೆತಿದ್ದ ಮಾಹಿತಿಯನ್ನು ಮರುದಿನ ಮತ್ತೆ ದಾಖಲಿಸಿಕೊಳ್ಳಲಾಗಿತ್ತು. ಇದಕ್ಕೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರದೋಷ್ಗೆ ಯಾರೋ ಹಿಂಬದಿಯಿಂದ ಹೇಳಿಕೊಟ್ಟು ಈ ರೀತಿ ಮತ್ತೆ ಮತ್ತೆ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ಕೋರ್ಟ್ ರೆಕಾರ್ಡ್ ಮಾಡಬಾರದು ಮತ್ತು ಇದು ಭಾರತೀಯ ಸಾಕ್ಷ್ಯ ಕಾಯ್ದೆಯ (Evidence Act) ಉಲ್ಲಂಘನೆಯಾಗಿದೆ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಈ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಸೆಷನ್ಸ್ ಕೋರ್ಟ್ ಇಂದು ತನ್ನ ತೀರ್ಪು ನೀಡಲಿದೆ.

- Advertisement -spot_img

More articles

- Advertisement -spot_img

Latest article