No menu items!
27.4 C
Munich
Thursday, August 13, 2026

RSS ಹಾಡು ಹೇಳಿದ್ದಕ್ಕೆ ಕ್ಷಮೆ: ಇದು ಉಚ್ಛಾಟನೆ ಭಯವೇ ಎಂದ ಜೆಡಿಎಸ್!

Must read

RSS ಹಾಡು ಹೇಳಿದ್ದಕ್ಕೆ ಕ್ಷಮೆ: ಇದು ಉಚ್ಛಾಟನೆ ಭಯವೇ ಎಂದ ಜೆಡಿಎಸ್!

ಬೆಂಗಳೂರು:- ಸದನದಲ್ಲಿ RSS ಹಾಡು ಹೇಳಿ ರಾಷ್ಟ್ರದೆಲ್ಲೆ ಡಿಕೆ ಶಿವಕುಮಾರ್ ಸುದ್ದಿ ಆಗಿದ್ದಾರೆ. ಹೀಗಾಗಿ ಇಂದು ಕ್ಷಮೆ ಕೇಳಿದ್ದಾರೆ.

ಈ ವಿಚಾರವಾಗಿ ವ್ಯಂಗ್ಯ ಆಡಿರುವ ಜೆಡಿಎಸ್, ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಂತ ಕಾಲೆಳೆದಿದೆ

ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಸದನದಲ್ಲಿ ಹುಲಿ, ಹೈಕಮಾಂಡ್ ಮುಂದೆ ಇಲಿ.ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿ ಇಟಲಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ರಣಹೇಡಿ ಡಿಕೆಶಿ ಅಧಿಕಾರ ಉಳಿಸಿಕೊಳ್ಳಲು, ಉಚ್ಛಾಟನೆಯಿಂದ ಪಾರಾಗಲು ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ.

ನಾಯಕ ಸಮುದಾಯದ ಸಚಿವರನ್ನು ಏಕಾಏಕಿ ಮಂತ್ರಿಸ್ಥಾನದಿಂದ ವಜಾಗೊಳಿಸಲಾಗಿತ್ತು. ಅವರಿಗೆ ಕ್ಷಮೆಕೇಳುವ ಒಂದು ಅವಕಾಶವನ್ನು ಸಹ ಹೈಕಮಾಂಡ್ ನೀಡಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ದಲಿತರಿಗೊಂದು ನ್ಯಾಯ, ಬಲಾಢ್ಯರಿಗೊಂದು ನ್ಯಾಯ ಎಂದು ಟೀಕಿಸಿದೆ

- Advertisement -spot_img

More articles

- Advertisement -spot_img

Latest article